ಪರಿಚಯ: ಸಾಹಿತ್ಯಿಕ ಪ್ರತಿಭೆ- ಪಂಕಜಾ ಕೆ ಮುಡಿಪು

Upayuktha
0

ಶ್ರೀಮತಿ ಪಂಕಜ ಕೆ ಮುಡಿಪು- ಇವರು ಬಂಟ್ವಾಳ ತಾಲೂಕು ಕುರ್ನಾಡು ಗ್ರಾಮದ ನಿವಾಸಿ. ಅಂಚೆ ಇಲಾಖೆಯಲ್ಲಿ ಸುದೀರ್ಘ ಸೇವೆಯ ಬಳಿಕ ಅಸ್ಸಿಸ್ಟಂಟ್ ಪೋಸ್ಟ್ ಮಾಸ್ಟರ್ ಆಗಿಯೂ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ತಂದೆ-ತಾಯಿಯ ತುಂಬು ಪ್ರೋತ್ಸಾಹದಿಂದ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಿ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.

 

ಶ್ರೀಮತಿ ಪಂಕಜ ಬಾಲ್ಯದಲ್ಲಿಯೇ ಸಾಹಿತ್ಯದಲ್ಲಿ ತುಂಬು ಆಸಕ್ತಿಯಿದ್ದವರು. ಶಾಲಾ ಕಾಲೇಜಿನ ವಿದ್ಯಾಭ್ಯಾಸ, ಮನೆ ಮತ್ತು ಅಂಚೆ ಕಚೇರಿಯ ಕೆಲಸ, ಮದುವೆ, ಮಕ್ಕಳು ಎಂಬ ಸಾಂಸಾರಿಕ ಜೀವನದಲ್ಲಿ ಮುಳುಗಿದ್ದ ಇವರು ನಿವೃತ್ತಿಯ ನಂತರ ಪ್ರವೃತ್ತಿಯಾಗಿ ಸಾಹಿತ್ಯವನ್ನು ಅರಿಸಿಕೊಂಡು ಹಲವಾರು ಕಥೆ ಕವನ ಲೇಖನಗಳನ್ನು ನ್ಯಾನೋ ಕಥೆಗಳನ್ನು ಬರೆದಿದ್ದಾರೆ. ಇವರ ಕವನಗಳು ಮಂಜುವಾಣಿ, ವಿಕ್ರಮ, ಕೃಷಿ ಬಿಂಬ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟಗೊಂಡಿದೆ. ಸಾವಿರಕ್ಕೂ ಮಿಕ್ಕಿ ಕವನಗಳನ್ನು ಬರೆದಿರುವ ಇವರ ಮೊದಲ  ಕವನ ಸಂಕಲನ ಸಾವಿತ್ರಿ ಎಂಬ ಹೆಸರಿನಿಂದ 2019 ರಲ್ಲಿ ಬಿಡುಗಡೆಗೊಂಡಿತು. ಇತ್ತೀಚೆಗೆ ಇವರ ಲೇಖನ ಸಂಕಲನ ಗೊಂಚಲು ಕೃತಿ ಬಿಡುಗಡೆ ಗೊಂಡಿದ್ದು ಇವರು ಹಲವಾರು ವಾಟ್ಸಪ್ ಗ್ರೂಪ್ಗಳಲ್ಲಿ ಸಕ್ರಿಯವಾಗಿದ್ದು ಸ್ಪರ್ಧೆಗಳಲ್ಲಿ ಬಹುಮಾನಿತರಾಗಿರುತ್ತಾರೆ. ಅಂತರ್ಜಾಲ ಆಧಾರಿತ ಕಥಾ ರಚನೆ ಮತ್ತು ವಾಚನ ಸ್ಪರ್ಧೆಯಲ್ಲೂ ಭಾಗವಹಿಸಿ ಬಹುಮಾನಗಳನ್ನು ಪಡೆದುಕೊಂಡಿದ್ದಾರೆ. ಹಲವಾರು ಕವಿ ಗೋಷ್ಠಿಗಳಲ್ಲೂ ಭಾಗವಹಿಸಿ ಪ್ರಶಸ್ತಿ ಪತ್ರ ಪಡೆದುಕೊಂಡಿರುವ ಇವರು ಸೃಜನ ಶೀಲ ಕವಯಿತ್ರಿ ಎಂದು ಹೆಸರುವಾಸಿಯಾಗಿದ್ದಾರೆ  


ಸಾಹಿತ್ಯದಲ್ಲಿ ಆಗಾಧ ಆಸಕ್ತಿ ಹೊಂದಿರುವ ಶ್ರೀಮತಿ ಪಂಕಜ ಕನ್ನಡ ಸಾಹಿತ್ಯದ ಹಲವು ಪ್ರಕಾರಗಳನ್ನು  ಬರೆದು ಮೆಚ್ಚುಗೆ ಪಡೆದಿರುತ್ತಾರೆ. ಕಥೆ ಕವನಗಳನ್ನು ಅಲ್ಲದೆ ಇತ್ತೀಚಿಗೆ ಪ್ರವರ್ಧಮಾನಕ್ಕೆ ಬರುತ್ತಿರುವ ಜಪಾನಿ ಪ್ರಕಾರದ ಹಾಯ್ಕು, ಟಂಕಾ ಗಜಲ್, ಚುಟುಕು, ಜಾನಪದ ಗೀತೆ, ರುಬಾಯಿ, ಭಕ್ತಿಗೀತೆ, ಭಾವಗೀತೆ, ಷಟ್ಪದಿ, ಮುಕ್ತಕ  ದೇಶಭಕ್ತಿಗೀತೆ, ನ್ಯಾನೊ ಕಥೆಗಳು ಇತ್ಯಾದಿ ಹಲವು ಪ್ರಕಾರಗಳನ್ನು ಬರೆಯುತ್ತಿದ್ದು ಪ್ರಶಸ್ತಿಗಳ ಮಾಲೆಯನ್ನು ಮುಡಿಗೇರಿಸಿಕೊಂಡಿದ್ದಾರೆ.


ಗಾರ್ಡೆನಿಂಗ್, ಕಸೂತಿ, ಹೊಲಿಗೆ, ಕರಕುಶಲ ಕಲೆಗಳಲ್ಲಿಯೂ ಆಸಕ್ತಿ ಹೊಂದಿರುವ ಇವರು ಮನೆ ಸುತ್ತು ಮುತ್ತು  ಹೂವು, ಹಣ್ಣು, ತರಕಾರಿ ಗಿಡಗಳನ್ನು ಬೆಳೆಸಿರುತ್ತಾರೆ. ಎಲ್ಲಿ ಎಲ್ಲಾ ಗಿಡಗಳನ್ನು ನೆಡಬಹುದೋ ಅಲ್ಲೆಲ್ಲ ಕುಂಡಗಳಲ್ಲಿ ಗ್ರೋ ಬ್ಯಾಗ್‌ಗಳಲ್ಲಿ ಗಿಡಗಳನ್ನು ನೆಟ್ಟು ಬೆಳೆಸಿರುವ ಇವರ ಗಾರ್ಡನ್ ಒಂದು ಸಣ್ಣ ಉದ್ಯಾನವನದಂತೆ ಕಾಣುತ್ತದೆ. ಪ್ರಕೃತಿ ಪ್ರೇಮಿಯಾದ ಇವರ ಹೆಚ್ಚಿನ ಕವನಗಳು ಪ್ರಕೃತಿ ಪ್ರೀತಿ, ಕಾಳಜಿಯನ್ನು ಎತ್ತಿ ತೋರಿಸುತ್ತಿದ್ದು ಸರಳ ಸುಂದರವಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top