|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಭಾವ-ಬುತ್ತಿ: ಹಾರಲೇಕೆ ತಡ... ಹಕ್ಕಿಯೆ, ಒಂದು ಬಾರಿಯಾದರೂ...?

ಭಾವ-ಬುತ್ತಿ: ಹಾರಲೇಕೆ ತಡ... ಹಕ್ಕಿಯೆ, ಒಂದು ಬಾರಿಯಾದರೂ...?


(ಸಾಂದರ್ಭಿಕ ಚಿತ್ರ)


ಬಾನೆತ್ತರಕ್ಕೆ ಹಾರಲು ಯಾರಿಗೆ ಇಷ್ಟವಿಲ್ಲ ಹೇಳಿ? ಹಕ್ಕಿಯಂತೆ ಗರಿಬಿಚ್ಚಿ ಪುರ್ ಎಂದೂ ಆಕಾಶದೆತ್ತರಕ್ಕೆ ಹಾರಿ  ಜಗತ್ತನ್ನು ಒಂದು ಬಾರಿಯಾದರೂ ಸುತ್ತಾಡುವ ಆಸೆ ಸಹಜವಾಗಿ ಎಲ್ಲರಲ್ಲೂ ಇದ್ದೇ ಇರುತ್ತದೆ. ಯಾರ ಹಂಗಿಲ್ಲದೆ ರೆಕ್ಕೆ ಬಡಿಯುತ್ತಾ ಮೇಲೆತ್ತರಕ್ಕೆ ಹಾರಿ ಜಗದ ಕಣ ಕಣವನ್ನು ಸ್ಪರ್ಶಿಸಿ ಕಣ್ತುಂಬಿಕೊಳ್ಳುವ ತವಕ ಆಕೆಯದು.


ಆಕೆಯದ್ದು ಹೇಳಲಾಗದ ಸಂಕಟ. ಹುಟ್ಟಿನಿಂದ ಇಲ್ಲಿವರೆಗೂ ಬುತ್ತಿಯಂತೆ ಹೊತ್ತುಕೊಂಡು ಬಂದ ಅದೆಷ್ಟೋ ಕನಸುಗಳು. ಅವನ್ನು ನನಸು ಮಾಡುವ ಎಂದು ಹೊರಟರೆ ಈ ಸಮಾಜದ ಹಲವಾರು ಕಟ್ಟುಪಾಡುಗಳ ನಡುವೆ ಅವೆಲ್ಲವೂ ಕೇವಲ ಶೂನ್ಯವಾಗಿ ಬಾಸವಾಗುಗತ್ತದೆ. ಈ ಶ್ರೀಮಂತಿಕೆಯ ದರ್ಬಾರಿನ ಎದುರು ಆಕೆಯ ಬಡತನದ ಬದುಕಿಗೆ ಬೆಲೆಯೇ ಇಲ್ಲದಂತಾಗಿದೆ. ಹೇಳಿಕೇಳಿಯು ಪ್ರಶ್ನಿಸುವಂತಿಲ್ಲ ಈ ದೌರ್ಜನ್ಯವನ್ನು, ಅವರು ಹಾರುವುದನ್ನು ನೋಡಿ ಖುಷಿಪಡುವ ಮುಗ್ದ ಮಗುವಿನಂತಹ ಮನಸ್ಸದು, ಕಟ್ಟಿಕೊಂಡು ಬಂದ ಬುತ್ತಿಯ ತಿನಿಸು ಇವರೆದುರು ತಣಿಸಿಹೋಗಿದೆ ಹೊರತು ಸವಿಯಲು ಇನ್ನೂ ಸಾಧ್ಯವಾಗಿಲ್ಲ.


ಈ ಜಗತ್ತಿನಲ್ಲಿ ಅವಳೊಬ್ಬಳು ಮೂಕಪ್ರೇಕ್ಷಕಿಯೇ ಸರಿ, ಬೆಟ್ಟದಷ್ಟು ಆಸೆ, ಆಕಾಂಕ್ಷೆ, ಕುತೂಹಲವಿದ್ದರೂ ತೋರ್ಪಡಿಸುವಂತಿಲ್ಲ ಕೇವಲ ಊಹಿಸಿ ಖುಷಿಪಡಬೇಕು ಅಷ್ಟೇ. ಹೇಳಿ ಕೇಳಿಯು ತನ್ನ ಹಕ್ಕನ್ನು ಪ್ರಶ್ನಿಸುವಂತಿಲ್ಲ. ಎಲ್ಲಕ್ಕೂ ತಡೆ ಬೇಲಿ ಹಾಕಿ ನಿಲ್ಲಿಸುವ ಈ ಸಮಾಜದ ನೀತಿ-ನಿಯಮಗಳ ಮುಂದೆ ಯಾರಿಗೆ ಬೇಕು ಹೇಳಿ  ಆಕೆಯ ಪಾಡು. ಇದ್ದರೂ ಇಲ್ಲದಂತಹ ಕ್ಷಣಿಕ ಬದುಕು ಅವಳದ್ದು. ಎಲ್ಲ ತಿಳಿದಿದ್ದರೂ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನೋಡುವ ನ್ಯಾಯದೇವತೆಯ ಬದುಕಿನ ಹಾಗೆ.


ಆದರೆ ಅವಳಲ್ಲಿ ಭರವಸೆ ಇಂದಿಗೂ ಕುಂದಿಲ್ಲ. ಇವುಗಳೆಲ್ಲವನ್ನು ಎದುರಿಸಿ ಎಲ್ಲದರ ನಡುವೆ ಎಂದಾದರೂ ಎದ್ದು ನಿಂತೇ ನಿಲ್ಲುವೆ, ಯಾರ ಹಂಗಿಲ್ಲದೆ ಹೊಸ ಬದುಕು ಕಟ್ಟಿಕೊಳ್ಳುವ ಭರವಸೆ ಕ್ಷಣಕ್ಷಣಕ್ಕೂ ಮನದಾಳದಲ್ಲಿ ಚಿಗುರೊಡೆಯುತ್ತಲೇ ಇದೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಹೇಗೆ  ಪಂಜರದಲ್ಲಿ ಬಂದಿಯಾಗಿರುವ ಹಕ್ಕಿಗಳು ಹಾರಲು ಸಾಮರ್ಥ್ಯವಿದ್ದರೂ, ಬಣ್ಣಗಳಿಂದ ತುಂಬಿದ ರೆಕ್ಕೆ ಪುಕ್ಕಗಳಿದ್ದರು ಹಾರುವ ಅವಕಾಶ ಅವಕ್ಕಿಲ್ಲ. ಹಾತೊರೆಯುತ್ತಲೇ ಇರಬೇಕು ಕೈದಿಗಳಂತೆ, ಹೊರಜಗತ್ತನ್ನು ನೋಡಲು. ಬಿಡುಗಡೆ ದೊರೆತರೂ ಹಾರುವಂತಿಲ್ಲ ಮನಸ್ಸಿಗೆ  ಬಂದ ಹಾಗೆ ಕುಕ್ಕಲು ಕಾಯುತ್ತಿರುತ್ತದೆ ರಣಹದ್ದುಗಳು ಎಲ್ಲಿ ತನ್ನ ಬೇಟೆ ಎಂದು. ಈ ಭಯದಿಂದ ಮುದುರಿಕೊಂಡು ಕೂತಿರಬೇಕು ಪಂಜರದೊಳಗೆ.


ನಮ್ಮ ಈ ಸಮಾಜದಲ್ಲಿ ನಮ್ಮಲ್ಲಿ ಅಡಗಿರುವ ಭಾವನೆಗಳನ್ನು ವ್ಯಕ್ತಪಡಿಸಲು ಅವಕಾಶಗಳೇ ಇಲ್ಲದಂತಾಗಿದೆ ಯಾರದ್ದೋ ಕಾರುಬಾರು ಇವುಗಳ ನಡುವೆ ನಮ್ಮ ಬದುಕು ಇದ್ದರು ಕಾಣಸಿಗದ ಗುಬ್ಬಿಯ ಬದುಕಿನಂತೆ. ಆದರೆ ತಡಮಾಡದೆ ಇವುಗಳೆಲ್ಲವನ್ನು ಎದುರಿಸಿ, ಶ್ರಮಪಟ್ಟು ಹಾರಲೇಬೇಕು ಹಕ್ಕಿಯಂತೆ ಒಂದು ಬಾರಿಯಾದರೂ.


-ಸೋನಿಕಾ ಪಾಣೆಮಂಗಳೂರು

ವಿವೇಕಾನಂದ ಕಾಲೇಜು ಪುತ್ತೂರು



web counter

0 Comments

Post a Comment

Post a Comment (0)

Previous Post Next Post