ಪರಿಚಯ: ಬಹುಮುಖ ಪ್ರತಿಭೆಯ ಕಲಾವಿದ ವಿಷ್ಣು ಕಿರಣ್

Upayuktha
0


ಯಕ್ಷಗಾನವೆಂಬುದು ತುಳುನಾಡಿನ ಗಂಡುಕಲೆ. 'ಯಕ್ಷಗಾನ 'ಹಾಡುಗಾರಿಕೆ, ಮಾತುಗಾರಿಕೆಯ ವೇಷಭೂಷಣಗಳನ್ನೊಳಗೊಂಡ ಒಂದು ಸ್ವತಂತ್ರವಾದ "ಶಾಸ್ತ್ರೀಯ ಕಲೆ.  ಯಕ್ಷಗಾನದ ಪ್ರಮುಖ ಪ್ರಭೇದವಾದ ಬಯಲಾಟಗಳೇ ವೇಷಭೂಷಣಗಳಲ್ಲಿ ಪ್ರಮುಖವಾದದ್ದು. ಪಾತ್ರಗಳಿಗೆ ತಕ್ಕಂತೆ ವೇಷಭೂಷಣಗಳಿರುತ್ತವೆ. ತಮ್ಮನ್ನು ಪ್ರೀತಿಸುತ್ತಾ, ಪೋಷಿಸುತ್ತಾ ವಿದ್ಯಾರ್ಥಿ ಜೀವನದ ಜೊತೆಗೆ ರಂಗಸ್ಥಳಕ್ಕೆ ಕಾಲಿಟ್ಟ ಇವರೇ "ವಿಷ್ಣುಕಿರಣ್"


ತನ್ನ ಎಳೆಯ ವಯಸ್ಸಿನಲ್ಲಿ ಹಲವಾರು ಕನಸುಗಳ ಗೋಪುರವನ್ನು ಕಟ್ಟಿ ಕೊಂಡಂತಹ ಬಹುಮುಖ ಪ್ರತಿಭಾವಂತ ಕಲಿಕೆಯಲ್ಲೂ "ಸೈ" ಕಲೆಯಲ್ಲಿಯು "ಸೈ" ಕ್ರೀಡೆಯಲ್ಲಿಯೂ "ಸೈ"ಎನಿಸಿಕೊಂಡಿರುವ ಇವರು ಮೂಲತಹ ಕಾಸರಗೋಡಿನವರು.


ಶಂಕರನಾರಾಯಣ ಭಟ್ ಹಾಗೂ ವೀಣಾ ದಂಪತಿಗಳ ಪುತ್ರ ತಮ್ಮ ಪ್ರಾಥಮಿಕ ಶಿಕ್ಷಣ, ಪ್ರೌಢ ಶಿಕ್ಷಣ, ಹಾಗೇ ಪದವಿ ಪೂರ್ವ ಶಿಕ್ಷಣವನ್ನು ಶ್ರೀಅನ್ನಪೂರ್ಣೇಶ್ವರಿ ವಿದ್ಯಾಸಂಸ್ಥೆಯಲ್ಲಿ ಮುಗಿಸಿ, ಪ್ರಸ್ತುತ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ, ವಿವೇಕಾನಂದ ಮಹಾವಿದ್ಯಾಲಯದಲ್ಲಿ ಭೌತಶಾಸ್ತ್ರ ಹಾಗೂ ರಸಾಯನಶಾಸ್ತ್ರದಲ್ಲಿ  ಪದವಿ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಕಲೆಯ ಕುರಿತಾಗಿ ಅಪರಿಮಿತ ಒಲವನ್ನು ಇರಿಸಿಕೊಂಡಿರುವ ಇವರು ಮದ್ದಳೆ, ಹಾಗೇ ಜಿಲ್ಲಾಮಟ್ಟದ ಕ್ರೀಡಾ ಪ್ರತಿಭೆ ಕೂಡ ಹೌದು. ಹೀಗೆ ಅನೇಕ ಅಭ್ಯಾಸಗಳನ್ನು ರಕ್ತಗತವಾಗಿ ಬೆಳೆಸಿಕೊಂಡು ಬಂದಿದ್ದಾರೆ. ಕಾಸರಗೋಡಿನ ಹೆಸರಾಂತ ಗುರುಗಳಾದ "ಮಾಂಬಾಡಿ ಸುಬ್ರಹ್ಮಣ್ಯ ಭಟ್ "ಇವರ ಶಿಷ್ಯ ಕೂಡ ಹೌದು.


ಕಲೆಯೆಂಬುದು ಒಮ್ಮೆ ಒಲಿಸಿಕೊಂಡರೆ ಸಾಕು ಅದು ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ. ಯಾವುದೇ ಕಲೆಯನ್ನಾಗಲಿ ಕೀಳಾಗಿ ಕಾಣಬಾರದು. ಕಲೆಯನ್ನು ಒಲಿಸಿಕೊಳ್ಳಲು ಛಲ, ತಾಳ್ಮೆ, ಒಲವು ಅವಿರತ ಪರಿಶ್ರಮ ವಿರುತ್ತದೆ.


ಕಲೆಯ ಬಗ್ಗೆ ವಿವರ ಮನದಾಳದ ಮಾತೆಂದರೆ-

ಕಲ ದಾರಿಯಲ್ಲಿ ಸಾಗಿ ಇಷ್ಟೊಂದು ಮುಂದೆ ಬರಬೇಕಾದರೆ ಅದೆಷ್ಟೊ ಕಾಣದ ಕೈಗಳ ಪ್ರೋತ್ಸಾಹವಿದೆ ಎಂದು ಹೇಳುತ್ತಾರೆ ವಿಷ್ಣುಕಿರಣ್.


ಪೋಷಕರ ಶುಭನುಡಿ-

ನನ್ನ ಮಗ ತನ್ನನ್ನು ತಾನೇ ಕಲಾ ದಾರಿಯತ್ತ ತೊಡಗಿಸಿಕೊಂಡಿದ್ದಾನೆ, ಆತನ ಕನಸೆಲ್ಲ ನನಸಾಗಲಿ ನಮ್ಮ ಸಹಕಾರ ಸದಾ ಅವನಿಗಿರುತ್ತದೆ ಎಂದು ಆಶೀರ್ವದಿಸುತ್ತಾರೆ ಕಲಾವಿದನ ತಂದೆ "ಶಂಕರನಾರಾಯಣ ಭಟ್"


-ದೀಕ್ಷಿತ ಗಿರೀಶ್      

ಪತ್ರಿಕೋದ್ಯಮ ವಿದ್ಯಾರ್ಥಿನಿ                  

ವಿವೇಕಾನಂದ ಮಹಾವಿದ್ಯಾಲಯ ಪುತ್ತೂರು


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top