|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂತರಾಷ್ಟ್ರೀಯ ಯೋಗ ದಿನ- ಜೂನ್ 21: ಮನಸ್ಸು-ದೇಹದ ಆರೋಗ್ಯಕ್ಕೆ ಯೋಗ

ಅಂತರಾಷ್ಟ್ರೀಯ ಯೋಗ ದಿನ- ಜೂನ್ 21: ಮನಸ್ಸು-ದೇಹದ ಆರೋಗ್ಯಕ್ಕೆ ಯೋಗ



8ನೇ ವರ್ಷದ ವಿಶ್ವಯೋಗ ದಿನಾಚರಣೆ ಜೂನ್ 21. ಇಂದು ವಿಶ್ವದ ಎಲ್ಲಾ ಜನಾಂಗದವರನ್ನು ಭಾರತೀಯ ಸಂಸ್ಕೃತಿ ಕಲೆಯಾದ ಯೋಗವನ್ನು ಬಲವಾಗಿ ಆಕರ್ಷಿಸುತ್ತಾ ಇದೆ. ಯೋಗದಿಂದ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಸಹಕಾರಿಯಾಗುತ್ತದೆ. ಯೋಗವೆಂಬುದು ಜಗತ್ತಿಗೆ ಒಂದು ಭಾರತದ ದೊಡ್ಡ ಕೊಡುಗೆಯಾಗಿದೆ.


ಅಂತರಾಷ್ಟ್ರೀಯ ಯೋಗ ದಿನ ಯಾ ವಿಶ್ವ ಯೋಗ ದಿನವನ್ನು ಪ್ರತಿವರ್ಷ ಜೂನ್ 21ರಂದು ಆಚರಿಸಲಾಗುತ್ತದೆ.


ಯೋಗ ಎಂದರೆ ಏನು?

ಯೋಗವು ಮೂಲತಃ ಆಧ್ಯಾತ್ಮದ ಆಧಾರದಿಂದಿರುವ/ತಳಹದಿ ಹೊಂದಿರುವ ಒಂದು ಸೂಕ್ಷ್ಮವಾದ ವಿಜ್ಞಾನದ ಶಾಖೆಯಾಗಿದ್ದು ದೇಹ ಮತ್ತು ಮನಸ್ಸುಗಳ ಜೊತೆ ಹೊಂದಾಣಿಕೆಯನ್ನು ತರಲು ಬೆಳಕು ಹರಡುವಂತದ್ದು ಇದು ಆರೋಗ್ಯವಾಗಿ ಬಾಳಲು ಒಂದು ವಿಜ್ಞಾನ ಮತ್ತು ಕಲೆ.


ಯೋಗದ ಪ್ರಾಥಮಿಕಗಳು:

ಯೋಗವು ಮನುಷ್ಯನ ದೇಹ, ಮನಸ್ಸು, ಮನೋಭಾವ ಹಾಗೂ ಚೈತನ್ಯದ ಮಟ್ಟದ ಮೇಲೆ ಕೆಲಸ ನಿರ್ವಹಿಸುತ್ತದೆ. ಇದರಿಂದಾಗಿ ಯೋಗವು ಸ್ಥೂಲವಾಗಿ ನಾಲ್ಕು ವರ್ಗಗಳಾಗಿ ಅಭಿವೃದ್ಧಿಗೊಂಡವು, ಕರ್ಮಯೋಗದಲ್ಲಿ ದೇಹವನ್ನು ಜ್ಞಾನ ಯೋಗದಲ್ಲಿ ಮನಸ್ಸನ್ನು ಭಕ್ತಿಯೋಗದಲ್ಲಿ ಭಾವನಾತ್ಮಕ ಜೀವನವನ್ನು ಮನೋಭಾವವನ್ನು ಕ್ರಿಯಾಯೋಗದಲ್ಲಿ ದೇಹದ ಚೈತನ್ಯವನ್ನು ನಾವು ಉಪಯೋಗಿಸುತ್ತೇವೆ.  ಪ್ರತಿಯೊಂದು ಯೋಗ ಪದ್ಧತಿಯೂ ಈ ಮೇಲಿನ ಒಂದು ಅಥವಾ ಹೆಚ್ಚಿನ ವರ್ಗಗಳ ವ್ಯಾಪ್ತಿಯಲ್ಲಿಯೇ ಬರುತ್ತದೆ.

ವ್ಯಾಪಕವಾಗಿ ತೊಡಗಿಸಿಕೊಂಡಿರುವ ಯೋಗಸಾಧನಗಳು ಇಂತಿವೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪತ್ಯಾಹಾರ, ಧಾರಣ ಸಮಾಧಿ, ಬಂಧುಗಳು, ಹಾಗೂ ಮುದ್ರೆಗಳು, ಷಟ್ಕರ್ಮಗಳು, ಯುಕ್ತಾಹಾರ, ಮಂತ್ರಜಪ, ಯುಕ್ತ ಕರ್ಮ ಇತ್ಯಾದಿ.


ಯೋಗಾಭ್ಯಾಸಕ್ಕಾಗಿ ಸಾಮಾನ್ಯ ಮಾರ್ಗಸೂಚಿಗಳು:

ಯೋಗಾಭ್ಯಾಸಿಯು ಯೋಗ ಮಾಡುವಾಗ ಕೆಳಗೆ ಕೊಟ್ಟಂತಹ ಮಾರ್ಗದರ್ಶನದ ಮಹತ್ವಗಳನ್ನು ಪಾಲಿಸಬೇಕು.

ಯೋಗಾಭ್ಯಾಸದ ಮೊದಲು

1. “ಶೌಚ” ಎಂದರೆ ಶುಚಿತ್ವ, ಇದು ಯೋಗಾಭ್ಯಾಸಕ್ಕೆ ಪ್ರಮುಖ ಅವಶ್ಯಕತೆ, ಇದು ಪರಿಸರ, ದೇಹ ಮತ್ತು ಮನಸ್ಸನ್ನು ಒಳಗೊಂಡಿರುತ್ತದೆ.

2. ಯೋಗಾಭ್ಯಾಸವನ್ನು ಶಾಂತ ಹಾಗೂ ನಿಶ್ಯಬ್ದದ ವಾತಾವರಣದಲ್ಲಿ ವಿಶ್ರಾಂತಗೊಂಡ ದೇಹ ಮತ್ತು ಮನಸ್ಸಿನಿಂದ ಮಾಡಬೇಕು.

3. ಯೋಗಾಭ್ಯಾಸವನ್ನು ಖಾಲಿ ಯಾ ಹಗುರ ಹೊಟ್ಟೆಯಲ್ಲಿ ಮಾಡಬೇಕು.  ನಿಶ್ಯಕ್ತಿ ತೋರಿದಲ್ಲಿ ಸ್ವಲ್ಪ ಜೇನನ್ನು ಉಗುರು ಬಿಸಿ ನೀರಲ್ಲಿ ಸೇವಿಸಬಹುದು.

4. ಯೋಗಾಭ್ಯಾಸದ ಮೊದಲು ಮೂತ್ರಕೋಶ ಮತ್ತು ಮಲ ಖಾಲಿಯಾಗಿರಬೇಕು.  

5. ಚಾಪೆ, ಯೋಗದ ಚಾಪೆ, ಜಮಾಖಾನ ದಪ್ಪದ ಬಟ್ಟೆ ಅಥವಾ ಚಾದರ ಯಾ ಮಡಿಸಿದ ಮಲಗುವ ಬಟ್ಟೆಯ್ನನು ಯೋಗಾಭ್ಯಾಸಕ್ಕೆ ಉಪಯೋಗಿಸಿ.

6. ಹಗುರ ಹಾಗೂ ಹಿತಕರವಾದ ಹತ್ತಿಯ ಬಟ್ಟೆ ಅಪೇಕ್ಷಣೀಯ ಇದರಿಂದ ದೇಹದ ಚಾಲನೆ ಸುಲಭವಾಗುತ್ತದೆ.

7. ಆಯಾಸಗೊಂಡ ಪರಿಸ್ಥಿತಿ ಅಸೌಖ್ಯ ಅತಿ ಒತ್ತಡದಿಂದ ಬಳಲಿದ್ದಾಗ ಯೋಗ ಮಾಡಬಾರದು.

8. ದೀರ್ಘಕಾಲದಿಂದ ರೋಗ/ನೋವು/ಹೃದಯ ಸಂಬಂಧಿ ತೊಂದರೆಗಳಿದ್ದಲ್ಲಿ ಯೋಗಾಭ್ಯಾಸ ಆರಂಭಿಸುವ ಮೊದಲು ಸೂಕ್ತ ವೈದ್ಯರನ್ನು ಅಥವಾ ಯೋಗ ಥೆರಪಿಸ್ಟ್‍ರನ್ನು ಸಂದರ್ಶಿಸಿರಿ.

9. ಗರ್ಭವತಿಯಾದ ಮತ್ತು ಋತುಸ್ರಾವದ ಸಮಯದಲ್ಲಿ ಸ್ತ್ರೀಯರು ಯೋಗ ಮಾಡುವರೆ ಯೋಗ ತಜ್ಞರನ್ನು ಸಂಪರ್ಕಿಸಿಯೇ ಮಾಡಿರಿ.


ಯೋಗ ದಿನಾಚರಣೆ- ಯೋಗಾಭ್ಯಾಸದ ಪ್ರಯೋಜನಗಳು:

ಯೋಗ, ವ್ಯಾಯಾಮವನ್ನು ಮಾಡುವುದರಿಂದ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ನಮ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ದೇಹದ ತೂಕವನ್ನು ಸಹ ಕಡಿಮೆ ಮಾಡುತ್ತದೆ. ಯೋಗವನ್ನು ಅಭ್ಯಾಸ ಮಾದುವುದರಿಂದ ದೈಹಿಕ ಮತ್ತು ಮಾನಸಿಕ ಸ್ಥಿತಿಯ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ಸಹಾಯ ಮಾಡುತ್ತದೆ.

ಇದು ಮೂಲತಃ ದೇಹ ಮತ್ತು ಮನಸ್ಸಿನ ಸ್ವಾಸ್ಥ್ಯಕ್ಕೆ ಕಾರಣವಾಗುವ ಅಭ್ಯಾಸವಾಗಿದೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ದೇಹ,ಆತ್ಮ ಮತ್ತು ಮನಸ್ಸಿನ ನಡುವೆ ಸಮತೋಲನ ಬರುತ್ತದೆ. ಒತ್ತಡ, ದೈಹಿಕ ದೌಬರ್ಲ್ಯ ಮತ್ತು ಇತರ ಹಲವಾರು ಸಮಸ್ಯೆಗಳನ್ನು ಎದುರಿಸಲು ಯೋಗ ನಮಗೆ ಸಹಾಯ ಮಾಡುತ್ತದೆ. ಯೋಗದ ದೈನಂದಿನ ಅಭ್ಯಾಸವು ಆರೋಗ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳಿಂದ ದೂರವಿರಲು ನಮಗೆ ಸಹಾಯ ಮಾಡುತ್ತದೆ. ಯೋಗವು ಸ್ವಯಂ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ, ವೈಯಕ್ತಿಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸ್ವಯಂ ಪರಿವನ್ನು ಹೆಚ್ಚಿಸುತ್ತದೆ. ಯೋಗವು ಒತ್ತಡದ ಮಟ್ಟ, ನಕಾತಾತ್ಮಕ ಆಲೋಚನೆಗಳು ಮತ್ತು ದೇಹದಿಂದ ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಯೋಗ ಅಧಿವೇಶನದ ನಂತರ, ಒಬ್ಬರು ಪುನರ್ ಯೌವನಗೊಂಡರು ಮತ್ತು ಚೈತನ್ಯವನ್ನು ಅನುಭವಿಸುತ್ತಾರೆ. ಯೋಗವನ್ನು ಅಭ್ಯಾಸ ಮಾಡುವುದರಿಂದ ಮನಸ್ಸಿನ ಸ್ನಾಯುಗಳು ಬಲಗೊಳ್ಳುತ್ತವೆ ಮತ್ತು ವಿಭಿನ್ನ ಸಮಸ್ಯೆಗಳನ್ನು ಎದುರಿಸಲು ಶಕ್ತಿಯನ್ನು ನೀಡುತ್ತದೆ. ಯೋಗಾಭ್ಯಾಸವು ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ವಿಶ್ವದಾದ್ಯಂತ ಜೂನ್ 21 ರಂದು ಅಭ್ಯಾಸ ಮಾಡುವ ಪ್ರಮುಖ ಯೋಗಗಳು: 

ಆರಂಭದಲ್ಲಿ ಪ್ರಾರ್ಥನೆ, ನಿಂತುಕೊಂಡು ಕುತ್ತಿಗೆಗೆ ವ್ಯಾಯಾಮ, ಭುಜಗಳಿಗೆ ವ್ಯಾಯಾಮ ಸೊಂಟಕ್ಕೆ ವ್ಯಾಯಾಮ (ತಿರುಚುವಿಕೆ) ಮತ್ತು ಮೊಣಕಾಲುಗಳಿಗೆ ವ್ಯಾಯಾಮಗಳು. 

ಆಯ್ದ ಆಸನಗಳ ಪಟ್ಟಿ: ನಿಂತುಕೊಂಡು (ಆಸನಗಳು):- ತಾಡಾಸನ, ವೃಕ್ಷಾಸನ, ಪಾದ ಹಸ್ತಾಸನ, ಅರ್ಧ ಚಕ್ರಾಸನ, ತ್ರಿಕೋಣಾಸನ. 

ಕುಳಿತುಕೊಂಡು ಮಾಡುವ ಆಸನಗಳು:- ದಂಡಾಸನ, ಬದ್ಧಕೋಣಾಸನ, (ಭದ್ರಾಸನ), ವಜ್ರಾಸನ, ಅರ್ಧ ಉಷ್ಮಾಸನ, ಶಶಾಂಕಾಸನ, ಮಂಡೂಕಾಸನ, ವಕ್ರಾಸನ. 

ಹೊಟ್ಟೆಯ ಆಧಾರದಲ್ಲಿ ಮಾಡುವ ಆಸನಗಳು:- ಮಕರಾಸನ, ಭುಜಾಂಗಾಸನ, ಶಲಭಾಸನ.

ಬೆನ್ನಿನ ಆಧಾರದಲ್ಲಿ ಅಭ್ಯಾಸ ಮಾಡುವ ಆಸನಗಳು:- ಸೇತು ಬಂಧ ಸರ್ವಾಂಗಾಸನ, ಪವನಮುಕ್ತಾಸನ, ಶವಾಸನ. 

ಆಮೇಲೆ ಕಪಾಲಭತಿ, ನಾಡೀಶುದ್ಧಿ ಪ್ರಾಣಾಯಾಮ, ಭ್ರಮರೀ ಪ್ರಾಣಾಯಾಮ, ಶೀತಲೀ ಪ್ರಾಣಾಯಾಮ ಹಾಗೂ ಉಸಿರನ್ನು ಗಮನಿಸುವ ಧ್ಯಾನ (ಬೆನ್ಮುದ್ರೆಯಲ್ಲಿ). 

ಶಾಂತಿ ಮಂತ್ರದೊಂದಿಗೆ ಸಮಾಪನಗೊಳ್ಳುತ್ತದೆ. (ಸುಮಾರು ಒಟ್ಟು 45 ನಿಮಿಷದ ಒಳಗಿನ ಯೋಗವಾಗಿದೆ.)


- ಗೋಪಾಲಕೃಷ್ಣ ದೇಲಂಪಾಡಿ

ನಿವೃತ್ತ ಸೀನಿಯರ್ ಹೆಲ್ತ್ ಇನ್ಸ್‍ಪೆಕ್ಟರ್, ‘ಪಾರಿಜಾತ’,

ಮನೆ ಸಂಖ್ಯೆ 2/72.5, ಬಿಷಪ್ ಕಂಪೌಂಡು, ಯೆಯ್ಯಾಡಿ ಪದವು, ಕೊಂಚಾಡಿ ಪೋಸ್ಟ್, 

ಮಂಗಳೂರು – 575 008, ಮೊಬೈಲ್: 9448394987


web counter

0 تعليقات

إرسال تعليق

Post a Comment (0)

أحدث أقدم