
ನೀ ನನಗಿದ್ದರೆ ನಾ ನಿನಗೆ..
ಇದು ಹೊಂದಾಣಿಕೆ...
ನೀ ನನಗಿದ್ದರೇ ನಾ ನಿನಗೆ..
ಇದು ವ್ಯವಹಾರ...
ನಾ ನಿನಗಿದ್ದರೆ ನೀ ನನಗೆ..
ಇದು ವಾಸ್ತವ...
ನಾ ನಿನಗಿದ್ದರೇ ನೀ ನನಗೆ..
ಇದು ಲೆಕ್ಕಾಚಾರ...
ನಾ ನಿನಗಿರದಿದ್ದರೂ ನೀ ನನಗೆ..
ಇದು ಸ್ವಾರ್ಥ...
ನೀ ನನಗಿರದಿದ್ದರೂ ನಾ ನಿನಗೆ..
ಇದು ನಿಷ್ಕಲ್ಮಶ ಪ್ರೀತಿ...
ನಾನು ನೀನೆಂಬುದ ಕಳೆದು ನಾವೆಂದರೆ
ಅದು ನಿತ್ಯ ಸತ್ಯ....
************
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ