
ಅಹಂಕಾರ ಪಡಬೇಡವೋ ಮಾನವ
ನೀನು ನಿನ್ನದೆಯೆಲ್ಲಾ ಜಂಭ
ಪಡಬೇಡವೋ ಮಾನವ
ನಿನ್ನ ಬದುಕಿನ ಮೇಲೆ ನಿನಗೆ
ಗಮನವಿಲ್ಲದೆ
ಹಣವಿದ್ದರೂ ಬೇರೆಯವರ ಹಾದಿಗೆ
ಕೈ ಚಾಚಿದೆ
ಆದರೂ ನಿನ್ನ ಬುದ್ಧಿ ತಿಳಿಯದೇ
ಮುಂದೆ ಸಾಗಿದೆ
ಹೊಟ್ಟೆ ಕಿಚ್ಚಿನಿಂದ ಬದುಕುತ್ತಿರುವ ನೀನು
ಬೇರೆಯವರ ಬದುಕಿಗೆ ಮುಳ್ಳಾದೆ ನೀನು
ಹಿಂದೆ ಮುಂದೆ ಯೋಚಿಸದೆ ಮಾಡಿದೆ
ನೀ ಪಾಪ
ಬದುಕುವ ಜನರಿಗೆ ಬರಿಸಿದೆ ನೀ ಕೋಪ
ಕಷ್ಟ ಸುಖವೋ ಮುಂದೆ ಸಾಗುವೆ
ಗುರಿಯನ್ನು ತಲುಪೆ ತಲುಪುವೆ
ಹಣೆಬರಹವನ್ನು ಗೀಚಿದ ಬ್ರಹ್ಮ
ಬಾಲ್ಯದಿಂದಲೇ ಸಾಕುವ ಅಮ್ಮ
ದೂರ ಮಾಡಲಾರರು ದೇವರು
ನನ್ನ ಕೈ ಯಾವತ್ತು ಬಿಡಲಾರರು
ಇಂದಿನ ಕಾಲದ ಜನರು
ಅಹಂಕಾರದ ಹಾದಿಗೆ ಬಿದ್ದಿದ್ದಾರೆ
ನಮ್ಮವರೇ ನಮ್ಮನ್ನು
ನೋಯಿಸುತ್ತಿದ್ದಾರೆ
ಬೆನ್ನ ಹಿಂದೆ ಮಾತಾನಾಡುವವರು
ಹೆಚ್ಚಾಗಿ ಹೋಗಿದ್ದಾರೆ
ಆದರೆ
ನಮಗೆ ಏನೂ ಗೊತ್ತಿಲ್ಲದ ರೀತಿಯಲ್ಲಿ
ನಟಿಸುತ್ತಿದ್ದಾರೆ
ಪಾಪ ಮಾಡಿದರೆ ಖುಷಿಯಿಂದ
ಸಂತೋಷದಿಂದ
ಒಳ್ಳೆಯ ರೀತಿಯಿಂದ
ಬಾಳಬಹುದು ಎಂದು
ಯೋಚಿಸುತ್ತಿದ್ದಾರೆ
ಆದರೆ ಅವರ ಬುದ್ಧಿ
ಅವರಿಗೆ ಅರಿಯದೆ ಇನ್ನೂ
ಬದುಕುತ್ತಿದ್ದಾರೆ
ಕಹಿಯಾದರೆ ಸಿಹಿ ಸೇವಿಸುವೆ
ಖಾರವಾದರೆ ನೀರು ಕುಡಿಯುವೆ
ನಗು ಬಂದರೆ ಎಲ್ಲರನ್ನು ನಗಿಸುವೆ
ದುಃಖವಾದರೆ ಮನದಲ್ಲಿ
ನೊಂದುಕೊಳ್ಳುವೆ
ಅತ್ತರೆ ಕಣ್ಣೀರು ಒರೆಸಿಕೊಳ್ಳುವೆ
ಆದರೆ
ಅಹಂಕಾರ ಪಡುತ್ತಿರುವ ಮಾನವನಿಗೆ ಕಾಲವೇ ಉತ್ತರ ನೀಡುತ್ತವೆ...
-ರಮ್ಯ ಎಮ್ ಶ್ರೀನಿವಾಸ್
ವಿವೇಕಾನಂದ ಕಾಲೇಜ್ ಪುತ್ತೂರು