|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕವನ: ನಿಸರ್ಗ ಸ್ವರ್ಗ

ಕವನ: ನಿಸರ್ಗ ಸ್ವರ್ಗ



ಮಾನವನು ಪರಿಸರದ ಶಿಶುವೆಂಬ ಮಾತುಂಟು/

ಕಾನನವ ನೋಡೊಮ್ಮೆ ಎಷ್ಟು ಚೆಲುವು

ಹಾನಿ ಮಾಡಲು ಬೇಡಿ ಪಚ್ಚೆಯಾ ಸಂಪದವ

ಮಾನಸಕೆ ಹರ್ಷವೇ ಕಾಡ ಹೂವು.


ಹರಿಯುವಾ ಹೊಳೆಯನ್ನು ಭೋರ್ಗರೆವ ಜಲಪಾತ

ತೊರೆಯನ್ನು ನೋಡುತ್ತ ತಲ್ಲೀನವೆ

ಕರೆಯುವಾ ಹಕ್ಕಿಗಳ ಗಾಯನವ ಕೇಳುತ್ತ

ತೊರೆ ನೀನು ಜಡತೆಯನು,ಆನಂದವೆ.




ನೀಲ ಬಣ್ಣದ ಕಡಲ ತೆರೆಯೆಲ್ಲ ಮೊರೆಯುವಾ

ಆಳದಾ ಶರಧಿಯನು ನೋಡು ನೀನು

ಗಾಳವನು ಇಳಿಸುತ್ತ ಗೈಯುವಾ ಬೆಸ್ತರೇ

ಆಳುಗಳು,ಕಲಿಗಳೇ ಅಲ್ಲವೇನು.


ಹಸಿರಲ್ಲಿ ಚೆಲುವೆಲ್ಲ ಒಟ್ಟಾಗಿ ಮೇಳೈಸಿ

ಉಸಿರನ್ನು ನೀಡುತಿವೆ ಜೀವಿಗಳಿಗೆ

ಕೆಸರಲ್ಲಿ ಕಮಲಗಳು ಚೆನ್ನಾಗಿ ಕಾಣಿಸುತ

ಹಸನಾದ ನೋಟವೇ ಕಣ್ಮನಸಿಗೆ.


-ಗುಣಾಜೆ ರಾಮಚಂದ್ರ ಭಟ್

ಕವನ ಸದನ

೩೧.೫.೨೦೨೨.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

0 تعليقات

إرسال تعليق

Post a Comment (0)

أحدث أقدم