ಮಂಗಳೂರು ವಿವಿ ಪ್ರಸಾರಾಂಗ: ಸಾಹಿತ್ಯ ಮಂಗಳ ಪಠ್ಯ ಬಿಡುಗಡೆ

Upayuktha
0

ಮಂಗಳಗಂಗೋತ್ರಿ: ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ಮಂಗಳ ಪಠ್ಯ ಪುಸ್ತಕ ಮಾಲಿಕೆಯಡಿ ಪ್ರಕಟಿಸಿರುವ ಪ್ರಥಮ ಬಿ ಎ ದ್ವಿತೀಯ ಸೆಮಿಸ್ಟರ್ ನ ಕನ್ನಡ ಐಚ್ಛಿಕ ಪಠ್ಯ ಸಾಹಿತ್ಯ ಮಂಗಳ-2 ಕೃತಿಯನ್ನು ವಿಶ್ವವಿದ್ಯಾಲಯದ ಸಿಂಡಿಕೇಟ್ ಸಭಾಂಗಣದಲ್ಲಿ ಶುಕ್ರವಾರ ಕುಲಪತಿ ಪ್ರೊ. ಪಿ ಯಸ್ ಯಡಪಡಿತ್ತಾಯ ಇವರು ಬಿಡುಗಡೆಗೊಳಿಸಿದರು.


ಬಿಡುಗಡೆಗೊಳಿಸಿ ಮಾತನಾಡಿದ ಅವರು ರಾಷ್ಟ್ರ ಕವಿ ಕುವೆಂಪು ಅವರ ಆಶಯದಂತೆ ಮೌಲಿಕ ಕೃತಿಗಳ ಪ್ರಕಟಣೆಗಾಗಿ ವಿಶ್ವವಿದ್ಯಾಲಯಗಳಲ್ಲಿ ಪ್ರಸಾರಾಂಗವು ಜನ್ಮ ತಾಳಿತು. ಮಂಗಳೂರು ವಿಶ್ವವಿದ್ಯಾನಿಲಯದ ದಶಮಾನೋತ್ಸವ ಸಂದರ್ಭದಲ್ಲಿ ಆರಂಭಗೊಂಡ ಇಲ್ಲಿನ ಪ್ರಸಾರಾಂಗವು ಪಠ್ಯ ಪುಸ್ತಕ ಮತ್ತು ಇತರ ಮಹತ್ವದ ಕೃತಿಗಳನ್ನು ಪ್ರಕಟಿಸುವುದರ ಮೂಲಕ ಕುವೆಂಪು ಆಶಯವನ್ನು ಸಾಕಾರಗೊಳಿಸುತ್ತದೆ ಎಂದರು.


ಮಂಗಳೂರು ವಿವಿಯ ಕುಲಸಚಿವರಾದ ಪ್ರೊ. ಕಿಶೋರ್ ಕುಮಾರ್ ಸಿ ಕೆ ಮಾತನಾಡಿ ಪ್ರಸಾರಾಂಗವು ಸೂಕ್ತ ಸಮಯದಲ್ಲಿ ಗೊಂದಲಗಳಿಲ್ಲದೆ ಪಠ್ಯ ಪುಸ್ತಕಗಳನ್ನು ಪ್ರಕಟಿಸುತ್ತಿರುವುದು ಶ್ಲಾಘನೀಯ ಎಂದರು. ಸಮಾರಂಭದಲ್ಲಿ ಪ್ರಸಾರಾಂಗದ ನಿರ್ದೇಶಕರೂ ಪಠ್ಯ ಪುಸ್ತಕದ ಪ್ರಧಾನ ಸಂಪಾದಕರೂ ಆದ ಪ್ರೊ. ಸೋಮಣ್ಣ ಹೊಂಗಳ್ಳಿ, ಸಹಾಯಕ ನಿರ್ದೇಶಕ ಡಾ. ಧನಂಜಯ ಕುಂಬ್ಳೆ, ಕಾರ್ಯ ನಿರ್ವಾಹಕ ಸಂಪಾದಕ ಡಾ. ಮಾಧವ ಎಂ ಕೆ, ಪ್ರಾಧ್ಯಾಪಕ ಪ್ರೊ. ಪ್ರಶಾಂತ್ ನಾಯ್ಕ್, ಪ್ರಸಾರಾಂಗದ ಭರತ್ ಮತ್ತು ಜೆಸ್ಸಿ ಡಿಸೋಜ, ಕನ್ನಡ ವಿಭಾಗದ ಚಂದ್ರಶೇಖರ್ ಎಂ ಬಿ ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top