ತೋರು ಬೆರಳು ಹಿಡಿದು ಕೊಂಡು
ದಾರಿ ತೋರಿ ನಡೆಸುತಿದ್ದು
ಬಾರಿಯಾದ ಬದುಕಿಗೊಂದು ಕನಸ ಹೆಣೆದನು
ಬಾರದಂತೆ ನೋವುಗಳನು
ತೋರದಂತೆ ಕಷ್ಟಗಳನು
ಮಾರನಂತೆ ನಡೆದುಕೊಂಡು ಸಾಕಿ ಸಲಹಿದ
ಕೈಯ ಹಿಡಿದು ನಡೆಸುತ್ತಿದ್ದು
ಮೈಯ ಸವರಿ ಮುದ್ದು ಮಾಡಿ
ಬಾಯಿ ತುಂಬ ನಗೆಯ ತೋರಿ ಹರಸುತಿರುವನು
ತಾಯಿ ಮಮತೆಯನ್ನು ಕೊಟ್ಟು
ಕಾಯುತಿರುತ ಮಕ್ಕಳನ್ನು
ಕಾಯ ಸವೆಸಿ ತನ್ನೊಡಲಿನ ಕುಡಿಯ ಸಲಹುವ
ಅಪ್ಪನೆಂಬ ಮರವುಯಿರಲು
ತಪ್ಪದಂತೆ ದಾರಿಯನ್ನು
ತೆಪ್ಪದಂತೆ ಬಾಳ ನೌಕೆ ದಡವ ಸೇರಿತು
ಒಪ್ಪನಡೆಯ ಕಲಿಸುತಿದ್ದು
ಸಪ್ಪೆಯಾಗದಂತೆ ಕಲೆತು
ತಪ್ಪುಗಳನು ತಿದ್ದಿ ತೀಡಿ ಯಶವ ಕಂಡನು
(ಭೋಗ ಷಟ್ಪದಿ)
-ಪಂಕಜಾ.ಕೆ. ಮುಡಿಪು