ಕರ್ನಾಟಕ ರಾಜ್ಯ ಮುಕ್ತ ವಿ.ವಿ.ಯ ಆಳ್ವಾಸ್ ದೂರಶಿಕ್ಷಣ ಕೇಂದ್ರದಿಂದ ವಿವಿಧ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ

Upayuktha
0



ಮೂಡುಬಿದಿರೆ: ಕರ್ನಾಟಕದಲ್ಲಿ ದೂರಶಿಕ್ಷಣಕ್ಕೆ ಯುಜಿಸಿಯಿಂದ ಮಾನ್ಯತೆ ಪಡೆದ ಏಕೈಕ ವಿಶ್ವವಿದ್ಯಾನಿಲಯ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆಳ್ವಾಸ್ ದೂರಶಿಕ್ಷಣ ಕಲಿಕಾರ್ಥಿ ಸಹಾಯ ಕೇಂದ್ರದಿಂದ  ದೂರ ಶಿಕ್ಷಣದ ವಿವಿಧ ಕೋರ್ಸ್‍ಗಳ ದಾಖಲಾತಿಗೆ ಅರ್ಜಿ ಆಹ್ವಾನಿಸಿದೆ. ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಗಳಿಗೆ ಅರ್ಹ ಅಭ್ಯರ್ಥಿಗಳು ಆಳ್ವಾಸ್ ಪದವಿ ಕಾಲೇಜಿನಲ್ಲಿರುವ ದೂರ ಶಿಕ್ಷಣ ಕೇಂದ್ರದ ಮೂಲಕ ನೋಂದಾವಣಿ ಮಾಡಬಹುದಾಗಿದೆ.


ಪದವಿಯಲ್ಲಿ ಬಿ.ಎ., ಬಿ.ಕಾಂ, ಬಿ.ಎಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಲಿಬ್. ಸ್ನಾತಕೋತ್ತರ ಪದವಿಯಲ್ಲಿ ಎಂ.ಎ, ಎಂ.ಕಾಂ, ಎಂ.ಎಸ್ಸಿ, ಎಂ.ಬಿ.ಎ, ಎಂ.ಲಿಬ್, ಒಂದು ವರ್ಷ ಡಿಪ್ಲೋಮಾ ಕನ್ನಡ, ಪತ್ರಿಕೋದ್ಯಮ, ನ್ಯೂಟ್ರಿಷನ್ ಅಂಡ್ ಹೆಲ್ತ್ ಎಜುಕೇಷನ್, ಇನ್ಫೋ ಟೆಕ್ನಾಲಜಿ ಕಂಪ್ಯೂಟರ್ ಅಪ್ಲಿಕೇಶನ್, 6 ತಿಂಗಳ ಸರ್ಟಿಫಿಕೇಟ್ ಕೋರ್ಸ್ ಸಿ.ಪಿ.ಆರ್. (ಪಂಚಾಯತ್ ರಾಜ್), ಫುಡ್ ಅಂಡ್ ನ್ಯೂಟ್ರಿಷನ್, ಕಮ್ಯುನಿಕೇಷನ್ ಟೆಕ್ನಾಲಜಿ, 6 ತಿಂಗಳ ಪಿ.ಜಿ. ಸರ್ಟಿಫಿಕೇಟ್ ಕೋರ್ಸ್ (ಪಿ.ಜಿ.ಸಿ) ಪಿಜಿಸಿ ಇಂಗ್ಲಿಷ್ ಕಮ್ಯೂನಿಕೇಟಿವ್ ಇಂಗ್ಲಿಷ್, ಮಾರ್ಕೇಟಿಂಗ್ ಮೆನೆಜ್‍ಮೆಂಟ್, ಎಚ್. ಆರ್. ಮ್ಯಾನೇಜ್ಮೆಂಟ್, ಬಿಸಿನೆಸ್ ಅಡ್ಮಿನಿಸ್ಟ್ರೇಷನ್, ಫೈನಾನ್ಸ್ ಮೆನೆಜ್‍ಮೆಂಟ್, ನ್ಯೂಟ್ರಿಷನ್ & ಡಯೆಟಿಸ್, ಜರ್ನಲಿಸಂ & ಮಾಸ್ ಕಮ್ಯುನಿಕೇಷನ್, ಕುವೆಂಪು ಸಾಹಿತ್ಯ, ಬಿಸಿನೆಸ್ ಲಾ, ಕಂಪ್ಯೂಟರ್ ಅಪ್ಲಿಕೇಶನ್  ಹಾಗೂ ಇನ್ನಿತರ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.


ಬಿಪಿಎಲ್ ಕಾರ್ಡ್ ಇರುವ ಮಹಿಳಾ ಕಲಿಕಾರ್ಥಿಗಳಿಗೆ ಹಾಗೂ ಡಿಫೆನ್ಸ್/ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಪ್ರವೇಶಾತಿ ಶುಲ್ಕದಲ್ಲಿ ವಿಶೇಷ ರಿಯಾಯಿತಿ ಹಾಗೂ ಕೋವಿಡ್‍ನಿಂದ ಮರಣ ಹೊಂದಿದ ಪೋಷಕರ ಮಕ್ಕಳಿಗೆ, ಟ್ರಾನ್ಸ್‍ಜೆಂಡರ್/ ತೃತೀಯ ಲಿಂಗಗಳಿಗೆ, ದೃಷ್ಠಿ ಹೀನ ವಿದ್ಯಾರ್ಥಿಗಳಿಗೆ (ಬಿಎಡ್ ಮತ್ತು ಎಂಬಿಎ ಹೊರತು ಪಡಿಸಿ) ಪೂರ್ಣ ಶುಲ್ಕ ವಿನಾಯಿತಿ ಹಾಗೂ ಆಟೋ/ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ 30% ರಿಯಾಯಿತಿ ಇರುತ್ತದೆ. 


ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ

ಎರಡು ಶೈಕ್ಷಣಿಕ ಕಾರ್ಯಕ್ರಮಗಳನ್ನು (ಕೋರ್ಸುಗಳನ್ನು) ಏಕಕಾಲದಲ್ಲಿ ಓದಲು ಅವಕಾಶವಿದ್ದು, ಒಂದು ಭೌತಿಕ ಕ್ರಮದಲ್ಲಿ ಮತ್ತೊಂದು ದೂರ ಶಿಕ್ಷಣ ಕ್ರಮದಲ್ಲಿ ಡಿಗ್ರಿಯನ್ನು ಪಡೆಯಬಹುದಾಗಿದೆ. 

ಆಸಕ್ತರು 7090715010, 9591546202 ದೂರವಾಣಿ ಸಂಖ್ಯೆ ಮೂಲಕ ಅಥವಾ ಆಳ್ವಾಸ್ ಪದವಿ ಕಾಲೇಜು ಕಟ್ಟಡದಲ್ಲಿರುವ ಆಳ್ವಾಸ್ ಕಲಿಕಾರ್ಥಿ ಸಹಾಯ ಕೇಂದ್ರವನ್ನು ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ Email: administration@alvas.org ಸಂಪರ್ಕಿಸಬಹುದು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top