|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಂಬಿಕಾ ಪದವಿ ಕಾಲೇಜಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಕೋಚಿಂಗ್ ತರಗತಿ ಉದ್ಘಾಟನೆ

ಅಂಬಿಕಾ ಪದವಿ ಕಾಲೇಜಿನಲ್ಲಿ ಸರ್ಕಾರಿ ಉದ್ಯೋಗಕ್ಕೆ ಕೋಚಿಂಗ್ ತರಗತಿ ಉದ್ಘಾಟನೆ

ವಿದೇಶೀಯರು ಭಾರತದ ಉದ್ಯೋಗಕ್ಕಾಗಿ ಹಂಬಲಿಸುವಂತಾಗಬೇಕು: ಸುಬ್ರಹ್ಮಣ್ಯ ನಟ್ಟೋಜ



ಪುತ್ತೂರು: ಇಂದು ಅಸಂಖ್ಯಾತ ಮಂದಿ ವಿದೇಶಗಳಿಗೆ ತೆರಳಿ ಅಲ್ಲಿನ ಪ್ರಭುತ್ವದಡಿ ಕೆಲಸ ಮಾಡುತ್ತಿದ್ದಾರೆ. ಆದರೆ ವಿದೇಶೀಯರು ಭಾರತಕ್ಕೆ ಬಂದು ಇಲ್ಲಿ ಉದ್ಯೋಗ ಕಂಡುಕೊಳ್ಳುವುದಕ್ಕೆ ಹಂಬಲಿಸುವಂತಹ ದಿನಗಳನ್ನು ನಾವು ಸೃಷ್ಟಿ ಮಾಡಬೇಕಿದೆ. ನಮ್ಮ ದೇಶದಲ್ಲಿ ಅತ್ಯಂತ ಉತ್ಕøಷ್ಟವಾದ ವಾತಾವರಣ, ಸಂಪನ್ಮೂಲಗಳಿವೆ. ಪ್ರಪಂಚದ ಗುಣಗಳ ತವರೂರು ನಮ್ಮ ಭಾರತ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು ಎಂದು ಅಂಬಿಕಾ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.


ಅವರು ನಗರದ ನಟ್ಟೋಜ ಪೌಂಢೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯ ಅಂಬಿಕಾ ಮಹಾವಿದ್ಯಾಲಯದ ತರಬೇತಿ ಮತ್ತು ಉದ್ಯೋಗ ಘಟಕದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರಿ ಉದ್ಯೋಗಗಳಿಗೆ ನಡೆಸಲಾಗುವ ಕೋಚಿಂಗ್ ತರಗತಿಗಳನ್ನು ಉದ್ಘಾಟಿಸಿ ಶನಿವಾರ ಮಾತನಾಡಿದರು.


ಭಾರತವು ಸ್ವಾಭಿಮಾನ ಸಂಸ್ಕಾರಗಳನ್ನು ಹೊಂದಿದ ರಾಷ್ಟ್ರ. ಹಾಗಾಗಿ ಇಲ್ಲಿಯ ಜನರು ಕೀಳರಿಮೆಯನ್ನು ಬದಿಗಿಟ್ಟು ವ್ಯಕ್ತಿತ್ವವನ್ನು ರೂಪಿಸಬೇಕು. ಸಂಸ್ಕøತಿ, ಶೌರ್ಯ, ಯೋಗ್ಯತೆಗೆ ಹೆಸರಾಗಿರುವ ಈ ದೇಶದಲ್ಲಿ ವಿಪುಲ ಉದ್ಯೋಗವಕಾಶಗಳನ್ನು ಸೃಷ್ಟಿಸಬೇಕು. ತನ್ಮೂಲಕ ‘ಭಾರತದಯುಗ' ಆರಂಭವಾಗಬೇಕು ಎಂದರಲ್ಲದೆ ನಾವು ಮಾಡುವ ಉದ್ಯೋಗದಲ್ಲಿ ಸೇವೆಯನ್ನು ಲಕ್ಷ್ಯವಾಗಿರಿಸಿಕೊಳ್ಳಬೇಕೇ ವಿನಃ ಆದಾಯವನ್ನಲ್ಲ. ಭ್ರಷ್ಟ ವ್ಯವಸ್ಥೆಯನ್ನು ಮೀರಿ ನಿಂತು ದೇಶಕ್ಕಾಗಿ ತಮ್ಮನ್ನು ಅರ್ಪಿಸಿಕೊಳ್ಳುವ ಯುವಸಮುದಾಯ ಇಂದು ಸರ್ಕಾರಿ ಉದ್ಯೋಗಗಳಿಗೆ ಅಡಿಯಿಡಬೇಕಿದೆ ಎಂದರು.


ಸಮಾಜಕ್ಕೆ ನಾವು ಏನು ಕೊಡುತ್ತೇವೆ ಅನ್ನುವುದು ಮುಖ್ಯ. ನಮ್ಮ ನಮ್ಮ ಉದ್ಯೋಗಗಳಲ್ಲಿ ಉತ್ಕøಷ್ಟತೆಯನ್ನು ಮೆರೆಯುವುದೇ ನಿಜವಾದ ಸಾರ್ಥಕ್ಯ. ಆಸಕ್ತಿ, ಪ್ರೀತಿ, ಶ್ರದ್ಧೆ ನಮ್ಮನ್ನು ತುಂಬ ಎತ್ತರಕ್ಕೆ ಕರೆದೊಯ್ಯುತ್ತದೆ. ಅಧಿಕಾರಿ ವರ್ಗ, ಸರ್ಕಾರ, ಜನ ಎಲ್ಲರೂ ಸೇರಿದಾಗ ವ್ಯವಸ್ಥೆ ಸುಂದರವಾಗಿ ಕಾಣುತ್ತದೆ. ಕೆಲವೇ ಜನರನ್ನೊಳಗೊಂಡ ವ್ಯವಸ್ಥೆ ಪರಿಪೂರ್ಣತೆಯನ್ನು ಕಾಣುವುದಿಲ್ಲ. ಹಾಗಾಗಿ ಜನಸೇವೆಯ ಮುಖೇನ ಸರ್ವರನ್ನೂ ಒಗ್ಗೂಡಿಸಿ ವ್ಯವಸ್ಥೆಯನ್ನು ದೃಢಪಡಿಸಬೇಕು, ತನ್ಮೂಲಕ ಭಾರತದ ಶ್ರೇಷ್ಟತೆಯನ್ನು ತೋರಗೊಡಬೇಕು ಎಂದು ಅಭಿಪ್ರಾಯಪಟ್ಟರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

ಕಾರ್ಯಕ್ರಮದಲ್ಲಿ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಹಾಗೂ ತರಬೇತಿ ಮತ್ತು ಉದ್ಯೋಗ ಘಟಕದ ಸಂಯೋಜಕಿ ಅನನ್ಯಾ ಉಪಸ್ಥಿತರಿದ್ದರು.


ಕಾಲೇಜಿನ ವಿದ್ಯಾರ್ಥಿನಿಯರಾದ ಪಂಚಮಿ ಹಾಗೂ ಅಂಕಿತ ಪ್ರಾರ್ಥಿಸಿದರು. ಕಾಲೇಜಿನ ಪ್ರಾಚಾರ್ಯ ಡಾ. ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿ, ಪ್ರಸ್ತಾವನೆಗೈದರು. ಐಕ್ಯೂಎಸಿ ಘಟಕದ ನಿರ್ದೇಶಕ ಚಂದ್ರಕಾಂತ್ ಗೋರೆ ವಂದಿಸಿದರು. ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಸಾರ್ವಜನಿಕ ಸಂಪರ್ಕಾಧಿಕಾರಿ ರಾಕೇಶ್ ಕುಮಾರ್ ಕಮ್ಮಜೆ ಕಾರ್ಯಕ್ರಮ ನಿರ್ವಹಿಸಿದರು.


web counter

0 تعليقات

إرسال تعليق

Post a Comment (0)

أحدث أقدم