ಹವ್ಯಕ ಕವನ: ಬಾಳ ಬಂಧ

Upayuktha
0

ತೋಟದಾ ತಂಪಿಲ್ಲಿ ಸಂತೋಷ ತುಂಬಿದ್ದು

ನೋಟವೇ ಸಿಂಗಾರ ಗಂಧ ರಾಶಿ

ಆಟಕ್ಕೆ ಮಾಳವೇ ಹಿಂದಾಣ ಕಾಲಲ್ಲಿ

ಪಾಠಗಳ ಹಾಂಗೆಯೇ ಹಸುರು ಕಾಶಿ.


ಬೆಳಿ ಚಿನ್ನ ಅಡಕೆಯೇ ಹೇಳುವದು ಸತ್ಯವೇ

ತಿಳಿಯೆಕ್ಕು ನಾವಿಂದು ಆನಂದವೆ

ಕಳೆಕಟ್ಟಿ ಕಾಣುತ್ತು ತೋಟದೊಳ ಬಾಳೆ ಬುಡ/

ಬೆಳೆ ಹೊತ್ತ ಮರವೆಲ್ಲ ಒಪ್ಪೊಪ್ಪವೆ.


ಹುಲ್ಲು ಹಾಸಿದ ನೆಲವೆ ತೋಟಲ್ಲಿ ಹಸಿರುಕ್ಕಿ

ಅಲ್ಲಲ್ಲಿ ಕಾಣುತ್ತು ಪಚ್ಚೆ ಚೆಂದ

ಮೆಲ್ಲಂಗೆ ಕೇಳುತ್ತು ಇಂಪಾಗಿ ಹಾಡುಕ್ಕಿ

ಸಲ್ಲುವಾ ಗೈಮೆಯೇ ಬಾಳ ಬಂಧ .


ಮಾಳ = ಗುಡಿಸಲು. ಐವತ್ತು ವರ್ಷಗಳ ಹಿಂದೆ ಅಡಕೆ ತೋಟದೊಳಗೆ ಮರದ ಕಂಬ ಹಾಗೂ ಅಡಕೆ ಮರದ ಸಲಿಕೆಗಳನ್ನು ಬಳಸಿ ಸಣ್ಣ ಗುಡಿಸಲನ್ನು ಕಟ್ಟಿ ಅದರ ಮಾಡಿಗೆ ಸೋಗೆಯನ್ನು ಹೊದೆಸುತ್ತಿದ್ದರು. ಇಲ್ಲಿ ಹಗಲು ಮಕ್ಕಳು ಮನೆಯಾಟ ಆಡುತ್ತಿದ್ದರು, ಓದುತ್ತಾ ಇರುವುದೆಲ್ಲ ಇಂದು ನೆನಪು ಮಾತ್ರ!

-ಗುಣಾಜೆ ರಾಮಚಂದ್ರ ಭಟ್

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Tags

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top