|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮತಿ ಇದ್ದಂತೆ ನಮ್ಮ ಸ್ಥಿತಿಗತಿ: ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಮತಿ ಇದ್ದಂತೆ ನಮ್ಮ ಸ್ಥಿತಿಗತಿ: ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

 



ಮೂಡಬಿದ್ರೆ ಜೈನಮಠದ ಪೂಜ್ಯ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ “ದ್ರವ್ಯ ಸಂಗ್ರಹ” ಶಾಸ್ತ್ರದಾನ ಕೃತಿ ಬಿಡುಗಡೆಗೊಳಿಸಿ, ಮಂಗಲ ಪ್ರವಚನ ನೀಡಿದರು.


ಉಜಿರೆ: ಆತ್ಮನಿಗೆ ಸಾವಿಲ್ಲ. ದೇಹಕ್ಕೆ ಮಾತ್ರ ಸಾವು. ನಾವು ಅಂಗಿ ಬದಲಾಯಿಸಿದಂತೆ ಆತ್ಮನು ಪಾಪ-ಪುಣ್ಯಕ್ಕೆ ಅನುಗುಣವಾಗಿ ಅನೇಕ ಭವಗಳನ್ನು ದಾಟುತ್ತಾನೆ. ನಮ್ಮ ಮತಿ ಅಂದರೆ ಮನಸ್ಸು ಇದ್ದಂತೆ ನಮ್ಮ ಸ್ಥಿತಿ-ಗತಿಯೂ ಇರುತ್ತದೆ ಎಂದು ಮೂಡಬಿದ್ರೆ ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.


ಅವರು ಬುಧವಾರ ಮೂಡಬಿದ್ರೆಯಲ್ಲಿ ಲೆಪ್ಪದ ಬಸದಿಯಲ್ಲಿ ಬುಧವಾರ ಇತ್ತೀಚೆಗೆ ನಿಧನರಾದ ಉಜಿರೆಯ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮರ ಆತ್ಮಶಾಂತಿಗಾಗಿ ನಡೆದ 216 ಕಲಶ ಅಭಿಷೇಕದ ಬಳಿಕ ಶಾಸ್ತ್ರದಾನ ಕೃತಿ “ದ್ರವ್ಯ ಸಂಗ್ರಹ” ಬಿಡುಗಡೆಗೊಳಿಸಿ ಮಾತನಾಡಿದರು.


ಡಾ. ಬಿ. ಯಶೋವರ್ಮರು ನೂರು ವರ್ಷಗಳಲ್ಲಿ ಮಾಡಬೇಕಾದ ಸಾಧನೆಯನ್ನು 65 ವರ್ಷಗಳಲ್ಲೆ ಮಾಡಿದ್ದಾರೆ. ಅವರೊಬ್ಬ ಯಶಸ್ವಿ ನಾಯಕ, ಸ್ನೇಹಜೀವಿ, ಶಾಂತ ಸ್ವಭಾವದವರಾಗಿ ಸ್ಥಿತ ಪ್ರಜ್ಞೆ ಹೊಂದಿದ್ದರು. ಜೈನಧರ್ಮದ ಆಳವಾದ ಅಧ್ಯಯನ ಮಾಡಿದ ಅವರು ಉತ್ತಮ ವಾಗ್ಮಿಯೂ ಆಗಿದ್ದರು. ಮೂಡಬಿದ್ರೆ ಜೈನಮಠದಲ್ಲಿ ಜೈನ ಧರ್ಮದ ಶಾಸನಗಳ ಅಧ್ಯಯನ, ಗ್ರಂಥ ಭಂಡಾರ ಮತ್ತು ಸಂಶೋಧನೆಗೆ ಸಹಕಾರ ನೀಡಿದ್ದಾರೆ ಎಂದು ಶ್ಲಾಘಿಸಿದರು. ಕಲೆ, ಸಾಹಿತ್ಯ, ಸಂಗೀತ, ವಿಜ್ಞಾನ, ರಂಗ ಕಲೆ ಮೊದಲಾದ ಎಲ್ಲಾ ಪ್ರಕಾರಗಳಲ್ಲಿಯೂ ಆಸಕ್ತರು ಹಾಗೂ ಪರಿಣತರಾಗಿದ್ದರು. ಸ್ವಾಧ್ಯಾಯ, ವ್ರತ-ನಿಯಮಗಳ ಪಾಲನೆಯಿಂದ ತಮ್ಮ ಜೀವನ ಪಾವನ ಮಾಡಿದ್ದಾರೆ ಎಂದರು.


ಶಾಸ್ತ್ರದಾನ ಕೃತಿಯನ್ನು ಎಲ್ಲರಿಗೂ ಉಚಿತವಾಗಿ ವಿತರಿಸಲಾಯಿತು. ಒಂಭತ್ತು ಬಾರಿ ಪಂಚ ನಮಸ್ಕಾರ ಮಂತ್ರ ಪಠಣ ಮಾಡಲಾಯಿತು.

ಕಾರ್ಕಳದ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮಾತನಾಡಿ, ಭಾರತ ಪವಿತ್ರ ದೇಶವಾಗಿದ್ದು ಜಿನಾಲಯಗಳು, ದೇವಾಲಯಗಳು, ಭೂತಾಲಯಗಳು ನಮಗೆ ಮಾನಸಿಕ ಶಾಂತಿ, ನೆಮ್ಮದಿ ನೀಡುತ್ತವೆ. ಜೈನ ಧರ್ಮದ ಆಚಾರ-ವಿಚಾರಗಳು ಶ್ರೇಷ್ಠವಾಗಿವೆ ಎಂದರು.


ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರದ್ಧಾ ಅಮಿತ್, ಡಿ. ಶ್ರೇಯಸ್ ಕುಮಾರ್, ನಿಶ್ಚಲ್ ಕುಮಾರ್, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್, ಡಾ. ಮೋಹನ್ ಆಳ್ವ, ಕೆ. ರಾಜವರ್ಮ ಬಳ್ಳಾಲ್, ಕೆ. ಜಯವರ್ಮರಾಜ ಬಳ್ಳಾಲ್, ಧಾರವಾಡದ ಡಾ. ನಿರಂಜನ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ


web counter

0 Comments

Post a Comment

Post a Comment (0)

Previous Post Next Post