ಸುಳ್ಯದ ಸಾಹಿತಿ ಭೀಮರಾವ್ ವಾಷ್ಠರ್ ರಚಿಸಿದ ಭಕ್ತಿಗೀತೆ ಮ್ಯೂಸಿಕ್ ಆಲ್ಬಮ್ ಬಿಡುಗಡೆ

Upayuktha
0


ರಾಯಚೂರು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ಜ್ಯೋತಿಷ್ಯರು ಮತ್ತು ಸಾಹಿತಿಗಳಾದ ಎಚ್. ಭೀಮರಾವ್ ವಾಷ್ಠರ್ ರವರು ಸಾಹಿತ್ಯ ರಚಿಸಿ ಹಾಡಿರುವ ಭಕ್ತಿಗೀತೆ ಮ್ಯೂಸಿಕ್ ಆಲ್ಬಮ್ ನ್ನು ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಬೇಡರ ಕಾರಲಕುಂಟಿಯ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ನಡೆದ ಸರ್ವಧರ್ಮದ ಸಮ್ಮೇಳನದಲ್ಲಿ ಬಿಡುಗಡೆ ಮಾಡಲಾಯಿತು.



ಸುಕ್ಷೇತ್ರ ಬೇಡರ ಕಾರಲಕುಂಟಿಯ ಪರಮ ಪೂಜ್ಯ ಶ್ರೀ ರುದ್ರಮುನಿ ಮಹಾಸ್ವಾಮಿಗಳ ಕಾಲಜ್ಞಾನ ಮಠದ ಕುರಿತ ಈ ಭಕ್ತಿಗೀತೆಯನ್ನು ಸುಕ್ಷೇತ್ರದ ಶ್ರೀ ಶಿವಕುಮಾರ್ ಮಹಾಸ್ವಾಮಿಗಳು ಬಿಡುಗಡೆ ಮಾಡಿದರು.


ಈ ಸಂದರ್ಭದಲ್ಲಿ ರಾಜಕೀಯ ನಾಯಕರಾದ ಶ್ರೀ ಹೊನ್ನಪ್ಪ ಮೇಟಿ ನಾಗರಹಾಳ, ಆನಾಹೊಸೂರಿನ ಮಠದ ಗುರುಗಳು, ನಿರುಪಾದಿ ಕವಿಗಳು ನಾಗರಹಾಳ, ಯುವಕವಿ ವಿಜಯ್ ದಾಸ್ ನವಲಿ, ನಿಜಲಿಂಗಯ್ಯ ಹಾಲದೇವರಮಠ, ಅಂಬರೀಷ್ ಚಲವಾದಿ ಕಮಲದಿನ್ನಿ, ಪ್ರವಚನಕಾರರು ಮತ್ತು ಇನ್ನಿತರರು ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top