ಬೆಂಗಳೂರು: ನಗರದ ಕೆ. ಆರ್. ಪುರಂನ ಮುನಿಯಪ್ಪ ಗಾರ್ಡನ್ ಬಡಾವಣೆ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಜುಲೈ 3 ಭಾನುವಾರ ಮಧ್ಯಾಹ್ನ 2.30ಕ್ಕೆ ಶ್ರೀಕೃಷ್ಣ ರುಕ್ಮಿಣಿ ಸಾಂಸ್ಕೃತಿಕ ಕಲಾ ವೇದಿಕೆಯ ದ್ವಿತೀಯ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ.
ವಿದ್ವಾನ್ ಆಯನೂರು ಮಧುಸೂದನಾಚಾರ್ಯರು ಕಾರ್ಯಕ್ರಮ ಉದ್ಘಾಟಿಸಿ ಪ್ರವಚನ ನಡೆಸಿಕೊಡುವರು. ಮುಖ್ಯ ಅತಿಥಿಗಳಾಗಿ ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ, ಸಮಾಜ ಸೇವಕರಾದ ಲಕ್ಷ್ಮಿ ಹರೀಶ್, ಕೆ.ವಿ. ಭಾಸ್ಕರ್ ನಾಯ್ಡು, ರಂಗವಿಠಲ ಹರಿದಾಸ ಸಂಗೀತ ಶಾಲೆಯ ಸಂಸ್ಥಾಪಕ ಖ್ಯಾತ ಗಾಯಕ ಬೈರಾಪುರ ಸತ್ಯನಾರಾಯಣ ಭಾಗವಹಿಸಲಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ಕೆ. ಆರ್. ಪುರಂ ನಂಜನಗೂಡು ಶ್ರೀರಾಘವೇಂದ್ರ ಸ್ವಾಮಿಗಳ ಮಠದ ವ್ಯವಸ್ಥಾಪಕ ವಿದ್ವಾನ್ ಮುರಳೀಧರಾಚಾರ್ಯರು ವಹಿಸಿಲಿದ್ದಾರೆ ಎಂದು ಕಾರ್ಯಕ್ರವದ ಅಯೋಜಕರಾದ ಶ್ರೀಕೃಷ್ಣ ರುಕ್ಮಿಣಿ ಸಾಂಸ್ಕೃತಿಕ ಕಲಾ ವೇದಿಕೆಯ ಸಂಸ್ಥಾಪಕ ಸಂಜೀವ ಕೃಷ್ಣಜಿ ಕುಲಕರ್ಣಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ