ಯಮರಾಜನ ಸೋದರನಂತೆ
ಸ್ವಲ್ಪ
ಬಿರುಸಿನವನೇ ಆಗಿರ ಬೇಕು
ಯಾಕೆಂದರೆ
ಪ್ರಾಣ ಧನಗಳೆರಡರನ್ನೂ
ಒಯ್ಯುವ
ಮಹಾ ನಿಸ್ಸೀಮ
ಯಾರು ಯಾಕೆ ಯಾವಾಗ
ಹೀಗಂದರೋ
ಸಣ್ಣ
ತಲೆನೋವು ಬಂದರೆ
ಯಮನ ಭಯವಾಗಿ
ಓಡಿ ಬರುವುದು
ಈ
ಸೋದರನ ಬಳಿಗೇ!
ಮತ್ತಿದೇತರ ಉಪಮೆ
ಪ್ರಾಯಃ
ನಮಸ್ಕರಿಸುತ್ತಾ
ತಡೆ
ಒಡ್ಡಿರ ಬೇಕು
ಪ್ರಾಣಧನ ರಾಗಿರುವ
ಸಲುವಾಗಿ.
-ಡಾ ಸುರೇಶ ನೆಗಳಗುಳಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ