|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಯುವಶಕ್ತಿ ಸೇವಾಪಥದಿಂದ ಅರ್ಹ ಫಲಾನುಭವಿಗಳಿಗೆ 2,25,000 ರೂ ಸಹಾಯನಿಧಿ ವಿತರಣೆ

ಯುವಶಕ್ತಿ ಸೇವಾಪಥದಿಂದ ಅರ್ಹ ಫಲಾನುಭವಿಗಳಿಗೆ 2,25,000 ರೂ ಸಹಾಯನಿಧಿ ವಿತರಣೆ



ಮಂಜೇಶ್ವರ: ಯುವಶಕ್ತಿ ಸೇವಾಪಥದ ನೇತೃತ್ವದಲ್ಲಿ ಕುಂಜತ್ತೂರು ಉದ್ಯಾವರ ಮಾಡ ಶ್ರೀ ಅರಸು ಮಂಜಿಷ್ಣಾರ್ ಶ್ರೀ ದೈವಗಳ ಜಾತ್ರಾ ಮಹೋತ್ಸವದಲ್ಲಿ ಹಮ್ಮಿಕೊಂಡಿದ್ದ ಉದ್ಯಾವರ ಸೇವಾಚಕ್ರ ಸಂಪನ್ನಗೊಂಡಿದ್ದು ಸಂಗ್ರಹಗೊಂಡಿದ್ದ 2,25,000 ಮೊತ್ತವನ್ನು ದೈವಸ್ಥಾನದ ಮುಂಭಾಗದಲ್ಲಿ ವ್ಯವಸ್ಥಾಪನಾ ಸಮಿತಿ ಹಾಗೂ ಸೇವಾಪಥದ ಕಾರ್ಯಕರ್ತರ ಸಮ್ಮುಖ ಹಸ್ತಾಂತರಿಸಲಾಯಿತು.

ತೆಂಗಿನಮರದಿಂದ ಬಿದ್ದು ಮಂಗಳೂರು ಫರ್ಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಶ್ವನಾಥ ಮಂಜೇಶ್ವರ ಅವರಿಗೆ ರೂ 1,00,000.00 (ಒಂದು ಲಕ್ಷ)

ಸಕ್ಕರೆ ಕಾಯಿಲೆಯಿಂದ ಕಾಲನ್ನು ಕಳೆದುಕೊಂಡಿರುವ ಮಕ್ಕಳಿಲ್ಲದ ವಿಜಯ ಕುಂಜತ್ತೂರುರವರಿಗೆ ರೂ 80,000 (ಎಂಬತ್ತುಸಾವಿರ), 

ಬೈಕ್ ಅಪಘಾತದಿಂದ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತೋಷ್ ಮುಡಿಪು, ಗಂಡನನ್ನು ಕಳೆದುಕೊಂಡು ಸ್ವಂತ ಮನೆಯೂ ಇಲ್ಲದೆ ಕಷ್ಟಪಡುತ್ತಿರುವ ಎರಡು ಮಕ್ಕಳ ತಾಯಿ ಮಂಜುಳಾ ಕರಿಯಂಗಳ, ಸಮಾಜಕಾರ್ಯಕ್ಕಾಗಿ ದುಡಿದ ಸಹೋದರಿಯ ಗಂಡನ ಕಾಲು ಸಕ್ಕರೆ ಕಾಯಿಲೆಯಿಂದ ಗ್ಯಾಂಗ್ರೀನ್ ಆಗಿದ್ದು ಪ್ರತಿನಿತ್ಯದ ಚಿಕಿತ್ಸೆಗೆ ಪರದಾಡುವ ಪರಿಸ್ಥಿತಿಯಲ್ಲಿರುವ ತಿಲಕ್ ಸಾಲ್ಯಾನ್ ಮುಲ್ಕಿ ರವರಿಗೆ ತುರ್ತು ನಿಧಿ ಯೋಜನೆಯಡಿ ತಲಾ 10,000 ಗಳನ್ನು ಹಸ್ತಾಂತರಿಸಲಾಯಿತು.

ಸೇವಾಪಥ ಕಾರ್ಯಕರ್ತ ಕ್ಷೇಮನಿಧಿಗೆ ರೂ 15,000 ಗಳನ್ನು ಮೀಸಲಾಗಿಡಲಾಗಿದೆ.

ಸುಮಾರು 200ಕ್ಕೂ ಅಧಿಕ ಸ್ವಯಂಸೇವಕರು ಈ ಸೇವಾಕಾರ್ಯದಲ್ಲಿ ಭಾಗವಹಿಸಿದ್ದು ದೈವಸ್ಥಾನದ ಆಡಳಿತ ವಿಭಾಗ ಹಾಗೂ ಊರ, ಪರವೂರ ಭಕ್ತಾದಿಗಳ ಸಹಕಾರದಿಂದ ಸೇವಾನಿಧಿ ಯೋಜನೆ ಯಶಸ್ವಿಯಾಗಿ ನೆರವೇರಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



0 تعليقات

إرسال تعليق

Post a Comment (0)

أحدث أقدم