ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ‘ದೇಶಿ ದರ್ಶನ ಮಾಲೆ’ಯಡಿ ರಚಿತವಾಗಿರುವ ಏಳು ಪುಸ್ತಕಗಳ ಬಿಡುಗಡೆ ಸಮಾರಂಭವೂ ಇದೆ ಮೇ 23 ಸೋಮವಾರ ಬೆಳಗ್ಗೆ 11.00 ಗಂಟೆಗೆ ನಗರದ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನ, ನಯನ ಸಭಾಂಗಣದಲ್ಲಿ ಆಯೋಜಿಸಲಾಗಿದೆ.
ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಪುಸ್ತಕಗಳ ಬಿಡುಗಡೆ ಮಾಡುವರು. ದೇಶಿ ದರ್ಶನ ಮಾಲೆಯ ಯೋಜನಾ ಸಂಪಾದಕರು ಹಾಗೂ ಕರ್ನಾಟಕ ಸಂಸ್ಕøತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಬಿ.ವಿ ವಸಂತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು, ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ರವರು ಉಪಸ್ಥಿತರಿರುವರು.
ದೇಸಿ ದರ್ಶನ ಮಾಲೆ ವಿಚಾರಸಂಕಿರಣ:
ದೇಸಿ ವಿಮರ್ಶಾ ಮಾನದಂಡಗಳನ್ನು ರೂಪಿಸುವ ನಿಟ್ಟಿನಲ್ಲಿ ನಾಡಿನ ವಿವಿಧ ಪಂಥಗಳ ಕುರಿತು ದೇಸಿ ದರ್ಶನ ಮಾಲೆ ಎಂಬ ಶೀರ್ಷಿಕೆಯಡಿ 7 ವಿವಿಧ ಪುಸ್ತಕಗಳನ್ನು ಹೊರತಂದಿದ್ದು, ಈ ಪುಸ್ತಕಗಳ ಕುರಿತು ವಿಚಾರ ಸಂಕಿರಣವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಂಡಿದೆ.
ದೇಶಿ ದರ್ಶನ ಮಾಲೆಯ ತತ್ವ ಮತ್ತು ಆಶಯದ ಕುರಿತು ಪ್ರೊ.ಮಲ್ಲೇಪುರಂ ಜಿ ವೆಂಕಟೇಶ ರವರು ವಿಚಾರಗೋಷ್ಠಿಯಲ್ಲಿ ಮಾತನಾಡುವರು. ಗೋಷ್ಠಿಯಲ್ಲಿ ವಿವಿಧ ಪಂಥಗಳು ಕುರಿತು ಪುಸ್ತಕ ರಚಿಸಿರುವ ವಿದ್ವಾಂಸರಾದ ಡಾ. ಶಿವಾನಂದ ಕೆಳಗಿನಮನಿರವರು- ಕಾಳಮುಖ ಪಂಥ; ವ್ಯಾಸಪಂಥ- ಡಾ. ಎಸ್.ಜಿ. ಯತೀಶ್ವರ, ನಾಥಪಂಥ- ಡಾ. ಶ್ರೀಧರ ಹೆಚ್.ಜಿ, ಅವಧೂತ ಪಂಥ- ಡಾ. ಬೆಳವಾಡಿ ಮಂಜುನಾಥ, ಆರೂಢ ಪಂಥ- ಡಾ. ಎಂ.ಬಿ. ಕಟಿ, ಶೈವ ಪಂಥ- ಡಾ. ರೇಣುಕಾ ಪ್ರಸಾದ್ ಪಿ.ಆರ್, ದಾಸ ಪಂಥ- ಕುರಿತು ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಮಾತನಾಡುವರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ