ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕ ಮತ್ತು ಜ್ಞಾನಗಂಗಾ ಪುಸ್ತಕ ಮಳಿಗೆ ಸಹಯೋಗದಲ್ಲಿ ಮೇ 7ರಂದು ಸಾಹಿತ್ಯ ಸಂಭ್ರಮ ಪುಸ್ತಕ ಹಬ್ಬ ಕಾರ್ಯಕ್ರಮದಲ್ಲಿ ಶಿಕ್ಷಕರ ವಿಭಾಗದ ಕವಿಗೋಷ್ಠಿ ನಡೆಯಿತು. ಸರಕಾರಿ ಪ್ರೌಢಶಾಲೆ ಕಬಕದ ಶಿಕ್ಷಕಿ ಶಾಂತಾ ಪುತ್ತೂರು ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು.
ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, ಶಿಕ್ಷಕರು ಬೋಧನೆಯೊಂದಿಗೆ ಅಧ್ಯಯನಶೀಲರಾಗಿ ಜ್ಞಾನ ಸಂಪಾದಿಸಿರುತ್ತಾರೆ. ಅವರ ಪ್ರತಿಭೆಯನ್ನು ಪ್ರಸ್ತುತ ಪಡಿಸಲು ಇಂತಹ ವೇದಿಕೆಗಳು ಹೆಚ್ಚು ಪ್ರಯೋಜನಕಾರಿಯಾಗಿದೆ. ಜ್ಞಾನ ಹೆಚ್ಚಾದಂತೆ ಬರವಣಿಗೆಯ ಸಾಮರ್ಥ್ಯ ಹೆಚ್ಚಾಗುತ್ತದೆ. ಜ್ಞಾನವು ಅನುಭವದೊಂದಿಗೆ ಮಿಳಿತವಾದಾಗ ಕವಿತೆ ರಸವತ್ತಾಗುತ್ತದೆ ಎಂದರು.
ಕವಿಗೋಷ್ಠಿಯಲ್ಲಿ ಶಿಕ್ಷಕರಾದ ಪೂರ್ಣಿಮಾ ಪೆರ್ಲಂಪಾಡಿ, ಉಮೇಶ್ ಕಾರಂತ್, ಫ್ಲಾವಿಯಾ ಅಲ್ಬುಕರ್ಕ್ ಪುತ್ತೂರು, ಸೋನಿತಾ ಕೆ ನೇರಳಕಟ್ಟೆ, ಹೇಮಂತಕುಮಾರ್, ಸುಜಾತ ರೈ ಪಾಲ್ತಾಡಿ, ಸಂಜೀವ ಮಿತ್ತಳಿಕೆ, ಸುಮಂಗಲ ದಿನೇಶ್ ಶೆಟ್ಟಿ, ಲಿಖಿತಾ ಕೋಟ್ಯಾನ್, ವಿಮಲಾ ತೇಜಾಕ್ಷಿ, ಸುಹಾನ ಸಯ್ಯದ್ ಎಂ, ಕಾವ್ಯ.ಸಿ. ಅಳಿಕೆ, ಜಯಾನಂದ ಪೆರಾಜೆ, ನೂತನ ಪಿ.ಕೆ, ಶೋಭಾ ಕೆ, ಜನಾರ್ದನ ದುರ್ಗಾ, ಆಶಿಪ್ ಮಾಡಾವು ಸ್ವರಚಿತ ಕವನ ವಾಚಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕ್ರಿಯಾಶೀಲ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ರವರು ಕನ್ನಡ ಸಾಹಿತ್ಯ ಪರಿಷತ್ ಮಾತೃ ಸ್ಥಾನದಲ್ಲಿ ನಿಂತು ಎಲ್ಲಾ ಸಾಹಿತ್ಯ ಬಳಗ ಹಾಗೂ ಸಾಹಿತಿಗಳನ್ನು ಬೆಳೆಸುವ ಕಾರ್ಯದಲ್ಲಿ ಕಟಿಬದ್ಧವಾಗಿದೆ ಎಂದರು.
ಸಾಹಿತ್ಯ ಪರಿಷತ್ತು ಸದಾ ಸಾಹಿತ್ಯ ಚಟುವಟಿಕೆಗಾಗಿ ಇರುವ ಸಂಸ್ಥೆ. ಇಂದು ಅನೇಕ ಹಿರಿಯ ಸಾಹಿತಿಗಳ ಪ್ರತಿಭೆ ಅನಾವರಣಗೊಳ್ಳುವಲ್ಲಿ ಶಿಕ್ಷಕರ ಪಾತ್ರ ಬಹುಮುಖ್ಯವಾಗಿದೆ. ಆ ನಿಟ್ಟಿನಲ್ಲಿ ಶಿಕ್ಷಕರ ವಿಭಾಗದಲ್ಲಿ ಕವಿಗೋಷ್ಠಿ ನಡೆಸಲಾಗಿದೆ ಎಂದರು. ಕವನ ವಾಚಿಸಿದ ಕವಿಗಳಿಗೆ ಸ್ಮರಣಿಕೆ, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು. ಉದಯ ಕುಮಾರ್ ಯು.ಎಲ್. ಕಾರ್ಯಕ್ರಮ ನಿರ್ವಹಿಸಿದರು. ಅಪೂರ್ವಕಾರಂತ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ