||ಜಾಹೀರಾತು|| ಬೆಂಗಳೂರಿನ ಪ್ರಣವ ಮೀಡಿಯಾ ಹೌಸ್ ಪ್ರಕಾಶನದ ಹೆಮ್ಮೆಯ ಪ್ರಕಟಣೆ | ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರ 'ಸತ್ಸಂಗ ಸಂಪದ' ಪ್ರೇರಣಾದಾಯಿ ಅಂಕಣಗಳ ಸಂಕಲನ ಖರೀದಿಸಲು ಇಚ್ಚಿಸುವವರು ಸಂಪರ್ಕಿಸಿ: 739369621 (ಪುಟಗಳು- 248, ಬೆಲೆ: ಎರಡು ನೂರು ರೂಪಾಯಿಗಳು) | ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಅಲಕ್ಷಿತ ಜ್ಞಾನ ಶಾಖೆಗಳ ಪುನರುಜ್ಜೀವನಕ್ಕೆ ದೇಶಿ ದರ್ಶನ ಮಾಲೆಯ ಪುಸ್ತಕಗಳು ಬಹು ಉಪಯೋಗಿ: ಡಾ. ಹೆಚ್.ಎಸ್. ವೆಂಕಟೇಶಮೂರ್ತಿ

ಅಲಕ್ಷಿತ ಜ್ಞಾನ ಶಾಖೆಗಳ ಪುನರುಜ್ಜೀವನಕ್ಕೆ ದೇಶಿ ದರ್ಶನ ಮಾಲೆಯ ಪುಸ್ತಕಗಳು ಬಹು ಉಪಯೋಗಿ: ಡಾ. ಹೆಚ್.ಎಸ್. ವೆಂಕಟೇಶಮೂರ್ತಿ

‘ದೇಸಿ ದರ್ಶನ ಮಾಲೆ’ ಪುಸ್ತಕಗಳ ಲೋಕಾರ್ಪಣೆಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವಾಕಾಂಕ್ಷೆ ಯೋಜನೆಗಳಲ್ಲೊಂದಾದ ‘ದೇಶಿ ದರ್ಶನ ಮಾಲೆ’ಯಡಿ ರಚಿತವಾಗಿರುವ ಏಳು ಪುಸ್ತಕಗಳ ಬಿಡುಗಡೆ ಸಮಾರಂಭವನ್ನು ನಗರದ ಜೆಸಿ ರಸ್ತೆಯ ರವೀಂದ್ರ ಕಲಾಕ್ಷೇತ್ರ ಆವರಣದ ಕನ್ನಡ ಭವನ, ನಯನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು.


ಹಿರಿಯ ಸಾಹಿತಿ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ, ಡಾ. ಶಿವಾನಂದ ಕೆಳಗಿನಮನಿರವರ- ಕಾಳಮುಖ ಪಂಥ; ವ್ಯಾಸಪಂಥ- ಡಾ. ಎಸ್.ಜಿ. ಯತೀಶ್ವರ, ನಾಥಪಂಥ- ಡಾ. ಶ್ರೀಧರ ಹೆಚ್.ಜಿ, ಅವಧೂತ ಪಂಥ- ಡಾ. ಬೆಳವಾಡಿ ಮಂಜುನಾಥ, ಆರೂಢ ಪಂಥ- ಡಾ. ಎಂ.ಬಿ. ಕಟ್ಟಿ, ಶೈವ ಪಂಥ- ಡಾ. ರೇಣುಕಾ ಪ್ರಸಾದ್ ಪಿ.ಆರ್, ದಾಸ ಪಂಥ- ಡಾ. ಗುರುರಾಜ ಪೋಶೆಟ್ಟಿಹಳ್ಳಿರವರ ಪುಸ್ತಕಗಳ ಬಿಡುಗಡೆ ಮಾಡಿ ಮಾತನಾ ಡಿದರು.


ಅಲಕ್ಷಿಸಿರುವ ಜ್ಞಾನ ಶಾಖೆಗಳನ್ನು ಉಜ್ಜೀವಗೊಳಿಸುವ ನಿಟ್ಟಿನಲ್ಲಿ ದೇಶಿ ದರ್ಶನ ಮಾಲೆಯ ಪುಸ್ತಕಗಳು ವಿದ್ವತ್ ಸಮುದಾಯದಲ್ಲಿ ಹೊಸ ಪರಂಪರೆ ರೂಪಿಸಿ; ಜ್ಞಾನದ ಅರಿವು ವಿಸ್ತರಿಸುವಲ್ಲಿ ಸಂಶೋಧನಾ ವಿದ್ಯಾರ್ಥಿಗಳಿಗೆ ಆಕರ ಗ್ರಂಥಮಾಲೆಯಾಗಿ ಉಪಯೋಗವಾಗಲಿದೆ ಎಂದು ಅಭಿಪ್ರಾಯಪಟ್ಟರು.


ಯೋಜನಾ ಸಂಪಾದಕರು ಹಾಗೂ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳಾದ ಪ್ರೊ. ಮಲ್ಲೇಪುರಂ ಜಿ ವೆಂಕಟೇಶ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ದೇಶಿ ದರ್ಶನ ಮಾಲೆಯ ತತ್ವ ಮತ್ತು ಆಶಯದ ಕುರಿತು ಮಾತನಾಡುತ್ತ  ಭಾರತೀಯ ಪರಂಪರೆ (Indian  Heritage) ಎಂಬುದು ಒಂದೇ. ಔತ್ತರೇಯ-ದಾಕ್ಷಿಣಾತ್ಯ ಭಾರತೀಯ ಪರಂಪರೆಯಲ್ಲಿ ಹತ್ತಾರು ಸಂಪ್ರದಾಯ (ಖಿಡಿಚಿಜiಣioಟಿ)ಗಳಿವೆ. ಅವು ಪ್ರತಿಯೊಂದು ರಾಜ್ಯಕ್ಕೂ ಭಿನ್ನವಾಗುತ್ತ ಹೋಗುತ್ತವೆ. ಹೀಗಾಗಿ ಊeಡಿiಣಚಿge ಎಂಬುದು ಸುವಿಶಾಲವಾದುದು. ಈ ಊeಡಿiಣಚಿgeನ ಪರಿಕಲ್ಪನೆಯಲ್ಲಿ ಹತ್ತಾರು ಸಂಪ್ರದಾಯಗಳು ಬರುತ್ತವೆ. ಈ ಸಂಪ್ರದಾಯ ಎಂಬ ಮಾತನ್ನು ಇಂಗ್ಲೀಷಿನ (Tradition) ಎಂಬ ಮಾತಿಗೆ ಸಮಾನಾಂತರವಾಗಿ ನಾವು ಬಳಸಿಕೊಳ್ಳುತ್ತಿದ್ದೇವೆ. ಇಂಥ ಸಂಪ್ರದಾಯಗಳಲ್ಲಿ ನೂರಾರು ಪಂಥಗಳಿವೆ. ಅವು ವಿಶಿಷ್ಟವೂ ವೈವಿಧ್ಯಮಯವೂ ಆಗಿವೆ. ಇಂಥ ಪಂಥಗಳಿಗೆ ನಾವು ಅuಟಣ ಎಂಬ ಪರಿಕಲ್ಪನೆಯಿಂದ ವ್ಯಾಖ್ಯಾನಿಸಿಕೊಳ್ಳುತ್ತಿದ್ದೇವೆ. ಪ್ರತಿಯೊಂದು ಸೀಮೆ, ಪ್ರದೇಶಗಳಲ್ಲಿ ಹಲವಾರು ಪಂಥಗಳಿರುವುದು ನಿಶ್ಚಿತ. ಈ ಪಂಥಗಳು ಕಾವ್ಯಗಳನ್ನೂ ತತ್ತ್ವಪದಗಳನ್ನೂ ಕಟ್ಟಿಕೊಟ್ಟಿವೆ. ಅಂಥ ಸಾಹಿತ್ಯಕೃತಿಗಳಲ್ಲೂ ಸಂಸ್ಕøತಿಗೆ ಸಂಬಂಧಿಸಿದ ಸಂಗತಿಗಳಲ್ಲೂ ಅನೇಕ ಬಗೆಯ ಬಹುತ್ವದ ಪರಿಕಲ್ಪನೆಗಳು ಇವೆ. ನಮ್ಮ ಬಹುತ್ವದ ನೆಲೆಗಳನ್ನು ಅರ್ಥ ಮಾಡಿಕೊಳ್ಳಲು ನಮ್ಮವೇ ಆದ ಮಾರ್ಗಗಳನ್ನು ಕಂಡುಕೊಳ್ಳುವುದು ಅವಶ್ಯವಿದೆ ಎಂದು ತಿಳಿಸಿದರು.


ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಬಿ.ವಿ ವಸಂತಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ನಾವು ನಮ್ಮ ಬದುಕನ್ನು ದೇಸೀ ನೆಲ ಬೀಜದಿಂದ ರೂಪಿಸಿಕೊಂಡಿದ್ದೇವೆ. ಆದರೆ, ಈ ದೇಸೀ ಬದುಕಿನ ಸಾಹಿತ್ಯದ ಸಂಸ್ಕøತಿಯ ಮೌಲ್ಯಮಾಪನವನ್ನು ಈವರೆಗೆ ಬಹುತೇಕ ವಿದೇಶೀ ವಿಮರ್ಶಾ ಮಾನದಂಡಗಳೇ ನಿರ್ಧರಿಸುತ್ತಾ ಬಂದಿವೆ. ಆ ಕಾರಣದಿಂದಾಗಿಯೇ ನಾವು ಇತ್ತ ನಮ್ಮ ಪರಂಪರೆಗೆ ವಾರಸುದಾರರಾಗದೆ ಅತ್ತ ಪಾಶ್ಚಾತ್ಯ ಪರಂಪರೆಗೂ ವಾರಸುದಾರರಾಗದೆ ನಿಂತ ನೆಲದಲ್ಲಿಯೇ ಸ್ವಂತ ಬದುಕಿಗೆ ಭಾವಕ್ಕೆ ಬುದ್ಧಿಗೆ, ಸಂಬಂಧಕ್ಕೆ ಪರಕೀಯರಾಗುತ್ತಿದ್ದೇವೇನೋ ಎನಿಸುತ್ತಿದೆ. ಇಂಥ ಸಂದಿಗ್ಧ ಸಂದರ್ಭದಲ್ಲಿ ದೇಸೀ ಸಾಹಿತ್ಯವನ್ನು ಅರಿಯಬೇಕಾದರೆ; ದೇಸೀ ಸಮಾಜವನ್ನು ಮೇಲೆತ್ತಬೇಕಾದರೆ ದೇಸೀ ಪರಂಪರೆಯನ್ನು ಬತ್ತದಂತೆ ಪ್ರವಹಿಸಬೇಕಾದರೆ; ದೇಸೀದರ್ಶನದ ಅಗತ್ಯವಿದೆ ಎಂದು ಮನಗಂಡ ಕರ್ನಾಟಕ ಸಾಹಿತ್ಯ ಅಕಾಡೆಮಿಯು ದೇಸೀ ವಿಮರ್ಶಾ ಮಾನದಂಡಗಳು ದೇಸೀ ಜನರಿಂದಲೇ ಮೈದಾಳಬೇಕು ಎಂಬ ಸದಾಶಯದಿಂದ ಈ ಮಾಲೆಯ ಯೋಜನೆಯನ್ನು ರೂಪಿಸಿದೆ ಎಂದು ತಿಳಿಸಿದರು.


ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಕರಿಯಪ್ಪ ಎನ್ ಸ್ವಾಗತಿಸಿದರು, ಸದಸ್ಯ ಸಂಚಾಲಕ ದತ್ತಗುರು ಸೀತಾರಾಮ ಹೆಗಡೆ ನಿರೂಪಣೆ ಮಾಡಿದರು.


ದೇಸಿ ದರ್ಶನ ಮಾಲೆ ವಿಚಾರ ಸಂಕಿರಣ:

ದೇಸಿ ವಿಮರ್ಶಾ ಮಾನದಂಡಗಳನ್ನು ರೂಪಿಸುವ ನಿಟ್ಟಿನಲ್ಲಿ ನಾಡಿನ ವಿವಿಧ ಪಂಥಗಳ ಕುರಿತು ದೇಸಿ ದರ್ಶನ ಮಾಲೆ ಎಂಬ ಶೀರ್ಷಿಕೆಯಡಿ 7 ವಿವಿಧ ಪುಸ್ತಕಗಳನ್ನು ಹೊರತಂದಿದ್ದು, ಈ ಪುಸ್ತಕಗಳ ಕುರಿತು ವಿಚಾರ ಸಂಕಿರಣವನ್ನು ಇದೇ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಗೋಷ್ಠಿಯಲ್ಲಿ ವಿವಿಧ ಪಂಥಗಳು ಕುರಿತು ಪುಸ್ತಕ ರಚಿಸಿರುವ ವಿದ್ವಾಂಸರಾದ ವ್ಯಾಸಪಂಥ- ಡಾ. ಎಸ್.ಜಿ. ಯತೀಶ್ವರ, ನಾಥಪಂಥ- ಡಾ. ಶ್ರೀಧರ ಹೆಚ್.ಜಿ, ಅವಧೂತ ಪಂಥ- ಡಾ. ಬೆಳವಾಡಿ ಮಂಜುನಾಥ, ಆರೂಢ ಪಂಥ- ಡಾ. ಎಂ.ಬಿ. ಕಟ್ಟಿ,  ಶೈವ ಪಂಥ- ಡಾ. ರೇಣುಕಾ ಪ್ರಸಾದ್ ಪಿ.ಆರ್, ದಾಸ ಪಂಥ- ಡಾ. ಗುರುರಾಜ ಪೋಶೆಟ್ಟಿಹಳ್ಳಿರವರು ಅಭಿಪ್ರಾಯ ಮಂಡಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post