ರಾಸಾಯನಿಕ ಗೊಬ್ಬರಕ್ಕಿಂತ ಸಾವಯವ ಗೊಬ್ಬರದ ಬಳಕೆ ಉತ್ತಮ: ಬಿಲ್ಲಂಪದವು ನಾರಾಯಣ ಭಟ್

Chandrashekhara Kulamarva
0

ಪುತ್ತೂರು: ಯಾವುದೇ ಒಂದು ಕೃಷಿಯು ಫಲವತ್ತತೆಯಾಗಿ ಬೆಳೆಯಬೇಕೆಂದರೆ ರಾಸಾಯನಿಕ ಗೊಬ್ಬರಕ್ಕಿಂತ ಸಾವಯವ ಗೊಬ್ಬರದ ಬಳಕೆ ಮಾಡುವುದು ಉತ್ತಮ ಇದರಿಂದಾಗಿ ಮಣ್ಣಿನ ಫಲವತ್ತತೆಯನ್ನು ಕೂಡಾ ನಾವು ಹೆಚ್ಚಿಸಿಕೊಳ್ಳಬಹುದು ಎಂದು ಬಿಲ್ಲಂಪದವು ನಾರಾಯಣ ಭಟ್ ಅವರು ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜಿನ ಅರ್ಥಶಾಸ್ತ್ರ ವಿಭಾಗ ಹಾಗೂ ಐಕ್ಯೂಎಸಿ ವಿಭಾಗ ಆಯೋಜಿಸಿದ ಉದ್ಯೋಗ ಮತ್ತು ತರಬೇತಿ ಘಟಕದ ಆಶ್ರಯದಲ್ಲಿ ನಡೆದ ಸಾವಯವ ಕೃಷಿ, ಬೀಜೋತ್ಪಾದನೆ ಹಾಗೂ ಮಾರಾಟ ಎಂಬ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಸಾವಯವ ಗೊಬ್ಬರದ ಬಳಕೆಯಿಂದ ಏನೆಲ್ಲಾ   ಉಪಯೋಗ ಹಾಗೂ ರಾಸಾಯನಿಕ ಗೊಬ್ಬರ ಎಷ್ಟು ಮಾರಕ ಎಂಬುವುದರ ಬಗ್ಗೆ ಮಾಹಿತಿ ನೀಡಿದರು.


ಈ ಸಂದರ್ಭದಲ್ಲಿ ವಿವೇಕಾನಂದ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಅವರು ಮಾತನಾಡಿ ನಾವು ಸೇವಿಸುವ ಆಹಾರದಲ್ಲಿ ಪರಿಶುದ್ಧತೆ ಹಾಗೂ ಉತ್ತಮ ಉತ್ಪನ್ನ ಬೇಕು. ಆದರೆ ರಾಸಾಯನಿಕ ಗೊಬ್ಬರಗಳನ್ನು ಬಳಸಿ ತಯಾರಿಸಿದ ಉತ್ಪನ್ನವು ಸ್ವತಃ ನಾವೇ ವಿಷವನ್ನು ತಯಾರಿಸಿ ಸೇವಿಸಿದ ಹಾಗೆ ಎಂದು ಅಭಿಪ್ರಾಯಪಟ್ಟರು.


ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಗೋವಿಂದ ರಾಜ ಶರ್ಮ ಸ್ವಾಗತಿಸಿದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಅರುಣ್ ಪ್ರಕಾಶ್ ವಂದಿಸಿ, ಲ್ಯಾಬ್ ಸಹಾಯಕ ದಿನೇಶ್ ಪಡಿಬಾಗಿಲು ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



Post a Comment

0 Comments
Post a Comment (0)
To Top