ಮುಳ್ಳೇರಿಯಾ ಹವ್ಯಕ ಮಂಡಲದ ಪೆರಡಾಲ ವಲಯ ಸಭೆ

Upayuktha
0


ಬದಿಯಡ್ಕ: ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ  ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿರುವ ಮುಳ್ಳೇರಿಯಾ ಮಂಡಲದ ಪೆರಡಾಲ ವಲಯ ಸಭೆಯು ಮೇ 1ರಂದು ಭಾನುವಾರ ವಲಯ ಶಿಷ್ಯಮಾಧ್ಯಮ ಪ್ರಧಾನ ಗಣೇಶ ಪಟ್ಟಾಜೆ ಇವರ ಮನೆಯಲ್ಲಿ ನಡೆಸಲಾಯಿತು.


ಶಂಖನಾದ, ಗುರುವಂದನೆ, ಗೋಸ್ತುತಿಯೊಂದಿಗೆ ಸಭೆ ಪ್ರಾರಂಭವಾಯಿತು. ಗಣೇಶ ಪಟ್ಟಾಜೆ ಧ್ವಜಾರೋಹಣ ಗೈದರು. ವಲಯ ಕಾರ್ಯದರ್ಶಿ ವಿಷ್ಣುಪ್ರಸಾದ ಕೋಳಾರಿ ಗತಸಭೆಯ ವರದಿ ಹಾಗೂ ಯೋಜನಾ ವರದಿ ನೀಡಿದರು. ಮಂಡಲ ಸುತ್ತೋಲೆಗಳನ್ನು ವಾಚಿಸಲಾಯಿತು. ಕೋಶಾಧಿಕಾರಿ ಜಯಶಂಕರ ಕುಳಮರ್ವ ಲೆಕ್ಕಪತ್ರ ಮಂಡಿಸಿದರು. ವಲಯ ಅಧ್ಯಕ್ಷರಾದ ಶ್ರೀ ಪದ್ಮರಾಜ ಪಟ್ಟಾಜೆಯವರು ಸಭೆಯನ್ನು ಮುನ್ನಡೆಸಿದರು.

ಮಂಡಲ ಕೋಶಾಧಿಕಾರಿಗಳಾದ ಶ್ರೀಹರಿ ಪೆರ್ಮುಖ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿದರು.


ವಂಶವೃಕ್ಷ ಮಾಹಿತಿ ಸಂಗ್ರಹ ಹಾಗೂ ವಿ ವಿ ವಿ ಸಂಪನ್ಮೂಲ ಸಂಗ್ರಹ ಉದ್ದೇಶದಿಂದ ವಲಯದಲ್ಲಿ ಅಭಿಯಾನ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು. ಧರ್ಮಭಾರತೀ, ಮುಷ್ಟಿಭಿಕ್ಷೆ ಮೊದಲಾದ ಸೇವಾಯೋಜನೆಗಳನ್ನು ವಲಯದಲ್ಲಿ ಇನ್ನಷ್ಟು ಸಕ್ರಿಯಗೊಳಿಸುವ ಬಗ್ಗೆ ಚರ್ಚಿಸಲಾಯಿತು.


ರಾಮತಾರಕ ಜಪ, ಶಾಂತಿಮಂತ್ರ, ಶಂಖನಾದ ಹಾಗೂ ಧ್ವಜಾವತರಣದೊಂದಿಗೆ ಸಭೆ ಮುಕ್ತಾಯವಾಯಿತು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top