ಜನಸೇವಾ ಚಾರಿಟೇಬಲ್ ಟ್ರಸ್ಟ್‌ನಿಂದ ಬ್ರಾಹ್ಮಣ ಹೆಣ್ಮಕ್ಕಳ ವಿದ್ಯಾ ಯೋಜನೆ

Upayuktha
0

ಬೆಂಗಳೂರು: ಬೆಂಗಳೂರಿನ ಜನಸೇವಾ ಚಾರಿಟೇಬಲ್ ಟ್ರಸ್ಟ್‌ ಬ್ರಾಹ್ಮಣ ವಿದ್ಯಾರ್ಥಿನಿಯರಿಗಾಗಿ 'ಬ್ರಾಹ್ಮಣ ಹೆಣ್ಣುಮಕ್ಕಳ ವಿದ್ಯಾ ಯೋಜನೆ' ಯನ್ನು ಆರಂಭಿಸಿದೆ. ಬ್ರಾಹ್ಮಣ ಸಮುದಾಯದ, ಆರ್ಥಿಕವಾಗಿ ದುರ್ಬಲರಾಗಿರುವ ಕುಟುಂಬದ ಹೆಣ್ಣುಮಕ್ಕಳು ಈ ಯೋಜನೆಯ ಫಲಾನುಭವಿಗಳಾಗಲು ಅರ್ಹರು.


ಈ ಕುರಿತು ಜನಸೇವಾ ಟ್ರಸ್ಟ್ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ನಿಯಮಾವಳಿಗಳನ್ನು ನೀಡಲಾಗಿದ್ದು, ಆಸಕ್ತ ಕುಟುಂಬದವರು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದೆ.


ನಿಯಮಾವಳಿಗಳು:

1. ಅರ್ಜಿದಾರ ವಿದ್ಯಾರ್ಥಿನಿ ಬ್ರಾಹ್ಮಣ ಸಮುದಾಯದವಳಾಗಿರಬೇಕು.

2. 5ರಿಂದ-10ನೇ ತರಗತಿಯಲ್ಲಿ ಕಲಿಯುತ್ತಿರಬೇಕು.

3. ಕಳೆದೆರಡು ಶೈಕ್ಷಣಿಕ ವರ್ಷಗಳ ಅಂತಿಮ ಪರೀಕ್ಷೆಯಲ್ಲಿ ಕನಿಷ್ಟ 75% ಅಂಕ ಗಳಿಸಿ ತೇರ್ಗಡೆಯಾಗಿರಬೇಕು.

4. ಹೆತ್ತವರು ಬಿಪಿಎಲ್ (Below Powerty Line) ಅಥವಾ ತತ್ಸಮಾನ ಪಡಿತರ ಕಾರ್ಡ್ ಯಾ ಆರ್ಥಿಕ ದುರ್ಬಲ ವರ್ಗ (Economically Weaker Section) ರುಜುಪಡಿಸುವ ಪ್ರಮಾಣ ಪತ್ರ ಹೊಂದಿರಬೇಕು.

5. ಅರ್ಜಿದಾರ ವಿದ್ಯಾರ್ಥಿನಿಯ ಹೆತ್ತವರು/ರಕ್ಷಕರು ಸ್ಥಳೀಯ ಬ್ರಾಹ್ಮಣ ಸಂಘದ ಸದಸ್ಯರಾಗಿದ್ದು ಅಲ್ಲಿನ ಶಿಫಾರಸು ಪತ್ರ ಪಡೆದಿರಬೇಕು.

6. ವಿದ್ಯಾರ್ಥಿವೇತನದ ಮೊತ್ತ, ಆವರ್ತನ, ಅರ್ಜಿ ಪುರಸ್ಕರಿಸುವ, ತಿರಸ್ಕರಿಸುವ ಸಂಪೂರ್ಣ ಹಕ್ಕು ಜನಸೇವಾ ಚಾರಿಟೇಬಲ್ ಅಸೋಸಿಯೇಷನ್ ಪದಾಧಿಕಾರಿಗಳ ನಿರ್ಣಯಕ್ಕೆ ಬರುವುದು. 


ಭರ್ತಿ ಮಾಡಿದ ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:

1. ಬಿಪಿಎಲ್ (Below Poverty Line) ಅಥವಾ ತತ್ಸಮಾನ ಪಡಿತರ ಕಾರ್ಡ್ ಯಾ ಆರ್ಥಿಕ ದುರ್ಬಲ ವರ್ಗ (Economically Weaker Section) ರುಜುಪಡಿಸುವ ಪ್ರಮಾಣ ಪತ್ರ.

2. ಹೆತ್ತವರ ಮತ್ತು ವಿದ್ಯಾರ್ಥಿನಿಯ ಬ್ಯಾಂಕ್ ಖಾತೆ ವಿವರ ಮತ್ತು ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್

3. ಎರಡು ವರ್ಷಗಳ ಅಂಕಪಟ್ಟಿ

4. ಶಾಲೆಯಿಂದ ಪಡೆದ ಶಾಲಾ ಶುಲ್ಕದ ವಿವರ.

5. ಪ್ರಸಕ್ತ ಶೈಕ್ಷಣಿಕ ‌ವರ್ಷದ ಶುಲ್ಕ ಪಾವತಿ ರಶೀದಿ ಯಾ ತತ್ಸಂಬಂಧಿತ ಶಾಲೆಯಿಂದ ನೀಡಿದ ಪ್ರಮಾಣಪತ್ರ (Certificate issue by school in its letterhead mentioning school fee payment confirmation) ಮತ್ತು ಗುರುತಿನ ಚೀಟಿ (Identify Card issued by school).

6. ಭರ್ತಿ ಮಾಡಿದ ಅರ್ಜಿಗಳು ಜೂನ್ 30ರ ಒಳಗೆ ತಲುಪಬೇಕಾದ ವಿಳಾಸ:

 

Janaseva Charitable Association (R.), # 369, 7th Cross, Akashavani Layout, Hebbala-Dasarahalli, Bengaluru - 560024


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top