ಮಂಗಳೂರು ವಿವಿ ಪ್ರಸಾರಾಂಗದಿಂದ ಪದವಿ ಕನ್ನಡ ಪಠ್ಯ ಬಿಡುಗಡೆ

Upayuktha
0

ಮುಡಿಪು: ಮಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ಪಠ್ಯಪುಸ್ತಕಗಳು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಅಧ್ಯಾಪಕರ ಒಳಗೊಳ್ಳುವಿಕೆಯ ಮೂಲಕ ರೂಪುಗೊಳ್ಳುತ್ತಿರುವುದು ಶ್ಲಾಘನೀಯ. ಇದರಿಂದ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕಾಲದ ಅಗತ್ಯವನ್ನು ಅರಿತು ಪಠ್ಯದ ರಚನೆ ಸಾಧ್ಯವಾಗುತ್ತದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್.‌ ಯಡಪಡಿತ್ತಾಯ ಹೇಳಿದರು.


ಅವರು ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ ಸಭಾಂಗಣದಲ್ಲಿ ಪ್ರಸಾರಾಂಗದ ಮಂಗಳ ಪಠ್ಯ ಪುಸ್ತಕ ಮಾಲಿಕೆಯ ಪದವಿ ನಾಲ್ಕನೇ ಚತುರ್ಮಾಸದ ಕನ್ನಡ ಪಠ್ಯ ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.


ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗವು ಪಠ್ಯ ಪುಸ್ತಕಗಳ ಜೊತೆಗೆ ಸ್ಥಳೀಯ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಬಿಂಬಿಸುವ ಸ್ಥಳೀಯ ಲೇಖಕರ ಮೌಲಿಕ ಕೃತಿಗಳನ್ನು ಪ್ರಕಟಿಸುತ್ತಿರುವುದು ಅಭಿನಂದನೀಯ ಎಂದರು.


ಸಮಾರಂಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಡಾ. ಕಿಶೋರ್‌ ಕುಮಾರ್‌ ಸಿ.ಕೆ ಮಾತನಾಡಿ ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಕಾಲದಲ್ಲಿ ಪಠ್ಯ ಪುಸ್ತಕಗಳನ್ನು ಪ್ರಕಟಿಸುವುದು ಸವಾಲಿನ ಕೆಲಸ ಆದರೆ ಪದವಿ ತರಗತಿಗಳು ಆರಂಭಗೊಳ್ಳುವ ಮುನ್ನವೇ ಕನ್ನಡ ಪಠ್ಯ ಪುಸ್ತಕಗಳು ಬಿಡುಗಡೆಗೊಳ್ಳುತ್ತಿರುವುದು ಅಭಿನಂದನೀಯ ಎಂದರು.


ಸಮಾರಂಭದಲ್ಲಿ ಪದವಿ ನಾಲ್ಕನೇ ಚತುರ್ಮಾಸದ ಕನ್ನಡ ಪಠ್ಯ ಪುಸ್ತಕಗಳಾದ ಕಲಾ ಗಂಗೋತ್ರಿ-4, ವಿಜ್ಞಾನ ಗಂಗೋತ್ರಿ-4, ವಾಣಿಜ್ಯ ಗಂಗೋತ್ರಿ-4 ಮತ್ತು ಸಾಹಿತ್ಯ ಗಂಗೋತ್ರಿ-4 ಕೃತಿಗಳನ್ನು ಬಿಡುಗಡೆಗೊಳಿಸಲಾಯಿತು. ಬಿಸಿಎ ಮತ್ತು ಬಿಬಿಎಗಳಿಗೆ ಹಿಂದಿನ ನುಡಿ ನೋಟ ಮತ್ತು ನುಡಿ ಸಾಲು ಪಠ್ಯ ಪುಸ್ತಕಗಳೇ ಮುಂದುವರಿಯಲಿದೆ.  


ಪ್ರಸಾರಾಂಗದ ನಿರ್ದೇಶಕರು ಮತ್ತು ಪಠ್ಯ ಪುಸ್ತಕದ ಪ್ರಧಾನ ಸಂಪಾದಕರಾದ ಪ್ರೊ. ಸೋಮಣ್ಣ ಸ್ವಾಗತಿಸಿದರು. ಕಾರ್ಯನಿರ್ವಾಹಕ ಸಂಪಾದಕರಾದ ಡಾ. ಮಾಧವ ಎಂ.ಕೆ ವಂದಿಸಿದರು. ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಡಾ. ಧನಂಜಯ ಕುಂಬ್ಳೆ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top