|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೊಪ್ಪ: ಮನೆಯಂಗಳದಲ್ಲಿ ಯಕ್ಷಗಾನ ತಾಳಮದ್ದಳೆ

ಕೊಪ್ಪ: ಮನೆಯಂಗಳದಲ್ಲಿ ಯಕ್ಷಗಾನ ತಾಳಮದ್ದಳೆ

 

ಇದು ಮಾರ್ಕಂಡೇಯ ಮಹರ್ಷಿಗಳು ಪಾಂಡವರಿಗೆ ಹೇಳಿದ ಕತೆ


ಸತ್ಯವಾನ-ಸಾವಿತ್ರಿಯರ ಈ ಕಥೆಯು ವ್ಯಾಸ ಮಹಾಭಾರತದ ಅರಣ್ಯಕ ಪರ್ವದಲ್ಲಿ ಬರುತ್ತದೆ. ಈ ಕಥೆಯನ್ನು ಋಷಿ ಮಾರ್ಕಂಡೇಯನು ಯುಧಿಷ್ಠಿರನಿಗೆ ಹೇಳಿದ್ದು.


**


ಧರ್ಮಾತ್ಮ ಸತ್ಯಸಂಧ ಜಿತೇಂದ್ರಿಯ ಅಶ್ವಪತಿ ಎನ್ನುವ ಒಬ್ಬ ರಾಜನಿದ್ದ. ಅವನು ಯಜ್ಞಗಳನ್ನು ಮಾಡುತ್ತಿದ್ದನು; ದಾನ ಧರ್ಮಗಳನ್ನು ಮಾಡುತ್ತ ಶ್ರೇಷ್ಠ ರಾಜನಾಗಿದ್ದ.  


ಕ್ಷಮಾವಂತನೂ, ಸತ್ಯವನ್ನೇ ಮಾತನಾಡುವವನೂ, ಇಂದ್ರಿಯಗಳನ್ನು ಗೆದ್ದವನೂ ಆದ ಅವನಿಗೆ ಮಕ್ಕಳಿರಲಿಲ್ಲ. 


ವಯಸ್ಸನ್ನು ದಾಟಿದ್ದ ಅವನಿಗೆ ಇದೊಂದು ಸಂತಾಪದ ವಿಷಯವೇ ಆಗಿತ್ತು. ತನಗೆ ಮಕ್ಕಳಾಗಬೇಕೆಂದು ಅವನು ಅಲ್ಪವೇ ಆಹಾರವನ್ನು ಸೇವಿಸುತ್ತಾ  ಪ್ರತಿದಿನವೂ ಸಾವಿತ್ರಿ ದೇವತೆಯನ್ನು ಪೂಜಿಸುತ್ತಿದ್ದನು. ದಿನದ ಆರನೆಯ ಒಂದು ಭಾಗದಲ್ಲಿ ಮಾತ್ರ ಅಲ್ಪ ಆಹಾರವನ್ನು ತೆಗೆದುಕೊಳ್ಳುತ್ತಿದ್ದನು. ಈ ರೀತಿ ನಿಯಮದಲ್ಲಿದ್ದುಕೊಂಡು ಹದಿನೆಂಟು ವರ್ಷಗಳು ಮಾಡಿದ ವ್ರತಕ್ಕೆ ಸಾವಿತ್ರಿ ದೇವತೆಯು ಅವನ ಮೇಲೆ ಸಂತುಷ್ಟಳಾಗಿ ಕಾಣಿಸಿಕೊಂಡಳು. 


ಅಗ್ನಿಹೋತ್ರದಿಂದ ಎದ್ದುಬಂದ ಆ ಮಹತಾನ್ವಿತೆ ವರದೆಯು ಹರ್ಷದಿಂದ ರಾಜನಿಗೆ ಹೇಳಿದಳು: “ರಾಜ, ನಿನ್ನ ಬ್ರಹ್ಮಚರ್ಯ, ಪರಿಶುದ್ಧತೆ, ಧರ್ಮ ನಿಯಮ, ಮತ್ತು ಭಕ್ತಿಗೆ ಸಂತುಷ್ಟಳಾಗಿದ್ದೇನೆ. ವರವನ್ನು ಕೇಳು!” ಎಂದು.


ಅಶ್ವಪತಿಯು ಹೇಳಿದನು: “ದೇವೀ! ಮಕ್ಕಳು ಬೇಕೆಂಬ ಆಸೆಯಿಂದ ನಾನು ಈ ವ್ರತ ಮಾಡಿದ್ದೇನೆ, ನನಗೆ ಮಕ್ಕಳ ಭಾಗ್ಯವನ್ನು ಕರುಣಿಸು" ಎಂದಾಗ...


"ಆಗಲಿ, ನಿನಗೆ ಶೀಘ್ರದಲ್ಲಿಯೇ ಸೌಮ್ಯ ತೇಜಸ್ವಿನೀ ಆದ ಕನ್ಯೆ ಒಬ್ಬಳು ಜನಿಸುವಳು" ಎಂದು ಆಶೀರ್ವದಿಸಿ ಸಾವಿತ್ರಿ ದೇವಿ ಅಂತರ್ಧಾನಳಾದಳು. 


ಹೀಗೆ ದಿನ ಕಳೆಯುತ್ತಿರಲು, ಅಶ್ವಪತಿ ರಾಜನಿಗೆ ಸಾವಿತ್ರಿ ದೇವತೆಯಿಂದ ಒಬ್ಬಳು ಮಗಳು ಜನಿಸುತ್ತಾಳೆ.  


ಸಾವಿತ್ರಿ ದೇವತೆಯ ಅನುಗ್ರಹದಿಂದ ಜನಿಸಿದ ಮಗಳಿಗೆ “ಸಾವಿತ್ರಿ” ಎಂದೇ ನಾಮಕರಣ ಮಾಡಿದರು. 


ಸಮಯವು ಕಳೆದಂತೆ ಆ ಕನ್ಯೆಯು ಯೌವನಾವಸ್ಥೆಗೆ ಬಂದಳು. ಪ್ರಜ್ವಲಿಸುತ್ತಿರಲು ಅವಳ ತೇಜಸ್ಸನ್ನು ನೋಡಿದ ಯಾವ ಪುರುಷನೂ ಅವಳನ್ನು ವರಿಸಲಿಲ್ಲ.


ತಂದೆ ಅಶ್ವಪತಿಯೇ ಮಗಳಿಗೆ ಪತಿಯನ್ನು ಪಡೆಯುವ ಮಾರ್ಗವನ್ನು ಸೂಚಿಸಿ ಅರಮನೆಯಿಂದ ಕಳಿಸುತ್ತಾನೆ.


ಕುತೂಹಲದ ಪ್ರಸಂಗ ಶುರುವಾಗುವುದು ಇಲ್ಲಿಂದ....


ಮುಂದೇನಾಯಿತು? ಅವಳಿಗೆ ವರ ಸಿಕ್ಕಿದನೆ? ಮದುವೆ ಆಯಿತೆ? ನಾರದರು ಅಶ್ವಪತಿಗೆ ಹೇಳಿದ ಆ ಕರಾಳ ಭವಿಷ್ಯವಾಣಿ ಏನು? ಸಾವಿತ್ರಿ ಯಮನನ್ನೇ ಮಾತಿನ ಪಾಶದಲ್ಲಿ ಹಿಡಿದಿದ್ದು ಹೇಗೆ? ಯಾಕಾಗಿ? ಈ ಎಲ್ಲ ಕುತೂಹಲಕಾರಿ ಪ್ರಸಂಗಗಳನ್ನು ತಾಳಮದ್ದಳೆಯ ಕಥಾಭಾಗದಲ್ಲಿ ಆಸ್ವಾದಿಸೋಣ.


ಆ ತಾಳಮದ್ದಳೆಗೆ ಹೋಗುವ ದಾರಿ ಇಲ್ಲಿದೆ:



***


ಮನೆಯಂಗಳದಲ್ಲಿ ಯಕ್ಷಗಾನ ತಾಳಮದ್ದಳೆ. ಪ್ರಸಂಗ ಸತ್ಯವಾನ ಸಾವಿತ್ರಿ

ದಿನಾಂಕ 30.04.2022. ಸ್ಥಳ ಕುಮರಿಗದ್ದೆ, ಸಿಗದಾಳ್.


ಹಿಮ್ಮೇಳ:

ಗಣಪತಿ ಪೂಜೆ: ವಿದ್ಯಾ ಭಾರತಿ, ಕುಡ್ಣಹಳ್ಳಿ,

ಭಾಗವತರು: ಪ್ರಸನ್ನ ಭಟ್ ಬಾಳ್ಕಲ್,

ಮದ್ದಳೆ: ಸುನಿಲ್ ಭಂಡಾರಿ ಕಡತೋಕ,

ಚಂಡೆ: ಗಣೇಶ್‌ಮೂರ್ತಿ ಹೆಚ್.ಎಸ್. ಹುಲುಗಾರು.


ಮುಮ್ಮೇಳದಲ್ಲಿ-

ಯಮ: ಶಂಭುಶರ್ಮ ವಿಟ್ಳ, 

ಸಾವಿತ್ರಿ: ವಾಸುದೇವ ರಂಗಾಭಟ್, ಉಡುಪಿ ಮತ್ತು ರಮೇಶ್ ಆಚಾರ್ಯ ಮಂಗಳಗಾರು,

ಸತ್ಯವಾನ: ಡಾ|| ವಾದಿರಾಜ ಕಲ್ಲೂರಾಯ, ಕಿನ್ನಕಂಬಳ,

ನಾರದ: ಸೀತಾರಾಮಚಂದು ಹೆಗಡೆ, ಶಿರಸಿ,

ಚಿತ್ರಗುಪ್ತ: ಜನಾರ್ದನ ಎಂ.ಎಸ್. ಮಂಡಗಾರು

ಅಶ್ವಪತಿ: ನಾಗೇಂದ್ರ ಎ.ಆರ್. ಅಡ್ಡಗದ್ದೆ,

ದ್ಯುಮತ್ಸೇನ: ಅಶೋಕ, ಸಿಗದಾಳ್,

ಶೈಬ್ಯೆ: ಅಭಿರಾಮ, ಸಿಗದಾಳ್,

ಯಮ ಕಿಂಕರರು: ಅರವಿಂದ ಸಿಗದಾಳ್ ಮತ್ತು ವಿದ್ಯಾಧರ, ಮೇಲುಕೊಪ್ಪ


-ಅರವಿಂದ ಸಿಗದಾಳ್, ಮೇಲುಕೊಪ್ಪ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post