|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ವಿದ್ಯೆ ಕಲಿಸಿದ ಗುರು ಹಾಗೂ ವಿದ್ಯಾಲಯವನ್ನು ನಾವೆಂದಿಗೂ ಮರೆಯಬಾರದು: ಉಡುಪಿ ಎಸ್‌ಪಿ ವಿಷ್ಣುವರ್ಧನ

ವಿದ್ಯೆ ಕಲಿಸಿದ ಗುರು ಹಾಗೂ ವಿದ್ಯಾಲಯವನ್ನು ನಾವೆಂದಿಗೂ ಮರೆಯಬಾರದು: ಉಡುಪಿ ಎಸ್‌ಪಿ ವಿಷ್ಣುವರ್ಧನ


ನಿಟ್ಟೆ: "ವಿದ್ಯಾರ್ಥಿ ಜೀವನದಲ್ಲಿ ವಿದ್ಯಾರ್ಜನೆಗೆ ಸಿಕ್ಕ ಪ್ರೋತ್ಸಾಹ ಹಾಗೂ ನಮ್ಮ ಛಲ ನಮ್ಮನ್ನು ಉತ್ತಮ ದಾರಿಯತ್ತ ಕೊಂಡೊಯ್ಯತ್ತದೆ. ವಿದ್ಯೆ ಕಲಿಸಿದ ಗುರು, ವಿದ್ಯೆ ನೀಡಿದ ವಿದ್ಯಾಲಯ ಹಾಗೂ ವಿದ್ಯಾರ್ಜನೆಗೆ ಅನುಕೂಲಮಾಡಿಕೊಟ್ಟ ಹೆತ್ತವರನ್ನು ನಾವು ಎಂದಿಗೂ ಮರೆಯಬಾರದು" ಎಂದು ಉಡುಪಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎನ್ ವಿಷ್ಣುವರ್ಧನ ಐಪಿಎಸ್ ಅಭಿಪ್ರಾಯಪಟ್ಟರು.


ಅವರು ಮೇ.12 ರಂದು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ಮಟ್ಟದ 4 ದಿನಗಳ ಟೆಕ್ನೋ-ಕಲ್ಚರಲ್ ಫೆಸ್ಟ್ 'ಇನ್ಕ್ರೆಡಿಯಾ’ 2022ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.


‘ಇಂದಿನ ದಿನಗಳಲ್ಲಿ ಹದಿಹರೆಯದ ವಯಸ್ಸಿನ ಮಂದಿ ಆನ್ಲೈನ್ ಫ್ರಾಢ್‍ಗಳು ಅಂತೆಯೇ ಡ್ರಗ್ಸ್‍ನಂತಹ ಮಾದಕದ್ರವ್ಯಗಳಿಗೆ ಬಲಿಪಶುಗಳಾಗುತ್ತಿರುವುದು ಬೇಸರದ ಸಂಗತಿ. ಇಂತಹ ಚಟಗಳಿಂದ ನಮ್ಮ ಯುವಜನರನ್ನು ಕಾಪಾಡುವ ಜವಾಬ್ದಾರಿ ಪ್ರತಿಯೋರ್ವ ನಾಗರೀಕನದ್ದಾಗಿದೆ. ವಿದ್ಯಾರ್ಥಿಗಳು ರಸ್ತೆಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.


ಕಾರ್ಯಕ್ರಮಕ್ಕೆ ಇನ್ನೋರ್ವ ಅತಿಥಿಯಾಗಿ ಬಂದು 'ಇನ್ಕ್ರೆಡಿಯಾ'22'ನ್ನು ಉದ್ಘಾಟಿಸಿದ ನಟ, ನಾಟಕಕಾರ, ಯಕ್ಷಕಲಾವಿದ ಭೋಜರಾಜ ವಾಮಂಜೂರು ಅವರು ಮಾತನಾಡುತ್ತಾ ‘ಯಾವುದೇ ಪ್ರಯತ್ನಕ್ಕೆ ಕೈಹಾಕುವ ಸಂದರ್ಭದಲ್ಲಿ ವಿವಿಧ ಬಗೆಯ ಟೀಕೆಗಳು ಕೇಳಿಬರುವುದು ಸಹಜ, ಆದರೆ ಬಂದ ಎಲ್ಲಾ ಕಷ್ಟಗಳನ್ನೂ ಮೆಟ್ಟಿ ನಮ್ಮ ಕಸಸಿನ ಹಾದಿಯಲ್ಲಿ ಸಾಗಬೇಕು. ಇಂದಿನ ಈ ಕಾರ್ಯಕ್ರಮವು ನಿಟ್ಟೆ ಕಾಲೇಜು ತಾಂತ್ರಿಕ ಶಿಕ್ಷಣದೊಂದಿಗೆ ಸಾಂಸ್ಕೃತಿಕ ಕಲಾಪ್ರಕಾರಗಳಿಗೆ ಹಾಗೂ ಕ್ರೀಡಾಚಟುವಟಿಕೆಗಳಿಗೆ ಉತ್ತಮ ಬೆಂಬಲ ನೀಡುತ್ತಿರುವುದಕ್ಕೆ ಹಿಡಿದ ಕೈಗನ್ನಡಿ ಎಂದರೆ ಅತಿಶಯೋಕ್ತಿಯಲ್ಲ. ಇಂತಹ ವಿದ್ಯಾರ್ಥಿ ಚಟುವಟಿಕೆಗಳು ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಹುಮ್ಮಸ್ಸು ಹಾಗೂ ಆತ್ಮವಿಶ್ವಾಸವನ್ನು ತುಂಬಲು ಸಹಕಾರಿಯಾಗುತ್ತದೆ" ಎಂದು ಅವರು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಕ್ಯಾಂಪಸ್‍ನ ರಿಜಿಸ್ಟ್ರಾರ್ ಶ್ರೀ ಯೋಗೀಶ್ ಹೆಗ್ಡೆಯವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ಕೋವಿಡ್-19 ಸಲುವಾಗಿ ಕಳೆದ ವರ್ಷ ‘ಇನ್ಕ್ರೆಡಿಯಾ’ವನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿಲ್ಲ. ಕೋವಿಡ್‍ನಂತಹ ಕಠಿಣಪರಿಸ್ಥಿತಿಯಲ್ಲಿ ಕಾಲೇಜು ತಂತ್ರಜ್ಞಾನದ ಮೂಲಕ ಶಿಕ್ಷಣ ಚಟುವಟಿಕೆಗಳನ್ನು ಮುಂದುವರೆಸುವಲ್ಲಿ ಯಶಸ್ವಿಯಾಗಿದೆ. ಕಾಲೇಜುಗಳಲ್ಲಿ ಸಾಂಸ್ಕøತಿಕ ಉತ್ಸವಗಳು ವಿದ್ಯಾರ್ಥಿಗಳಿಗೆ ಹಲವಾರು ವಿಚಾರಗಳನ್ನು ತಿಳಿಸಿಕೊಡುತ್ತದೆ’ ಎಂದರು.


ಕಾರ್ಯಕ್ರಮದಲ್ಲಿ ಈ ಸಂಸ್ಥೆಯ ಹಳೆ ವಿದ್ಯಾರ್ಥಿ- ಉದ್ಯಮಿ ಎನ್. ಸಂಜಿತ್ ಶೆಟ್ಟಿ ಪ್ರಾಯೋಜಿತ ಪ್ರಶಸ್ತಿಯನ್ನು ವಿತರಿಸಲಾಯಿತು. ಇದೇ ಸಂದರ್ಭದಲ್ಲಿ ಕಾಲೇಜಿನ ವಾರ್ಷಿಕೋತ್ಸವದ ಅಂಗವಾಗಿ ಶೈಕ್ಷಣಿಕ ಹಾಗೂ ಕ್ರೀಡಾ ವಿಭಾಗಗಳಲ್ಲಿ ಉನ್ನತ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. 

ಕಾರ್ಯಕ್ರಮದಲ್ಲಿ ನಿಟ್ಟೆ ತಾಂತ್ರಿಕ ವಿದ್ಯಾಲಯದ ಅಧ್ಯಾಪಕ, ಅಧ್ಯಾಪಕೇತರ ವೃಂದ, ದೇಶದ ವಿವಿಧ ಕಾಲೇಜಿನ ಸುಮಾರು 6000 ವಿದ್ಯಾರ್ಥಿಗಳು ಪ್ರಥಮದಿನದಂದು ಭಾಗವಹಿಸಿದ್ದರು. 


ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್‍ಕರ್ ಸ್ವಾಗತಿಸಿ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು. ಉಪಪ್ರಾಂಶುಪಾಲ ಡಾ.ಐ.ಆರ್ ಮಿತ್ತಂತಾಯ ವಿದ್ಯಾರ್ಥಿ ಸಾಧಕರ ಪಟ್ಟಿಯನ್ನು ವಾಚಿಸಿದರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್ ಪೂಜಾರಿ ಕ್ರೀಡಾ ವಿಭಾಗದ ಸಾಧಕರ ಪಟ್ಟಿಯನ್ನು ವಾಚಿಸಿದರು. ಕೌನ್ಸೆಲಿಂಗ್, ವೆಲ್ಫೇರ್, ಟ್ರೈನಿಂಗ್ & ಪ್ಲೇಸ್ಮೆಂಟ್ ವಿಭಾಗದ ಮುಖ್ಯಸ್ಥ ಭರತ್ ಕುಮಾರ್ ಅವರು ಎನ್. ಸಂಜಿತ್ ಶೆಟ್ಟಿ ಪ್ರಾಯೋಜಿತ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಇನ್ಕ್ರೆಡಿಯಾ ಉತ್ಸವದ ವಿದ್ಯಾರ್ಥಿ ಸಂಯೋಜಕ ರಿತೇಶ್ ಬೇಕಲ್ ಇನ್ಕ್ರೆಡಿಯಾ ಉತ್ಸವದ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ಸಂಯೋಜಕ ಡಾ.ಸುಬ್ರಹ್ಮಣ್ಯ ಭಟ್, ಡೀನ್-ಸ್ಟೂಡೆಂಟ್ ವೆಲ್ಫೇರ್ ವಂದಿಸಿದರು. ವಿದ್ಯಾರ್ಥಿಗಳಾದ ತೇಜಸ್ ಹಾಗೂ ಮನೀಷಾ ಕಾರ್ಯಕ್ರಮ ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


0 Comments

Post a Comment

Post a Comment (0)

Previous Post Next Post