ನಮ್ಮ ನಗುವಿಗೆ, ಕಣ್ಣೀರಿಗೆ ಸಾಥಿಯಾಗಿ ನಮ್ಮೊಂದಿಗೆ ಬೆರೆಯುವ ಆ ಮತ್ತೊಂದು ಮನಸ್ಸಿನ ರೂಪವೇ ಸ್ನೇಹ .. ಆ ಮನಸ್ಸಿನಿಂದ ಸಿಗುವ ಕಾಳಜಿ ಆತ್ಮೀಯತೆ ಮತ್ತು ಸಂತೋಷವೇ ಗೆಳೆತನದ ಆಹ್ಲಾದಕ್ಕೆ ಸಾಕ್ಷಿ. ಮನಸ್ಸು ಮನಸ್ಸುಗಳ ಬಾಂಧವ್ಯವೇ ಗೆಳತನ.. ಕೆಲವೊಮ್ಮೆ ನಮ್ಮ ಸಂತೋಷ ಮತ್ತು ನೋವನ್ನು ಮನೆಯವರ ಹತ್ತಿರ ಹಂಚಿಕೊಳ್ಳಲಾಗದೆ ಆತ್ಮೀಯ ಗೆಳೆಯ /ಗೆಳತಿಯೊಂದಿಗೆ ಹಂಚಿಕೊಳ್ಳುತ್ತೇವೆ. ಸ್ನೇಹ ಯಾವಾಗ ಎಲ್ಲಿ ಬೇಕಾದ್ರು ಮೂಡಬಹುದು. ನೋಡ ನೋಡುತ್ತಿದ್ದಂತೆ ಬೆಳೆದು ಹೆಮ್ಮರವಾಗಬಹುದು ಆದರೆ ಅದೇ ಸ್ನೇಹ ಪ್ರೀತಿ ನಮ್ಮ ಬೆನ್ನ ಹಿಂದೆ ಎಲ್ಲಿಯ ತನಕ ಇರುತ್ತದೆ ಅನ್ನೋದಷ್ಟೇ ಮುಖ್ಯ. ನಮ್ಮ ಮನಸ್ಸೇ ಹಾಗೆ ಕೆಲವೊಮ್ಮೆ ಯಾರೋ ಯಾಕೋ ಇಷ್ಟವಾಗುತ್ತಾರೆ. ಅವರೇ ನಮ್ಮ ಬೆಸ್ಟ್ ಫ್ರೆಂಡ್ ಅಂತ ತಿಳಿತೀವಿ. ಅಂಥವರ ಜೊತೆ ಎಲ್ಲವನ್ನು ಶೇರ್ ಮಾಡುತ್ತೀವಿ. ಆದರೆ ಮುಂದೊಂದು ದಿನ ನಮ್ಮ ಸ್ನೇಹ, ಕಾಳಜಿ, ಪ್ರೀತಿ, ಅಭಿಮಾನ, ತೊರೆಯುತ್ತಾರೆ. ನಮ್ಮ ಸ್ನೇಹ ಬೇಡವಾದಾಗ ನಿಜವಾದ ಕಾರಣ ಹೇಳಿ ದೂರವಾಗುವುದು ಒಳಿತಲ್ಲವೇ.
ತಾನಾಗಿ ನಮ್ಮ ಸ್ನೇಹ ಬಯಸಿ ಬಂದು ಕಾರಣ ತಿಳಿಸದೇ ಒಬ್ಬ ಗೆಳೆಯ / ಗೆಳತಿ ದೂರವಾದಾಗ... ಬೆಸ್ಟ್ ಫ್ರೆಂಡ್ ಅಂತ ಹಚ್ಚಿಕೊಂಡು ತನಗೆ ಗೊತ್ತಿಲ್ದದೇ ಮನದಲ್ಲಿ ಮುಚ್ಚಿಟ್ಟ ಎಷ್ಟೋ ವಿಷಯಗಳು ಶೇರ್ ಮಾಡಿರುವ ಆ ಮನಸ್ಸಿಗೆ ಎಷ್ಟು ನೋವಾಗುತ್ತೆ ಅನ್ನೋದು ಅರಿವು ಇರಬೇಕು ಅಲ್ಲವೇ..
ಎಂದೂ ಕರೆಯುವ ಎರಡಕ್ಷರದ ಹಿಮದಂತೆ... ಹೆಪ್ಪುಗಟ್ಟಿದ ನೋವೆಲ್ಲಾ ಕರಗಿ ನೀರಾಗಿಸಿ ಹೋಗುವರು..., ಧರೆಯು ಮುಂಗಾರು ಮಳೆಯ ಮನ್ವಂತರಕ್ಕೆ, ಕಾಯುವ ಮೊದಲ ಮಳೆಯಂತೆ.. ನಮ್ಮನ್ನು ಬೇಡವೆಂದು ತೊರೆದು ಹೋದವರಿಂದ ಕಾರಣಕ್ಕಾಗಿ ಸದಾ ಹಂಬಲಿಸುವುದು ನಮ್ಮ ಮನ....
ಈ ನನ್ನ ಲೇಖನದ ಮುಖಾಂತರ ನಾನು ಪ್ರತಿಯೊಬ್ಬ ಸ್ನೇಹಿತರಿಗೂ ಹೇಳುವುದೇನೆಂದರೆ ಸ್ನೇಹನ ಟೈಮ್ ಪಾಸ್ ಗೆ ಮಾಡ್ಬೇಡಿ. ಒಂದು ಸರಿ ನೀನು ನನ್ನ ಬೆಸ್ಟ್ ಫ್ರೆಂಡ್ ಗೆಳತಿ/ ಗೆಳೆಯ ಅಂತ ಹೇಳಿದ ಮೇಲೆ. ನಿಮ್ಮ ಬೆಸ್ಟ್ ಫ್ರೆಂಡ್ ಕಡೆಯಿಂದ ತಿಳಿದೋ ತಿಳಿಯದೆ ಕೆಲವು ತಪ್ಪುಗಳಾದರೆ ಅದನ್ನ ತಿದ್ದಿ ಬುದ್ದಿ ಹೇಳುವಂತೆ ಇರಬೇಕು... ಆದರೂ ಈ ಸ್ನೇಹ ಬೇಡವೇ ಬೇಡ ಅಂತ ಮನಸ್ಸಿಗೆ ಅನ್ನಿಸಿ ಬಿಟ್ಟು ಹೋಗಲು ನಿರ್ಧಾರ ಮಾಡಿದವರು ನಿಜವಾದ ಕಾರಣ ನಿಮ್ಮನ್ನ ಹಚ್ಚಿಕೊಂಡ ಮನಸ್ಸಿಗೆ ಹೇಳಿ ದೂರವಾಗಿ. ಕಾರಣ ತಿಳಿಸಿದರೆ ನಿಮ್ಮನ್ನ ಹಚ್ಚಿಕೊಂಡವರಿಗೆ ತನ್ನ ತಪ್ಪು ಗೊತ್ತಾಗುತ್ತದೆ ಆಗ ಮನಸ್ಸು ಗೊಂದಲದಿಂದ ಹೊರ ಬಂದು ನಿರಾಳವಾಗಿ ಈ ಭುವಿ ಮೇಲೆ ಜೀವಿಸುತ್ತಾರೆ.. ಕಾರಣ ಹೇಳದೆ ದೂರವಾದರೆ ಒಂದು ಮನಸ್ಸಿಗೆ ಅವಮಾನ ಮಾಡಿದ ಹಾಗೆ ಮತ್ತು ದ್ರೋಹ ಮಾಡಿದ ಹಾಗೆ... ಜೀವನ ಪೂರ್ತಿ ತನ್ನನ್ನು ಬೇಡವೆಂದು ತೊರೆದು ಹೋದ ಕಾರಣಕ್ಕಾಗಿ ಹಂಬಲಿಸುತ್ತಾ ಆ ಮನಸ್ಸು ಜೀವಿಸಿದರೆ.. ತೊರೆದು ಹೋದ ಜೀವಕ್ಕೆ ತೃಪ್ತಿ ಸಿಗುವುದೇ...?ಸದಾ ನಿಮ್ಮ ಕಾರಣಕ್ಕೆ ಹಂಬಲಿಸುವಂತೆ ಮಾಡುವುದು ಸರಿಯೇ... ?ತೊರೆದ ಜೀವವೇ ಒಂದೇ ಒಂದು ಸರಿ ಕಾರಣ ಹೇಳಿ ಮನಸ್ಸು ನಿರಾಳವಾಗಿಸುವುದೆಂದು ಕಾಯುವ ಮನಕ್ಕೆ ನೆಮ್ಮದಿ ಬೇಕಲ್ಲವೇ...
- ಆಶಾ ಶಿವು ಬೆಂಗಳೂರು
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ