ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ, ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಸಂಸ್ಥಾಪನಾ ದಿನಾಚರಣೆಯು ಚೇಳ್ಯಾರ್ ಖಂಡಿಗೆ ಶ್ರೀ ನಾಟ್ಯಾಂಜಲಿ ಕಲಾ ಅಕಾಡೆಮಿ ನಾಟ್ಯಾಂಜಲಿ ಕಲಾ ಮಂದಿರದಲ್ಲಿ ಜರುಗಿತು. ಈ ಕಾರ್ಯಕ್ರಮವನ್ನು ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ಮಹಾಬಲೇಶ್ವರ ಎಮ್. ಎಸ್ ಅವರು ಉದ್ಘಾಟಿಸುತ್ತಾ, “ಪ್ರತಿಯೊಬ್ಬ ಕನ್ನಡಿಗನಿಗೂ ಕರ್ತವ್ಯ ಪ್ರಜ್ಞೆ ಇರಬೇಕು. ನಾವು ಕನ್ನಡ ಭಾಷೆಯಲ್ಲಿ ಮಾತನಾಡುವಾಗ ನಮ್ಮಲ್ಲಿ ಭಾಷಾ ಜ್ಞಾನ ಇರಬೇಕು. ಜನಸಾಮಾನ್ಯರು ಯಾವುದೇ ಭಾಷೆಯಲ್ಲಿ ಮಾತನಾಡಲಿ, ಭಾಷಾಶುದ್ಧಿಯ ಬಗ್ಗೆ ಗಮನ ಹರಿಸಬೇಕು. ನಾವು ಈ ಪ್ರತಿಜ್ಞೆಯನ್ನು ಬೆಳೆಸಿಕೊಳ್ಳದಿದ್ದರೆ ಮುಂದಿನ ಪೀಳಿಗೆ ಹಿರಿಯರನ್ನೇ ಅನುಸರಿಸುವ ಸಾಧ್ಯತೆಗಳಿವೆ. ಶಾಸ್ತ್ರೀಯ ಭಾಷೆಯಾಗಿರುವ ಕನ್ನಡವನ್ನು ನಮ್ಮ ದೈನಂದಿನ ವ್ಯವಹಾರಗಳಲ್ಲಿ ಬಳಸಿಕೊಳ್ಳುವಂತಾಗಬೇಕು ಎಂದರು.
ಸಮಾರಂಭದ ಮುಖ್ಯ ಅತಿಥಿ ಡಾ. ಮಾಧವ ಎಂ.ಕೆ ಸಂಸ್ಥಾಪನಾ ದಿನದ ಕುರಿತು ಮಾತನಾಡಿ, ಸನ್ಮಾನ ಕಾರ್ಯಕ್ರಮವನ್ನು ಶ್ಲಾಘಿಸಿದರು. ಅತಿಥಿ ಉಪನ್ಯಾಸಕಿ ಹಿರಿಯ ಸಾಹಿತಿ ಶ್ರೀಮತಿ ಶಕುಂತಲಾ ಭಟ್ ಸಮಾರಂಭದಲ್ಲಿ ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತು ಮಂಗಳೂರು ತಾಲೂಕು ಘಟಕದ ಅಧ್ಯಕ್ಷರಾಗಿರುವ ಡಾ. ಮಂಜುನಾಥ್ ರೇವಣ್‍ಕರ್ ರವರು, “ಇಂದು ನಾವು ಕೇವಲ ಐದು ಸಾಹಿತಿಗಳನ್ನು ಸನ್ಮಾನಿಸಿದ್ದೇವೆ. ಮುಂದಿನ ದಿನಗಳಲ್ಲಿ ನಮ್ಮ ತಾಲೂಕಿನ ಎಲ್ಲಾ ಸಾಹಿತಿಗಳನ್ನು ಒಟ್ಟು ಸೇರಿಸಿ ಕನ್ನಡ ನಾಡು ನುಡಿ ಬೆಳೆಸುವಲ್ಲಿ ಹೆಚ್ಚಿನ ಮುತುವರ್ಜಿವಹಿಸಿ ನಮ್ಮ ತಂಡ ಕಾರ್ಯ ನಿರ್ವಹಿಸಲಿದೆ” ಎಂದರು.
ಶ್ರೀಮತಿ ರಾಜಶ್ರೀ ಶ್ರೀಕಾಂತ್ ಪ್ರಾರ್ಥಿಸಿದರು. ಕಾರ್ಯಕ್ರಮದ ಉಸ್ತುವಾರಿಗಳಾಗಿದ್ದ ಕಸಾಪ ದ ಕಾರ್ಯಕಾರಣಿ ಸದಸ್ಯ ಡಾ. ಚಂದ್ರಶೇಖರ ನಾವಡರವರು ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಡಾ. ಮುರಲೀ ಮೋಹನ್ ಚೂಂತಾರು ರವರು ಪ್ರಸ್ತಾವಿಸಿದರು. ಕಾರ್ಯಕ್ರಮದಲ್ಲಿ ಸರ್ವಶ್ರೀ ಮುದ್ದು ಮೂಡುಬೆಳ್ಳೆ, ಡಾ. ಪಿ. ಅನಂತಕೃಷ್ಣ, ಬಂದಗದ್ದೆ ಶ್ರೀ ನಾಗರಾಜ್, ಡಾ. ಜ್ಯೋತಿ ಚೇಳ್ಯಾರ್, ಕೇಶವ ಕುಡ್ಲ ಅವರನ್ನು ಸನ್ಮಾನಿಸಲಾಯಿತು. ತಿರುಮಲೇಶ್ವರ ಭಟ್, ಸುಬ್ರಾಯ ಭಟ್, ರಘು ಇಡ್ಕಿದು, ಶ್ರೀಮತಿ ಸುಖಲಕ್ಷಿ ಸುವರ್ಣ ಮತ್ತು ಡಾ. ಅರುಣಾ ನಾಗರಾಜ್ ಸನ್ಮಾನ ಪತ್ರ ವಾಚಿಸಿದರು. ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್‍ಜಿ ಅವರು ವಂದಿಸಿದರು. ಕೆ.ಕೆ ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ