ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಉಜಿರೆಯ ಆಲ್ಯುಮ್ನಿ ಅಸೋಸಿಯೇಷನ್ (ಹಳೆ ವಿದ್ಯಾರ್ಥಿಗಳ ಸಂಘ) ವತಿಯಿಂದ ಪ್ರತೀ ವರ್ಷ ಮೇ 1 ರಂದು ನಡೆಯುವ ಅಲ್ಯುಮ್ನಿ ಮೀಟ್ ಈ ಬಾರಿ ಆನ್ಸೆನ್ ಮುಖಾಂತರ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಕಾಲೇಜಿನ ಹಿರಿಯ ವಿದ್ಯಾರ್ಥಿಯಾಗಿರುವ ಜ್ಞಾನವಿಕಾಸ ಕಾರ್ಯಕ್ರಮಗಳ ಅಧ್ಯಕ್ಷೆ ಮಾತೃಶ್ರೀ ಡಾ. ಹೇಮಾವತಿ ವೀ ಹೆಗ್ಗಡೆಯವರು ಪಾಲ್ಗೊಳ್ಳಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕಾಲೇಜಿನ ಪ್ರಾಂಶುಪಾಲ ಡಾ. ಪಿ.ಎನ್ ಉದಯಚಂದ್ರ, ಎಸ್.ಡಿ.ಎಂ ಗ್ಲೋಬಲ್ ಅಲ್ಯುಮ್ನಿ ಅಸೋಸಿಯೇಷನ್‌ನ ಅಧ್ಯಕ್ಷ ಅಬ್ದುಲ್ ಮಾಡುಮೂಲೆ, ಎಸ್.ಡಿ.ಎಂ ಬೆಂಗಳೂರು ಚ್ಯಾಪ್ಟರ್ ಅಧ್ಯಕ್ಷ ಸತ್ಯನಾರಾಯಣ ಹೊಳ್ಳ, ಉಜಿರೆ ಅಲ್ಯುಮ್ನಿ ಅಸೋಸಿಯೇಷನ್‌ನ ಅಧ್ಯಕ್ಷ ಪೀತಾಂಬರ ಹೇರಾಜೆ ಸೇರಿದಂತೆ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳು ಈ ಆಸ್ಟ್ರೇನ್ ಅಲ್ಯುಮಿ ಮೀಟ್‌ನಲ್ಲಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಮೇ1 ರಂದು ಸಂಜೆ 6.30ಕ್ಕೆ ಪ್ರಾರಂಭವಾಗಿ 8.30ಕ್ಕೆ ಮುಕ್ತಾಯಗೊಳ್ಳಲಿದ್ದು, ಜಗತ್ತಿನಾದ್ಯಂತ ಇರುವ ಉಜಿರೆ ಎಸ್.ಡಿ.ಎಂ ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ಎಸ್.ಡಿ.ಎಂ ಮಲ್ಟಿ ಮೀಡಿಯಾ ಸ್ಟುಡಿಯೋದ ಯೂಟ್ಯೂಬ್ ಚಾನೆಲ್ ಮುಖಾಂತರ ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಉಜಿರೆ ಅಲ್ಯುಮ್ನಿ ಅಸೋಸಿಯೇಷನ್‌ನ ಕಾರ್ಯದರ್ಶಿ ಧನಂಜಯ್ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ