ಆಳ್ವಾಸ್ ರೋಸ್ಟ್ರಂ ಸ್ಪೀಕರ್ಸ್ ಕ್ಲಬ್ ವತಿಯಿಂದ ಅತಿಥಿ ಉಪನ್ಯಾಸ
ಮೂಡುಬಿದಿರೆ: ಭಾರತದ ಭೌಗೋಳಿಕ ಸನ್ನಿವೇಶ ಹಾಗೂ ಇಲ್ಲಿನ ವಿಫುಲ ಸಂಪನ್ಮೂಲ ಭಾರತೀಯರನ್ನು ಸದಾ ಶಾಂತಿ ಪ್ರಿಯರಾಗಿರುವರಂತೆ ಮಾಡಿತು ಎಂದು ಖ್ಯಾತ ಅಂಕಣಕಾರ ಪ್ರೇಮಶೇಖರ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ಸ್ಪೀಕರ್ಸ್ ಕ್ಲಬ್ ಆಯೋಜಿಸಿದ್ದ ‘ಇಂಡಿಯಾ- ಎ ಟೈಮ್‍ಲೆಸ್ ಜರ್ನಿ’ ವಿಷಯದ ಕುರಿತು ಅವರು ಮಾತನಾಡಿದರು.
'ಸಿಂಧೂ ಕಣಿವೆ ಮತ್ತು ಅಟ್ಲಾಂಟಿಕ್ ನಾಗರೀಕತೆಗಳು ಸೇರಿದಂತೆ ವಿಶ್ವದ ಎಲ್ಲಾ ಪ್ರಮುಖ ನಾಗರಿಕತೆಗಳಲ್ಲಿ ಭಾರತದ ಮೂಲ ಕಂಡುಬರುವುದರಿಂದ ಭಾರತದ ಇತಿಹಾಸವನ್ನು ಪತ್ತೆಹಚ್ಚುವುದು ಕಷ್ಟಕರವಾಗಿತ್ತು. ಶತಮಾನಗಳ ಕಾಲ ಭಾರತದ ಕೆಲವು ಭಾಗಗಳು ಮುಳುಗಡೆಯಾಗಿದ್ದವು ಕ್ರಮೇಣ ವಿಜ್ಞಾನಿಗಳು ಇದನ್ನು ಕಂಡುಹಿಡಿದರು ಎಂದರು.
ಭಾರತದ ಪ್ರಾಚೀನ ನಾಗರಿಕತೆಯು ಸಂಸ್ಕೃತಿ, ಭಾಷೆ, ಜನಾಂಗೀಯ, ಕಲೆಗಳಲ್ಲಿ ವೈವಿಧ್ಯತೆಯ ಉಪಖಂಡವಾಗಿತ್ತು. ಇಲ್ಲಿ ಕಂಡುಬರುವ ಕಲಾಕೃತಿಗಳಿಂದ ಮೊದಲ ನಗರವನ್ನು 32,000 ವರ್ಷಗಳ ಹಿಂದೆ ನಿರ್ಮಿಸಲಾಗಿದೆ ಎಂದು ಸೂಚಿಸುತ್ತವೆ.
ಶಾಂತಿ ಮತ್ತು ಅಹಿಂಸೆಯ ಪರಿಕಲ್ಪನೆಯು ಭಾರತದ ಇತಿಹಾಸದುದ್ದಕ್ಕೂ ಅಸ್ತಿತ್ವದಲ್ಲಿದೆ. ಪ್ರಾಚೀನ ಭಾರತದಲ್ಲಿ ಶಸ್ತ್ರಾಸ್ತ್ರಗಳ ಪರಿಕಲ್ಪನೆ ಇರಲಿಲ್ಲ, ಆದರೆ ಜೀವನೋಪಾಯಕ್ಕಾಗಿ ಉಪಕರಣಗಳನ್ನು ಬಳಸುತ್ತಿದ್ದರು. ಭಾರತವು ಫಲವತ್ತಾದ ಭೂಮಿ ಮತ್ತು ಹೇರಳವಾದ ನೀರನ್ನು ಹೊಂದಿದೆ ಇಲ್ಲಿ ಚೋಳ ರಾಜವಂಶದ ಆಕ್ರಮಣಕಾರಿ ಪ್ರಕರಣವನ್ನು ಹೊರತುಪಡಿಸಿ, ಯಾವುದೇ ಹಿಂಸಾಚಾರದ ಕುರುಹು ಇರಲಿಲ್ಲ" ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೇಜಿಂಗ್ ಟ್ರಸ್ಟಿ ವಿವೇಕ ಆಳ್ವ, 'ರೋಸ್ಟ್ರಮ್ ಕ್ಲಬ್ ವಿದ್ಯಾರ್ಥಿಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿಲು ಮುಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ಸಾಕಷ್ಟು ಓದುವಿಕೆಯನ್ನು ಅಳವಡಿಸಿಕೊಂಡಾಗ ಬರವಣಿಗೆ ಉತ್ತಮವಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮವನ್ನು ತೃತೀಯ ಬಿ.ಎ ವಿದ್ಯಾರ್ಥಿನಿ ಗ್ರೇಶಿಯಲ್ ಕಲಿಯಾಂಡ ನಿರೂಪಿಸಿ, ವಂದಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ