ನವದೆಹಲಿ: ಭಾರತದ ಮೊದಲ ಹೈಸ್ಪೀಡ್ ಬುಲೆಟ್ ರೈಲು 2026ರ ವೇಳೆಗೆ ಪ್ರಯೋಗಿಕ ಪರೀಕ್ಷೆಗೆ ಸಿದ್ಧವಾಗಿದ್ದು, ಇದು 2027 ರ ವೇಳೆಗೆ ಕಾರ್ಯ ನಿರ್ವಹಿಸಲಿದೆ ಎಂದು ರಾಷ್ಟ್ರೀಯ ಹೈಸ್ಪೀಡ್ ರೈಲ್ ಕಾರಿಡಾರ್ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸತೀಶ್ ಅಗ್ನಿಹೋತ್ರಿ ಮಂಗಳವಾರ ತಿಳಿಸಿದ್ದಾರೆ.
ಸೂರತ್ ಮತ್ತು ಬಿಲಿಮೊರಾ ನಡುವಿನ ಪ್ರಯೋಗವನ್ನು 2026 ರಲ್ಲಿ ನಡೆಸಲಾಗುತ್ತದೆ. ನಾವು 2027 ರಿಂದ ಈ ಎರಡು ನಿಲ್ದಾಣಗಳ ನಡುವೆ ಬುಲೆಟ್ ರೈಲು ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತೇವೆ. ಅಷ್ಟೇ ಅಲ್ಲದೇ ಸೂರತ್ ನಿಲ್ದಾಣವು 2023 ರ ಸೆಪ್ಟೆಂಬರ್ ವೇಳೆಗೆ ಕಾರ್ಯಾಚರಣೆಗೆ ಸಿದ್ಧವಾಗುವ ನಿರೀಕ್ಷೆಯಿದೆ ಎಂದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ