|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಚಿಕ್ಕೋಡಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ!

ಚಿಕ್ಕೋಡಿಯಲ್ಲಿ ಪಾಕಿಸ್ತಾನದ ನೋಟು ಪತ್ತೆ!

ಬೆಳಗಾವಿ: ಚಿಕ್ಕೋಡಿ ತಾಲೂಕಿನ ಕರೋಶಿ ಗ್ರಾಮದಲ್ಲಿ ಪಾಕಿಸ್ತಾನದ 10 ರೂಪಾಯಿ ಮುಖ ಬೆಲೆಯ ಒಂದು ನೋಟು ಪತ್ತೆಯಾಗಿದೆ. ಈ ಬಗ್ಗೆ ಚಿಕ್ಕೋಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




ಕರೋಶಿ ಗ್ರಾಮದ ಬಸ್ ನಿಲ್ದಾಣದ ರಸ್ತೆಯಲ್ಲಿ ಪಾಕಿಸ್ತಾನದ ಹತ್ತು ರೂಪಾಯಿ ಮೌಲ್ಯದ ಕರೆನ್ಸಿ ಯುವಕನೋರ್ವನಿಗೆ ಬಿದ್ದು ಸಿಕ್ಕಿದೆ‌‌. ಅದರಲ್ಲಿ ಪಾಕಿಸ್ತಾನದ ಸಂಸ್ಥಾಪಕ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವಿರುವ ಈ ನೋಟು ಎಸಿಜೆ 1389126 ನಂಬರನ್ನು ಹೊಂದಿದ್ದು, ನೋಟಿನ ಮೇಲೆ ಆಂಗ್ಲ ಭಾಷೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಪಾಕಿಸ್ತಾನ ಹಾಗೂ ಉರ್ದು ಭಾಷೆಯ ಬರಹಗಳನ್ನು ಹೊಂದಿದೆ. ಚಿಕ್ಕೋಡಿ ಪೊಲೀಸರು ಮತ್ತು ಗುಪ್ತಚರ ಇಲಾಖೆ ಈ ಬಗ್ಗೆ ತನಿಖೆ ಆರಂಭಿಸಿದೆ. 

hit counter

0 Comments

Post a Comment

Post a Comment (0)

Previous Post Next Post