|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಈವೆಂಟ್ ಮಾಸ್ಟರ್ಸ್ 'ನಮ್ಮ ಅಂಗಡಿ'ಯ 19ನೇ ಆವೃತ್ತಿ ಏ.8, 9, 10ಕ್ಕೆ

ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಶನ್ ಈವೆಂಟ್ ಮಾಸ್ಟರ್ಸ್ 'ನಮ್ಮ ಅಂಗಡಿ'ಯ 19ನೇ ಆವೃತ್ತಿ ಏ.8, 9, 10ಕ್ಕೆಮಣಿಪಾಲ: ಎಂಐಸಿಯ ಸ್ನಾತಕೋತ್ತರ ವಿಭಾಗವು ನಮ್ಮ ಅಂಗಡಿಯ 19 ನೇ ಎಡಿಷನನ್ನು ಏಪ್ರಿಲ್ 8, 9 ಮತ್ತು 10 ರಂದು ಮಣಿಪಾಲದ ಎಂಐಸಿ ಕ್ಯಾಂಪಸ್ಸಿನಲ್ಲಿ ನಡೆಸುತ್ತಿದೆ.


ನಮ್ಮ ಅಂಗಡಿಯು ಮಣಿಪಾಲ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನ ಅಂತಿಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳು 'ನಮ್ಮ ಭೂಮಿ' ಮತ್ತು 'ಕನ್ಸರ್ನ್ ಫಾರ್ ವರ್ಕಿಂಗ್ ಚಿಲ್ಡ್ರನ್' ಸಹಯೋಗದಲ್ಲಿ ಆಯೋಜಿಸುವ ವಾರ್ಷಿಕ ಪ್ರದರ್ಶನ ಮತ್ತು ಮಾರಾಟವಾಗಿದೆ. ನಮ್ಮ ಅಂಗಡಿ, ಗ್ರಾಮೀಣ ಕುಶಲಕರ್ಮಿಗಳು ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಅವರ ಕೌಶಲ್ಯವನ್ನು ಪ್ರದರ್ಶಿಸಲು ಅವಕಾಶವನ್ನು ನೀಡುವ ವೇದಿಕೆ. ಈ ಮಾರಾಟ ಮೇಳ ಸ್ಥಳೀಯ ಕುಶಲಕರ್ಮಿಗಳನ್ನು ಉತ್ತೇಜಿಸುತ್ತದೆ, ಆ ಮೂಲಕ ಅವರಿಗೆ ವಾಣಿಜ್ಯ ಬ್ರಾಂಡ್ಗಳು ವಿಧಿಸುವ ಕಠಿಣ ಸ್ಪರ್ಧೆಯ ವಿರುದ್ಧ ಬದುಕುಳಿಯುವ ಅವಕಾಶವನ್ನು ನೀಡುತ್ತದೆ ಹಾಗೂ ಸ್ಥಳೀಯ ಮತ್ತು ಪಾರಂಪರಿಕ ಕರಕುಶಲಗಳು ಮರೆಯಾಗುತ್ತಿರುವ ಪರಿಣಾಮವನ್ನು ಎತ್ತಿ ತೋರಿಸುತ್ತದೆ.


ಏಪ್ರಿಲ್ 8, 9 ಮತ್ತು 10 ರಂದು ನಡೆಯಲಿರುವ ಈ ವರ್ಷದ ನಮ್ಮ ಅಂಗಡಿ ಗೃಹಾಲಂಕಾರದಿಂದ ಹಿಡಿದು ಬೇಸಿಗೆ ಉಡುಪುಗಳವರೆಗೆ ವಿವಿಧ ಶ್ರೇಣಿಯ ಉತ್ಪನ್ನಗಳೊಂದಿಗೆ ನಿಮ್ಮ ಮುಂದೆ ಹಾಜರಾಗುತ್ತಿದೆ. ಅದಲ್ಲದೆ ಈ ವರ್ಷ, ಮೊದಲ ಬಾರಿಗೆ ಮಕ್ಕಳ ಉಡುಪುಗಳನ್ನೂ ಬಿಡುಗಡೆ ಮಾಡಲಾಗಿದ್ದು, ಮಕ್ಕಳ ಸಂಗ್ರಹವು ಜೈಪುರಿ ಕಾಟನ್ ಮತ್ತು ಕಲಾಮಾರಿಯಂತಹ ಫ್ಯಾಬ್ರಿಕ್ ನಿಂದ ಮಾಡಲ್ಪಟ್ಟಿದೆ.


ಈ ವರ್ಷ ಐಡಿಪಿ, ಕ್ಯಾಂಪ್ಕೋ, ಸೆಲ್ಕೊ, ಕೆನರಾ ಬ್ಯಾಂಕ್ ಮತ್ತು ಅಭ್ಯುದಯ ಬ್ಯಾಂಕ್ ಕಂಪನಿಗಳನ್ನು ನಮ್ಮ ಮಾರಾಟ ಮೇಳದ ಪ್ರಾಯೋಜಕರಾಗಿ ಹೊಂದಿದ್ದೇವೆ. ಸುರಕ್ಷತಾ ಮುನ್ನೆಚ್ಚರಿಕೆಯಾಗಿ, ಪ್ರವೇಶಕ್ಕಾಗಿ ಕೋವಿಡ್ 19 ವ್ಯಾಕ್ಸಿನೇಷನ್ ಪ್ರಮಾಣಪತ್ರವನ್ನು ಹೊಂದಿರುವುದು ಕಡ್ಡಾಯವಾಗಿದೆ.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 Comments

Post a Comment

Post a Comment (0)

Previous Post Next Post