ಪುತ್ತೂರು: ಇಲ್ಲಿನ ವಿವೇಕಾನಂದ ವಿದ್ಯಾಲಯದ ಆವರಣದಲ್ಲಿರುವ ನಿವೇದಿತಾ ಶಿಶುಮಂದಿರದ ಚಿಣ್ಣರ ಸಂಭ್ರಮ ಕಾರ್ಯಕ್ರಮ ಭಾನುವಾರ ನಡೆಯಿತು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೃಷ್ಣವೇಣಿ ಪ್ರಸಾದ್ ಮುಳಿಯ ದೀಪ ಬೆಳಗಿಸಿ ಭಾರತ ಮಾತಾ ಭಾವಚಿತ್ರಕ್ಕೆ ಹೂವು ಹಾಕಿ ಉದ್ಘಾಟಿಸಿದರು.
ನಂತರ ಪುಟಾಣಿಗಳ ಸಾಮೂಹಿಕ ಹುಟ್ಟುಹಬ್ಬ ನಡೆಯಿತು. ಕಾರ್ಯಕ್ರಮದಲ್ಲಿ ಮಕ್ಕಳ ತಾಯಂದಿರು ತಮ್ಮ ಪುಟಾಣಿಗಳಿಗೆ ತಿಲಕ ಇರಿಸಿ ಹೂವು ಹಾಕಿ ಆರತಿ ಬೆಳಗಿ ಸಿಹಿತಿನಿಸಿ ಸಂಭ್ರಮಿಸಿದರು. ಆನಂತರ ಪಾದಪೂಜಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಪುಟಾಣಿಗಳು ತಮ್ಮ ತಾಯಂದಿರ ಪಾದಕ್ಕೆ ಹೂ ಅರ್ಪಿಸಿ ಆಶೀರ್ವಾದ ಪಡೆದರು. ನಂತರ ಸಭಾ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಗಳು ಹಾಗೂ ಅಧ್ಯಕ್ಷರು ಭಾರತ ಮಾತೆಗೆ ಹೂವು ಅರ್ಪಿಸಿ ವೇದಿಕೆಗೆ ಆಗಮಿಸಿದರು. ನಮ್ಮ ಪುಟಾಣಿಗಳಿಂದ ಸ್ವಾಗತ ಪ್ರಾರ್ಥನೆ ನಡೆಯಿತು. ಶಿಶುಮಂದಿರದ ಪುಟಾಣಿ ಪಂಚಾಂಗ ವಾಚಿಸಿದಳು. ನಂತರ ಶಿಶುಮಂದಿರದ ಪ್ರಸ್ತುತ ಅಧ್ಯಕ್ಷೆ ಲಕ್ಷ್ಮಿ ವಿಜಿ ಭಟ್ ಮುಖ್ಯ ಅತಿಥಿಗಳು ಹಾಗೂ ಅಧ್ಯಕ್ಷರನ್ನು ಪರಿಚಯಿಸಿ ಸ್ವಾಗತಿಸಿದರು. ಎಲ್ಲರಿಗೂ ಸ್ವಾಗತ ಕೋರಲಾಯಿತು. ನಂತರ ಸರ್ವಜ್ಞನ ವಚನ ಅನೇಕ ಕಾರ್ಯಕ್ರಮಗಳು ಶಿಶುಮಂದಿರದ ಪುಟಾಣಿಗಳಿಂದ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಕೃಷ್ಣವೇಣಿ ಪ್ರಸಾದ್ ಮುಳಿಯ ಮಕ್ಕಳಿಗೆ ಹೇಗೆ ಸಂಸ್ಕಾರಯುತ ಶಿಕ್ಷಣ ಕೊಡಬಹುದು ಎಂಬುದನ್ನು ಕಥೆಯನ್ನು ಹೇಳುವ ಮೂಲಕ ಸೊಗಸಾಗಿ ನಿರೂಪಿಸಿದರು. ಶಿಶುಮಂದಿರದ ಮಾತಾಜಿ ವರದಿ ವಾಚಿಸಿದರು. ನಂತರ ನಮ್ಮ ಶಿಶುಮಂದಿರದ ಪುಟಾಣಿಗಳಿಗೆ ಸ್ಮರಣಿಕೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿದ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳು ಡಾ ಕೆ.ಎಂ. ಕೃಷ್ಣಭಟ್ ಇವರು ಮಗುವಿನ ಮನಸ್ಥಿತಿಗೆ ಅನುಗುಣವಾಗಿ ಶಿಕ್ಷಣವನ್ನು ನೀಡಬೇಕು ಎಂಬುದನ್ನು ಸುಂದರವಾದ ಕಥೆಯ ಮೂಲಕ ನಿರೂಪಿಸಿದರು. ಅಧ್ಯಕ್ಷರಿಗೆ ಮತ್ತು ಅತಿಥಿಗಳಿಗೆ ಸ್ಮರಣಿಕೆ ವಿತರಿಸಲಾಯಿತು. ಕೊನೆಯಲ್ಲಿ ಶಿಶುಮಂದಿರದ ಪ್ರಸ್ತುತ ಕಾರ್ಯದರ್ಶಿ ದಿವಾಕರ್ ಎ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಶಿಶುಮಂದಿರದ ಕೋಶಾಧಿಕಾರಿ ಮಧುಸೂದನ ಕೆ, ಸದಸ್ಯರುಗಳಾದ ಭಾರತಿ ಶಶಿಧರ್, ಶಂಕರಿ ಗಿರೀಶ್, ಗೋವರ್ಧನ, ಸತೀಶ್ ಕೆ. ಹಾಗೂ ನಿಕಟಪೂರ್ವ ಅಧ್ಯಕ್ಷ ರಘುನಾಥ ಬಿ ಕಾರ್ಯದರ್ಶಿ ಶ್ರೀಧರ ಕುಂಜಾರು ಉಪಸ್ಥಿತರಿದ್ದರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ವಿವಿಧ ಸಂಸ್ಥೆಗಳ ಪ್ರಾಂಶುಪಾಲರುಗಳು ಆಡಳಿತ ಮಂಡಳಿಯ ಸದಸ್ಯರು ಹಾಗೂ ಪೋಷಕರು ಎಲ್ಲರೂ ಭಾಗವಹಿಸಿದ್ದರು. ತೇಜಸ್ವಿಯವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಸಹ ಭೋಜನದೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ