ಉಡುಪಿ: ಉಡುಪಿ ತೆಂಕನಿಡಿಯೂರಿನಲ್ಲಿರುವ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಿದ್ಯಾರ್ಥಿನಿ ರಕ್ಷಿತಾ ಅವರು ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ಸ್ನಾತಕೋತ್ತರ ವಿಭಾಗದಲ್ಲಿ ಎರಡು ಚಿನ್ನದ ಪದಕಗಳು ಮತ್ತು 3 ನಗದು ಪುರಸ್ಕಾರಗಳೊಂದಿಗೆ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ.
ದಿವಂಗತ ಡಾ. ಗುರುರಾಜ ಭಟ್ ಸ್ಮಾರಕ ಸ್ವರ್ಣ ಪದಕ ಹಾಗೂ ದಿವಂಗತ ಡಾ. ಪಾದೂರು ಗುರುರಾಜ ಭಟ್ ಸ್ಮಾರಕ ಚಿನ್ನದ ಪದಕ ಹಾಗೂ ಡಾ. ಪಿ. ಗುರುರಾಜ ಭಟ್ ಸ್ಮಾರಕ ನಗದು ಪುರಸ್ಕಾರ ರಕ್ಷಿತಾ ಅವರಿಗೆ ದೊರೆತಿದೆ.
ಇನ್ನೋರ್ವ ವಿದ್ಯಾರ್ಥಿ ನಿತಿನ್ ಅವರಿಗೆ ಶ್ರೀಮತಿ ವಸಂತಾ ಎಸ್ ಅನಂತನಾರಾಯಣ ಮತ್ತು ಪ್ರೊ. ಎಸ್. ಅನಂತನಾರಾಯಣ ನಗದು ಪುರಸ್ಕಾರ ದೊರೆತಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.
ಈ ಎಲ್ಲ ಸಾಧಕ ವಿದ್ಯಾರ್ಥಿಗಳಿಗೆ ಕಾಲೇಜಿನ ಇತಿಹಾಸ ವಿಭಾಗ ವಿಶೇಷ ಅಭಿನಂದನೆಗಳನ್ನು ಸಲ್ಲಿಸಿದೆ ಎಂದು ವಿಭಾಗದ ಮುಖ್ಯಸ್ಥರಾದ ಡಾ. ಸುರೇಶ್ ರೈ ಅವರು ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ