27ರಿಂದ ರಾಮಕಥೆ; ರಾಘವೇಶ್ವರ ಶ್ರೀಗಳ ಪುರಪ್ರವೇಶ

Upayuktha
0

ಕುಮಟಾ: ಪಟ್ಟಣದ ಹೊರವಲಯದ ಮೂರೂರು ಪ್ರಗತಿ ವಿದ್ಯಾಲಯದ ರಾಮಲೀಲಾ ಮೈದಾನದಲ್ಲಿ ಏಪ್ರಿಲ್ 27ರಿಂದ ಮೇ 1ರವರೆಗೆ ರಾಮಕಥೆ ನಡೆಯಲಿದ್ದು, ಇದರ ಅಂಗವಾಗಿ ಶ್ರೀ ರಾಘವೇಶ್ವರಭಾರತೀ ಸ್ವಾಮೀಜಿಯವರ ಪುರಪ್ರವೇಶ ಭಾನುವಾರ ಸಂಜೆ ವೈಭವದಿಂದ ನಡೆಯಿತು.


ರಾಮಕಥಾ ಸಮಿತಿ ಕಾರ್ಯಾಧ್ಯಕ್ಷ ಆರ್.ಜಿ.ಭಟ್, ಸಂಚಾಲಕ ಸುಬ್ರಾಯ ವಿ.ಭಟ್ ಕೊಣಾರೆ, ಕಾರ್ಯದರ್ಶಿ ಟಿ.ಎಸ್.ಭಟ್, ಅರುಣ್ ಹೆಗಡೆ, ಗಣೇಶ್ ಜೋಶಿ ಮತ್ತಿತರರು ಸ್ವಾಮೀಜಿಯವರನ್ನು ಸ್ವಾಗತಿಸಿದರು.


ಬುಧವಾರ (ಏಪ್ರಿಲ್ 27) ಆರಂಭವಾಗಲಿರುವ ರಾಮಕಥೆಗೆ ಅದ್ದೂರಿ ಸಿದ್ಧತೆ ನಡೆದಿದ್ದು, ಗಣ್ಯರು ಮತ್ತು ಸಂತರನ್ನು ಆಹ್ವಾನಿಸಲಾಗಿದೆ. ಸರ್ವ ಸಮಾಜದವರನ್ನು ಆಹ್ವಾನಿಸಲಾಗಿದ್ದು, 55 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಸಂಘಟಕರು ಹೇಳಿದ್ದಾರೆ.


ರಾಮಕಥೆಯ ದಿನ ಲಕ್ಷದೀಪ ಮಾಲಾ ಎಂಬ ಅತ್ಯಪೂರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಪ್ರತಿದಿನ ಪ್ರಸಾದ ಭೋಜನದ ವ್ಯವಸ್ಥೆ ಇರುತ್ತದೆ. 2012ರಲ್ಲಿ ಸಂಪನ್ನಗೊಂಡ ಬಳಿಕ ಹತ್ತು ವರ್ಷದಲ್ಲಿ ಇದೇ ಮೊದಲ ಬಾರಿಗೆ ಇಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪ್ರವಚನ, ರೂಪಕ, ಗೀತೆ, ನೃತ್ಯ, ಚಿತ್ರ ಮುಂತಾದ ದೃಶ್ಯ- ಶ್ರಾವ್ಯ ಕಲಾಮಾಧ್ಯಮಗಳ ಮೂಲಕ ವಾಲ್ಮೀಕಿ ರಾಮಾಯಣದ ಪುನರವತರಣವನ್ನು ಶ್ರೀಗಳು ಅನುಗ್ರಹಿಸಲಿದ್ದಾರೆ ಎಂದು ರಾಮಕಥಾ ನಿರ್ವಹಣಾ ಸಮಿತಿಯ ಅಧ್ಯಕ್ಷ ಆರ್.ಜಿ.ಭಟ್ ಪ್ರಕಟಣೆಯಲ್ಲಿ ಹೇಳಿದ್ದಾರೆ.


ವಾಲ್ಮೀಕಿ ರಾಮಾಯಣದ ಸಾಗರ ಸೇತು ಕಥಾಭಾಗದ ಪ್ರವಚನವನ್ನು ಐದು ದಿನಗಳ ಕಾಲ ಶ್ರೀಗಳು ನಡೆಸಿಕೊಡುವರು. ಶ್ರೀರಾಮನ ಪರಿವಾರ ಹಾಗೂ ಕಪಿ ಸೈನ್ಯ ಲಂಕೆಗೆ ತೆರಳಲು ಸಮದ್ರಕ್ಕೆ ಸೇತುವೆ ನಿರ್ಮಿಸುವಲ್ಲಿಂದ ಹಿಡಿದು ಲಂಕೆಯಲ್ಲಿ ಶ್ರೀರಾಮನ ಪದಾರ್ಪಣೆ ವರೆಗಿನ ಕಥಾಭಾಗ ಬಿಂಬಿಸಲಾಗುವುದು ಎಂದು ವಿವರಿಸಿದ್ದಾರೆ.


ನಾಡಿನ ಖ್ಯಾತ ಸಂಗೀತಗಾರರು ಮತ್ತು ಖ್ಯಾತ ಚಿತ್ರ ಕಲಾವಿದ ನೀರ್ನಳ್ಳಿ ಗಣಪತಿ ಸೇರಿದಂತೆ ಹಲವು ಮಂದಿ ಕಲಾವಿದರು ಗಾಯನ, ವಾದನ, ಚಿತ್ರಕಲೆ, ರೂಪಕ ಪ್ರಸ್ತುತಪಡಿಸುವರು.


ಡಾ.ಎಸ್.ವಿ.ಭಟ್ಟ, ಜಿ.ಎಂ.ಭಟ್ಟ, ರವಿ ಹೆಗಡೆ, ಟಿ.ವಿ.ಹೆಗಡೆ ಕಲ್ಲಬ್ಬೆ, ಎಲ್.ಆರ್. ಹೆಗಡೆ ಕಲ್ಲಬ್ಬೆ, ಟಿ.ಆರ್. ಜೋಶಿ ಕಲ್ಲಬ್ಬೆ, ವಿಷ್ಣು ಹೆಗಡೆ, ಕೋಣಾರೆ, ಜಿ.ಜಿ.ಭಟ್ಟ ಕೆಕ್ಕಾರ, ಎಂ. ಐ. ಭಟ್ಟ ಕಲ್ಲಬ್ಬೆ. ದಿನೇಶ ಭಟ್ಟ. ಚಂದಿಮನೆ, ಜಿ.ಎಂ.ಹೆಗಡೆ ಹೊಸಾಡ, ಉಪಸ್ಥಿತರಿದ್ದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top