|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಕೃಷಿಯತ್ತ ಒಲವು ತೋರಿದ ವೈದ್ಯರು

ಕೃಷಿಯತ್ತ ಒಲವು ತೋರಿದ ವೈದ್ಯರು


ವೈದ್ಯರಾಗಿ ಕೃಷಿರಂಗಕ್ಕೆ ಇಳಿದವರು ಡಾ. ವೇಣುಗೋಪಾಲ್ ಕಳೆಯತ್ತೋಡಿ. ಅಡಿಕೆ ಕೃಷಿಯೊಂದಿಗೆ ತೆಂಗು, ಬಾಳೆ, ಕಾಳುಮೆಣಸು, ಜಾಯಿಕಾಯಿ, ದನ ಸಾಕಣೆ, ಪರಿಸರ ಸಂರಕ್ಷಣೆ, ಔಷಧೀಯ ಸಸ್ಯಗಳ ಸಂರಕ್ಷಣೆ ಮೊದಲಾದ ಕೃಷಿಯನ್ನು ಮಾಡುತ್ತಾ ಯಶಸ್ಸು ಕಂಡ ಪ್ರಗತಿಪರ ಕೃಷಿಕ ಇವರು. ಸಾಮಾಜಿಕ ಧಾರ್ಮಿಕ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು ಡಾ ವೇಣುಗೋಪಾಲ್ ಕಳೆಯತ್ತೋಡಿ. ಕೃಷಿಯಲ್ಲಿ ಸಾಧನೆ  ಮಾಡಬೇಕಾದರೆ ತಾಳ್ಮೆ ಹಾಗೂ ಸಹನೆ ಮುಖ್ಯ ಎಂದು ಅವರ ಅಭಿಪ್ರಾಯ.


ಇವರು ಕಾಸರಗೋಡು ತಾಲೂಕಿನ ಕುಂಬಡಾಜೆ ಗ್ರಾಮದ ದಿ| ಶ್ಯಾಮ್ ಭಟ್ ಹಾಗೂ ಶ್ರೀಮತಿ ಪಾರ್ವತಿ ಕೆ ಭಟ್ ಅವರ ಸುಪುತ್ರನಾಗಿ ಜನಿಸಿದರು. ಆಯುರ್ವೇದ ವೈದ್ಯ ಪದ್ಧತಿಯನ್ನು ಕಲಿತು ಈಗ ಪೂರ್ಣ ಪ್ರಮಾಣದಲ್ಲಿ ಕೃಷಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು. ಪತ್ನಿ ವಿದ್ಯಾ, ಮಕ್ಕಳು ಅಧ್ವೈತ್ ಮತ್ತು ಆತ್ರೇಯಿಯನ್ನೊಳಗೊಂಡ ಪುಟ್ಟ ಸಂಸಾರ ಅವರದ್ದು.


ವೇಣುಗೋಪಾಲ್ ಕಳೆಯತ್ತೋಡಿ ಅವರು ತಮ್ಮ ವೈದ್ಯಕೀಯ ವಿದ್ಯಾಭ್ಯಾಸವನ್ನು ಹುಬ್ಬಳ್ಳಿ ಆಯುರ್ವೇದ ಮಹಾ ವಿದ್ಯಾಲಯದಲ್ಲಿ ಮುಗಿಸಿ ತದನಂತರ ಊರಿಗೆ ಬಂದರು. 1993ರಲ್ಲಿ ವೈದ್ಯ ವೃತ್ತಿ ಜೀವನವನ್ನು ಆರಂಭಿಸಿದ ಇವರು 1995-96ರ ವರೆಗೆ 2 ವರ್ಷಗಳ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದರು. ತದನಂತರ ಸ್ವಲ್ಪ ಸಲ್ಪ ಸಮಯ ವೈದ್ಯಕೀಯ ವೃತ್ತಿಯೊಂದಿಗೆ ಕೃಷಿಯತ್ತ ಒಲವು ತೋರಿದರು. ಕೃಷಿಯು ಬಳುವಳಿಯಾಗಿ ಬಂದ ಕಾರಣ ಅದನ್ನು ಬಿಟ್ಟು ಪಟ್ಟಣಕ್ಕೆ ಹೋಗುವುದು ಸರಿಯಲ್ಲ ಎಂದು ಅವರ ಮನಸ್ಸಿಗೆ ತೋಚಿದ ಕಾರಣ ಅವರು  ಈಗ ಕೃಷಿ ರಂಗದಲ್ಲಿ ಸುಸ್ಥಿರವಾಗಿ ನಿಂತಿದ್ದೇನೆ ಎಂದು ಅವರೇ ಹೇಳುತ್ತಾರೆ. 25 ವರ್ಷಗಳಿಂದ ಅವರು ಕಾಳುಮೆಣಸಿನ ಕೃಷಿಯನ್ನು ಮಾಡುತ್ತಾ ಬಂದಿದ್ದಾರೆ.


ವೇಣುಗೋಪಾಲ್ ಅವರು ಮಂಗಳೂರಿನಲ್ಲಿ ಉಮ್ಮರ್ ಫಾರುಕಿ ಎಂಬವರನ್ನು ಭೇಟಿಯಾದಾಗ ಅವರು ನಿಮ್ಮಲ್ಲಿ ಜಾಯಿಕಾಯಿ ಮರ ಎಷ್ಟಿವೆ ಎಂದು ಕೇಳಿದಾಗ ಅವರಲ್ಲಿ ಕೇವಲ ಒಂದು ಜಾಯಿಕಾಯಿ ಮರ ಇತ್ತಂತೆ. ಆಗ ಉಮ್ಮರ್ ಫಾರೂಕಿ ಹೇಳಿದರಂತೆ ನಾವು ಆ ಕೃಷಿಯ ಹಿಂದೆ ಬೀಳಬೇಕು ಎಂಬುದಾಗಿ. ಕೃಷಿಗೆ ಆದ್ಯತೆ ಕೊಟ್ಟರೆ ಕೃಷಿ ಮುಂದೆ ಬರುತ್ತದೆ ಊಟಕ್ಕೆ ಹೋಗುವುದು ಹಿಂದೆ ಬೀಳುತ್ತದೆ. ಊಟಕ್ಕೆ ಹೋಗುವುದಕ್ಕೆ ಆದ್ಯತೆ ನೀಡಿದರೆ ಕೃಷಿ ಹಿಂದೆ ಬೀಳುತ್ತದೆ. ಊಟಕ್ಕೆ ಹೋಗುವುದು ಮುಂದೆ ಬರುತ್ತದೆ. ನಾವು ಯಾವತ್ತೂ ಕೃಷಿಯ ಹಿಂದೆ ಬೀಳಬೇಕು ಎಂದು ಅವರು ಹೇಳಿದರು. ಹಳಬರು ಹೇಳುವಂತೆ ಯಾವ ಬಳ್ಳಿಯಲ್ಲಿ ನೀವು ಕಾಳುಮೆಣಸಿಗೆ ಕಟ್ಟ ಕೊಡುತ್ತೀರಿ ಆ ಬಳ್ಳಿಯು ಕಾಳುಮೆಣಸಿಗೆ ಒಂದು ಆಹಾರವಾಗಬೇಕು ಕೊಳೆತು ಮಣ್ಣಿಗೆ ಸೇರುವಂತದ್ದಾಗಬೇಕು.


ಹೀಗೆ ತಮ್ಮನ್ನು ಕೃಷಿಯಲ್ಲೇ ತೊಡಗಿಸಿಕೊಂಡ ವೇಣುಗೋಪಾಲ್ ಕಳೆಯತ್ತೋಡಿ ಕೃಷಿಯಲ್ಲಿ ನೆಮ್ಮದಿ ಕಾಣುತ್ತಿದ್ದಾರೆ ಎಂದು ಅವರು ಹೇಳುತ್ತಾರೆ.

-ಕಾರ್ತಿಕ್ ಕುಮಾರ್ ಕೆ.

ದುರ್ಗಾನಿಲಯ ಏತಡ್ಕ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم