ಮಂಡ್ಯ ಹುಡುಗಿಗೆ ಅಲ್ ಖೈದಾ ಬೆಂಬಲ ಅಂತರಾಷ್ಟ್ರೀಯ ಷಡ್ಯಂತ್ರದ ಭಾಗ: ಶಾಸಕ ಕಾಮತ್

Upayuktha
0

ಮಂಗಳೂರು: ಅಲ್ಲಾಹು ಅಕ್ಬರ್ ಎಂದು ಘೋಷಣೆ ಕೂಗಿದ ಮಂಡ್ಯ ಹುಡುಗಿಗೆ ಅಲ್ ಖೈದಾ ಉಗ್ರ ಸಂಘಟನೆ ಬೆಂಬಲ ನೀಡಿರುವ‌ ವಿಚಾರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಷಡ್ಯಂತ್ರ ಅಡಗಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.


ಹಿಜಾಬ್ ವಿವಾದದ ವೇಳೆ ಅಲ್ಲಾಹು ಅಕ್ಬರ್ ಘೋಷಣೆ ಕೂಗಿದ್ದ ಹುಡುಗಿಗೆ ಅಲ್ ಖೈದಾ ನಾಯಕ ಅಲ್-ಜವಾಹಿರಿ ಬೆಂಬಲ‌ ನೀಡುವ‌ ಕುರಿತು ಹೇಳಿಕೆ ನೀಡಿದ್ದಾನೆ. ಇದರ ಸುತ್ತ ಅನುಮಾನ ಹೊಗೆಯಾಡುತಿದ್ದು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲು ಗೃಹ ಸಚಿವರಿಗೆ ಮನವಿ ಸಲ್ಲಿಸುತ್ತೇನೆ ಎಂದು ಹೇಳಿದರು.

        

‌ಈಗಾಗಲೇ ಈ ವಿವಾದದಿಂದ ಶಿವಮೊಗ್ಗದಲ್ಲಿ ಬಜರಂಗದಳ‌ ಕಾರ್ಯಕರ್ತನ ಹತ್ಯೆಯೂ ನಡೆದಿದೆ. ಈ ಎಲ್ಲಾ‌ ವಿದ್ಯಾಮಾನಗಳ ಹಿಂದೆ ಉಗ್ರ ಸಂಘಟನೆಗಳ ಕುಮ್ಮಕ್ಕು ಇರಬಹುದು. ಹಾಗಾಗಿ ಈ ಪ್ರಕರಣವನ್ನು ಎನ್ಐಎಗೆ ವಹಿಸಬೇಕು ಎಂದು ಶಾಸಕ ಕಾಮತ್ ಆಗ್ರಹಿಸಿದ್ದಾರೆ.

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

Post a Comment

0 Comments
Post a Comment (0)
Advt Slider:
To Top