ಕೆನಡಾ: ಭಾರತದ 21 ವರ್ಷದ ವಿದ್ಯಾರ್ಥಿಯೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಕೆನಡಾದ ಟೊರೊಂಟೊದಲ್ಲಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಕಾರ್ತಿಕ್ ವಾಸುದೇವ್ ಜನವರಿ 4 ರಂದು ಕೆನಡಕ್ಕೆ ತೆರಳಿದ್ದರು. ಅಲ್ಲಿ ಸೆನೆಕಾ ಕಾಲೇಜಿನಲ್ಲಿ ಮೊದಲ ಸೆಮಿಸ್ಟರ್ ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಓದುತ್ತಿದ್ದರು. ಮಧ್ಯಾಹ್ನ ಕಾಲೇಜ್ ಮುಗಿಸಿಕೊಂಡು, ರೆಸ್ಟೋರೆಂಟ್ಲ್ಲಿ ಪಾರ್ಟ್ಟೈಮ್ ಜಾಬ್ ಗಿಟ್ಟಿಸಿಕೊಂಡಿದ್ದರು. ಏಪ್ರಿಲ್ 7 ರ ಸಂಜೆ ಕೆಲಸಕ್ಕೆ ತೆರಳಲು ಲೋಕಲ್ ಸಬ್ವೇ ರೈಲ್ವೆ ಸ್ಟೇಷನ್ನಲ್ಲಿ ನಿಂತಿದ್ದರು, ಈ ವೇಳೆ ದುಷ್ಕರ್ಮಿಯೊಬ್ಬ ತಾನು ತಂದಿದ್ದ ಗನ್ನಿಂದ ಮನ ಬಂದಂತೆ ಗುಂಡು ಹಾರಿಸಿ ತಪ್ಪಿಸಿದ್ದಾನೆ. ಚಿಕಿತ್ಸೆ ಫಲಿಸದೇ ಕಾರ್ತಿಕ್ ಸಾವನ್ನಪ್ಪಿದರು.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಆದಷ್ಟು ಬೇಗ ಆರೋಪಿಯನ್ನು ಸೆರೆ ಹಿಡಿಯುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.
Grieved by this tragic incident. Deepest condolences to the family. https://t.co/guG7xMwEMt
— Dr. S. Jaishankar (@DrSJaishankar) April 8, 2022