|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 79ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ: ಹವ್ಯಕ ಸಾಧಕರಿಗೆ ವಿಶೇಷ ಪ್ರಶಸ್ತಿ ಮೇ 1ರಂದು ಪ್ರದಾನ

79ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ: ಹವ್ಯಕ ಸಾಧಕರಿಗೆ ವಿಶೇಷ ಪ್ರಶಸ್ತಿ ಮೇ 1ರಂದು ಪ್ರದಾನ


ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆಯು ನೀಡುವ ವಾರ್ಷಿಕ ಹವ್ಯಕ ವಿಶೇಷ ಪ್ರಶಸ್ತಿಗೆ ಸಾಧಕರನ್ನು ಆಯ್ಕೆ ಮಾಡಲಾಗಿದ್ದು ಮೇ 1 ಭಾನುವಾರ ನಡೆಯುವ 79 ನೇ ವರ್ಷದ ಹವ್ಯಕ ಸಂಸ್ಥಾಪನೋತ್ಸವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.


ಮಲ್ಲೇಶ್ವರದಲ್ಲಿರುವ ಹವ್ಯಕ ಭವನದಲ್ಲಿ ಭಾನುವಾರ ಸಂಜೆ 04 ಗಂಟೆಗೆ ಸಂಸ್ಥಾಪನೋತ್ಸವ ಕಾರ್ಯಕ್ರಮ ನಡೆಯಲಿದ್ದು, ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಶ್ರೀ ಸಚ್ಚಿದಾನಂದಮೂರ್ತಿ, ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ. ಎಲ್ ಹೆಗಡೆ ಅಭ್ಯಾಗತರಾಗಿ ಆಗಮಿಸುತ್ತಿದ್ದು, ಮಹಾಸಭೆಯ ಅಧ್ಯಕ್ಷರಾದ ಡಾ.ಗಿರಿಧರ ಕಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಆನಂತರ 'ವೇಣು ನಿನಾದ' ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.


ಹವ್ಯಕ ವಿಶೇಷ ಪ್ರಶಸ್ತಿ 2022: ಈ ಕೆಳಗಿನ ಸಾಧಕರು ಆಯ್ಕೆಯಾಗಿದ್ದಾರೆ ಎಂದು ತಿಳಿಸಲು ಮಹಾಸಭೆ ಹರ್ಷಿಸುತ್ತಿದೆ.  

 

ಹವ್ಯಕ ವಿಭೂಷಣ

ಡಾ| ಗಜಾನನ ಶರ್ಮ - ಶಿವಮೊಗ್ಗ - ಸಾಹಿತ್ಯ


ಹವ್ಯಕ ಭೂಷಣ 

ಡಾ. ಉದಯಕುಮಾರ್ ನೂಜಿ - ಕಾಸರಗೋಡು - ಸಮಾಜಸೇವೆ

ಬಳ್ಕೂರು ಕೃಷ್ಣ ಯಾಜಿ - ಉ. ಕ. - ಯಕ್ಷಗಾನ

ನಾರಾಯಣ ದಾಸರು - ಉ. ಕ. - ಹರಿಕಥೆ


ಹವ್ಯಕ ಶ್ರೀ

ಅಶ್ವಿನೀ ಭಟ್ - ದ. ಕ. - ಕ್ರೀಡೆ

ರಾಜಾರಾಮ ಸಿ. ಜಿ. - ದ. ಕ. - ಕೃಷಿ ಉದ್ಯಮ

ಅಶ್ವಿನಿಕುಮಾರ್ ಭಟ್ - ಉ. ಕ. - ಪರಿಸರ


ಹವ್ಯಕ ಸೇವಾಶ್ರೀ

ತ್ರಿಯಂಬಕ ಗಣೇಶ ಹೆಗಡೆ - ವ್ಯವಸ್ಥಾಪಕರು - ಹವ್ಯಕ ಮಹಾಸಭೆ


ಪ್ರಶಸ್ತಿ ಆಯ್ಕೆ ಹೇಗೆ?

ಸಮಾಜದ ಅರ್ಹ ಸಾಧಕರನ್ನು ಗುರುತಿಸಿ; ಆಯ್ಕೆಯ ಮಾನದಂಡಗಳ ಅನ್ವಯ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ಮಹಾಸಭೆಯ ಸದಸ್ಯರುಗಳು ಪ್ರಶಸ್ತಿಗೆ ಹೆಸರುಗಳನ್ನು ಸೂಚಿಸಬಹುದಾಗಿದ್ದು; ಸ್ವಯಂ ಅಭ್ಯರ್ಥಿಗಳೇ ಪ್ರಶಸ್ತಿಗಾಗಿ ಅರ್ಜಿಸಲ್ಲಿಸಲು ಅವಕಾಶವಿರುವುದಿಲ್ಲ.  

ಮಾಧ್ಯಮ ಸಂಪರ್ಕ: 8970228945

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم