|ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946
ಉಪಯುಕ್ತ ನ್ಯೂಸ್- ಉತ್ಪ್ರೇಕ್ಷೆಯಿಲ್ಲದ ಸುದ್ದಿಗಳ, ಲಕ್ಷಾಂತರ ಓದುಗರ ವಿಶ್ವಾಸಾರ್ಹ ಜಾಲತಾಣ | ಜಾಹೀರಾತುಗಳಿಗಾಗಿ ಸಂಪರ್ಕಿಸಿ- 7019126946 ಬಿಜೆಪಿ ನಲ್ವತ್ತೆರಡು ಸಂವತ್ಸರಗಳಲ್ಲಿ ಬೆಳೆದು ಬಂದ ಹಾದಿ ಮತ್ತು ಮುಂದಿನ ಸವಾಲುಗಳು

ಬಿಜೆಪಿ ನಲ್ವತ್ತೆರಡು ಸಂವತ್ಸರಗಳಲ್ಲಿ ಬೆಳೆದು ಬಂದ ಹಾದಿ ಮತ್ತು ಮುಂದಿನ ಸವಾಲುಗಳು



ದೇಶದ ರಾಜಕಾರಣದ ಹಾದಿಯಲ್ಲಿ ಬಿಜೆಪಿಯ 40 ವರುಷಗಳ ಸಾಧನೆಯ ಹೆಜ್ಜೆ ನಿಜಕ್ಕೂ ಮೆಚ್ಚುಗೆಗೆ ಪಾತ್ರವಾಗುವಂತಾದ್ದೆ. ಈ ಯಶಸ್ಸು ಹೇಗೆ ಸಾಧ್ಯವಾಯಿತು ಅನ್ನುವುದು ಕೂಡಾ ಅಷ್ಟೇ ಚಿಂತನೆಗೆ ಗ್ರಾಸವಾದ ಯೇೂಗ್ಯ ವಿಚಾರ ಕೂಡ.


1980 ರಲ್ಲಿ ಭಾಜಪ ಎಂಬ ಹೆಸರಿನೊಂದಿಗೆ ಹುಟ್ಟಿಕೊಂಡ ಪಕ್ಷ ನಿಧಾನವಾಗಿ ಅಂಬೆಗಾಲಿಡುವ ಮೂಲಕ 1984 ರ ಚುನಾವಣೆಯಲ್ಲಿ ಕೇವಲ 2 ಸ್ಥಾನಗಳನ್ನು ಲೇೂಕ ಸಭೆಯಲ್ಲಿ ಸಂಪಾದಿಸುವುದರೊಂದಿಗೆ ಮೊದಲಾಗಿ ತನ್ನ ಖಾತೆಯನ್ನು ತೆರೆಯಿತು. ಮತ್ತೆ ಬಿಜೆಪಿ ಹಿಂದೆ ನೇೂಡಲೇ ಇಲ್ಲ. 1989 ರಲ್ಲಿ ಒಮ್ಮೆಲೇ 85ಕ್ಕೆ ನೆಗೆತ 1991ರಲ್ಲಿ 125 ಜಿಗಿತ 1996ಕ್ಕೆ 161ಕ್ಕೆ ಏರಿತು 1998 ರಲ್ಲಿ 182ಕ್ಕೆ ಏರಿದರೆ ಅದೇ 1999 ರಲ್ಲಿ ಮತ್ತೆ ಅದೇ ಸಂಖ್ಯೆ 182ಕ್ಕೆ ಬಂದು ನಿಂತಿತ್ತು. ಬಿಜೆಪಿ ಸ್ವಲ್ಪ ಹಿಂಜರಿತ ಕಂಡಿದ್ದು 2004ರ ಚುನಾವಣೆ ಯಲ್ಲಿ 138ಕ್ಕೆ ಇಳಿತ 2009ರಲ್ಲಿ 116 ಸ್ಥಾನಗಳಿಗೆ ಬಾರಿ ಕುಸಿತ ಕಂಡಿತ್ತು. ಮತ್ತೆ ಪಕ್ಷಕ್ಕೆ ಮರು ಶಕ್ತಿ ನೀಡಿದ ಚುನಾವಣೆ ಅಂದರೆ 2014ಕ್ಕೆ ಬಿಜೆಪಿಗೆ ಏಕ ಪಕ್ಷವಾಗಿ ಅಧಿಕಾರ ಕಟ್ಟುವಷ್ಟು ಸರಳ ಬಹುಮತ 282. ಅದೇ 2019ಕ್ಕೆ ನಡೆದ ಮಹಾ ಚುನಾವಣೆಯಲ್ಲಿ ಬಿಜೆಪಿ 303 ಸ್ಥಾನಗಳನ್ನು ಗಳಿಸುವುದರೊಂದಿಗೆ ದೇಶದ ಅತಿ ದೊಡ್ಡ ರಾಷ್ಟ್ರೀಯ ಪಕ್ಷ ಅನ್ನುವ ಕೀರ್ತಿಗೆ ಮಾತ್ರವಲ್ಲ ನಿಚ್ಚಳ ಬಹುಮತದೊಂದಿಗೆ ಹೆಮ್ಮರವಾಗಿ ತಲೆ ಎತ್ತಿ ಇನ್ನಿತರ ರಾಷ್ಟ್ರೀಯ ಪಕ್ಷ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಅತೀ ದೊಡ್ಡ ಸವಾಲು ನೀಡಬಲ್ಲ ಪಕ್ಷವಾಗಿ ಬೆಳೆದು ನಿಂತಿದೆ.


ಇದಿಷ್ಟೂ ಬಿಜೆಪಿಯ ನಲ್ವತ್ತು ವರುಷಗಳ ಯಶೇೂಗಾಥೆಯಾದರೆ ಇನ್ನು ಬಿಜೆಪಿ ಮುಂದಿರುವ ಸವಾಲುಗಳು ಏನು? ಜನ ಸಾಮಾನ್ಯರು ಈ ಪಕ್ಷದಿಂದ ಏನು ನಿರೀಕ್ಷೆ ಮಾಡುತ್ತಿದ್ದಾರೆ? ಈ ಪಕ್ಷ ಇದೇ ಸ್ಥಾನ ಮಾನ ವರ್ಚಸ್ಸು ಉಳಿಸಿಕೊಂಡು ಮುಂದೆಯೂ ಬೆಳೆಯಬಹುದೇ? ಅನ್ನುವುದನ್ನು ಪಕ್ಷವೂ ಗಂಭೀರವಾಗಿ ಮುಂದಾಲೇೂಚನೆ ಮಾಡಬೇಕು ಜನರು ಕೂಡಾ ಚಿಂತನೆ ಮಾಡಬೇಕಾದ ಸಂಕ್ರಮಣ ಕಾಲ ಸನ್ನಿಹಿತವಾಗುತ್ತಿದೆ.


ಬಿಜೆಪಿಯ ಮುಂದಿನ ಸವಾಲುಗಳು:

1. ಮೇೂದಿ ಎಂಬ ಬ್ರ್ಯಾಂಡ್ ನೇಮ್ ಬಿಜೆಪಿಗೆ ಮುಂದೆ ದೊಡ್ಡ ಸವಾಲಾಗುವ ಸಾಧ್ಯತೆವೂ ಇದೆ. ಹಿಂದಿನ ಇಂದಿನ ಪ್ರತಿಯೊಂದು ಚುನಾವಣೆಯ ಪ್ರಚಾರ ಘೇೂಷಣೆಯಲ್ಲಿ ಮೇೂದಿಯವರ ಹೆಸರೇ ಯುವ ಮತದಾರರನ್ನು ಹೆಚ್ಚು ಮತಗಟ್ಟೆಗೆ ಸೆಳೆಯುತ್ತಿದೆ ಮತವಾಗಿ ಪರಿವರ್ತನೆಯಾಗುತ್ತಿದೆ ಅನ್ನುವುದು ಅಷ್ಟೇ ಸತ್ಯ. ನಿಂತ ಅಭ್ಯರ್ಥಿಗಳು ನಗಣ್ಯ ಮೇೂದಿಯ ಹೆಸರೇ ಗಣ್ಯವಾಗುತ್ತಿದೆ. ಇದಕ್ಕಾಗಿಯೇ ಹಲವು ಬಾರಿ ಮೇೂದೀಜಿಯವರು ಇದು ಸಲ್ಲದು ಅನ್ನುವ ಮಾತುಗಳಿಂದ ಪಕ್ಷದ ಅಭ್ಯರ್ಥಿಗಳನ್ನು ಸದಾ ಎಚ್ಚರಿಸುವ ಮಾತುಗಳನ್ನು ಹೇಳುತ್ತಿರುತ್ತಾರೆ.


2.ರಾಜ್ಯ ಮಟ್ಟದಲ್ಲಿ ಪ್ರಾಮಾಣಿಕ ದೂರದರ್ಶಿತ್ವವುಳ್ಳ ನಾಯಕತ್ವ ಹುಟ್ಟಿಕೊಳ್ಳದೇ ಇರುವುದು ಅಥವಾ ಬೆಳೆಸದೇ ಇರುವುದು ಪಕ್ಷದ ದೃಷ್ಟಿಯಿಂದ ಹಿಂಜರಿತ. ಬಿಜೆಪಿಗೆ ರಾಷ್ಟ್ರ ಮಟ್ಟದಲ್ಲಿರುವ ವರ್ಚಸ್ಸು ನಾಯಕತ್ವ ರಾಜ್ಯ ಮಟ್ಟದಲ್ಲಿ ಬೆಳೆಯದೇ ಇರುವುದು. ಆಯಾಯ ರಾಜ್ಯಗಳ ಪರಿಸ್ಥಿತಿಗೆ ತಕ್ಕ ಹಾಗೆ ತೇಪೆ ಹಾಕಿ ಮಣೆ ಹಾಕುವ ಕೆಲಸ ಬಿಜೆಪಿ ಮಾಡುತ್ತಿರುವುದು ಪಕ್ಷದ ಬೆಳವಣಿಗೆಯ ದೃಷ್ಟಿಯಿಂದ ಅಷ್ಟು ಹಿತಕರವಲ್ಲದ ಬೆಳವಣಿಗೆ. ಅಧಿಕಾರಕ್ಕಾಗಿ ಇತರ ಪಕ್ಷಗಳು ಮಾಡಿದ ತಪ್ಪುಗಳನ್ನು ಬಿಜೆಪಿಯೂ ಮಾಡುತ್ತಿರುವುದು ಎದ್ದು ಕಾಣುವಂತಿದೆ.


3. ಮುಂದೆ ಬರುವ ಚುನಾವಣೆಗಳಲ್ಲಿ ಪಕ್ಷಕ್ಕೆ ಯಾವುದೇ "issue agenda"ಗಳ ಕೊರತೆಯೂ ಎದುರಾಗ ಬಹುದು. ಕಾರಣವಿಷ್ಟೇ ಒಂದು ವೇಳೆ ಮೇೂದಿಯವರು 2029 ರವರೆಗೆ ಪ್ರಧಾನಿಯಾಗಿ ಮುಂದುವರಿದರೂ ಅಂದರೆ ಬಿಜೆಪಿಯ ಈಗಿನ ಎಲ್ಲಾ ಖಾಯಂ ಅಜೆಂಡಾದ ಧ್ವನಿಗಳು ಮುಗಿದು ಹೇೂಗಬಹುದು. ವಿಧಿ 370, ರಾಮ ಮಂದಿರ ಮುಂತಾದವು ಇದಾಲೇ ಮುಗಿದ ಅಧ್ಯಾಯ. ಇನ್ನೂ ಉಳಿದಿರುವುದು ಸಮಾನ ನಾಗರಿಕ ಸಂಹಿತೆ. ಇದನ್ನೂ ಹೇಗೂ ಮುಗಿಸಿಯೇ ಮೇೂದಿಯವರು ತೆರಳುತ್ತಾರೆ ಅನ್ನುವುದು ಎಲ್ಲರಿಗೂ ತಿಳಿದ ನಗ್ನ ಸತ್ಯ. ಇದೆಲ್ಲಾ ಮುಗಿದ ಮೇಲೆ ಬಿಜೆಪಿಗಿರುವ ಅಜೆಂಡಾ ಏನು? ಅಭಿವೃದ್ಧಿ ದಕ್ಷತೆ ಪ್ರಾಮಾಣಿಕತೆ ಇತ್ಯಾದಿ. ಇದನ್ನೂ ಮೈಗೂಡಿಸಿಕೊಳ್ಳಲು ಸಾಧ್ಯವೇ ಅನ್ನುವುದನ್ನು ಬಿಜೆಪಿಗರು ಗಂಭೀರವಾಗಿ ಆಲೇೂಚಿಸಬೇಕಾದ ವಿಚಾರ.


ಇದು ಸಾಧ್ಯವಾಗದೇ ಹೇೂದರೆ ಬಿಜೆಪಿಯ ಮುಂದಿನ ಅಳಿವು ಉಳಿವು ವಿಪಕ್ಷಗಳ ಸಾಫಲ್ಯ ವೈಫಲ್ಯಗಳ ಮೇಲೆ ನಿಧಾ೯ರವಾಗ ಬೇಕಾದ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ.


ಜನ ಸಾಮಾನ್ಯರು ನಿಮ್ಮಿಂದ ಏನು ನಿರೀಕ್ಷೆ ಮಾಡುತ್ತಿದ್ದಾರೆ: ಸ್ವರ್ಗವನ್ನು ಧರೆಗೆ ಇಳಿಸಬೇಕೆಂದು ಕೇಳುತ್ತಿಲ್ಲ. ಪ್ರಾಮಾಣಿಕ ದಕ್ಷ ನಿರಂತರ ಸರಳವಾದ ಆಡಳಿತದ ಜೊತೆಗೆ ಬದುಕಿಗೆ ಬೇಕಾಗುವ ಉದ್ಯೋಗ ಮತ್ತು ಮೂಲ ಸೌಕರ್ಯಗಳ ಪೂರೈಕೆ. ನಮಗೆ ನಿಮ್ಮ ಉಚಿತ ಪುಕ್ಕಟೆ ಘೇೂಷಣೆಗಳೂ ಬೇಡವೇ ಬೇಡ. ಕೊಡುವುದನ್ನು ಯಾವುದೇ ಫಲಾಪೇಕ್ಷ ಇಲ್ಲದೇ ನೀಡಿ ಅಷ್ಟೇ ಸಾಕು. ಕೊನೆಯದಾಗಿ ಜನರಿಗೆ ಮಾಗ೯ದಶ೯ನ ಮಾಡುವ ನೈತಿಕತೆಯನ್ನು ಉಳಿಸಿ  ಬೆಳೆಸಿಕೊಂಡು ಬದುಕಿ. ಇಷ್ಟು ಮಾಡಲು ನಿಮಗೆ ಸಾಧ್ಯವಾದರೆ ನಿಮ್ಮನ್ನು ಆಯ್ಕೆ ಮಾಡಿದ ನಮಗೆ ನಿಮ್ಮ ಮೇಲೆ ಧನ್ಯಾತಾ ಭಾವ ಮೂಡಬಹುದು. ಇದು ಪಕ್ಷದ ಹುಟ್ಟುಹಬ್ಬಕ್ಕೆ ಜನರು ನೀಡುವ ನಿಜವಾದ ಸಂದೇಶದ ಹಾರೈಕೆ.

-ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


hit counter

0 تعليقات

إرسال تعليق

Post a Comment (0)

أحدث أقدم