ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಚಲನಚಿತ್ರ ನಟ ಯಶ್ ಅವರನ್ನು ಗೌರವಿಸಿದರು.
ಉಜಿರೆ: ಚಲನಚಿತ್ರ ನಟ ಯಶ್ ಸಹಕಲಾವಿದರೊಂದಿಗೆ ಭಾನುವಾರ ಧರ್ಮಸ್ಥಳಕ್ಕೆ ಬಂದು ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಹೆಗ್ಗಡೆಯವರು ಯಶ್ ಅವರನ್ನು ಗೌರವಿಸಿದರು. ಬಳಿಕ ಅವರು ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಮಣ್ಣಿನ ಹರಕೆಯ ಕ್ಷೇತ್ರವೆಂದೇ ಚಿರಪರಿಚಿತವಾದ ಸುರ್ಯ ದೇವಸ್ಥಾನಕ್ಕೂ ಹೋಗಿ ಯಶ್ ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು.
ಇದೇ 14 ರಂದು ಬಿಡುಗಡೆಯಾಗಲಿರುವ ಕೆ.ಜಿ.ಎಫ್. 2 ಚಿತ್ರದ ಯಶಸ್ಸಿಗಾಗಿ ಪ್ರಾರ್ಥನೆ ಸಲ್ಲಿಸಲು ವಿವಿಧ ಕ್ಷೇತ್ರಗಳಿಗೆ ಭೇಟಿ ನೀಡಿರುವುದಾಗಿ ಚಲನಚಿತ್ರ ನಟ ಯಶ್ ತಿಳಿಸಿದ್ದಾರೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ