ಮೂಡುಬಿದಿರೆ: ಶಿಕ್ಷಕರು ವಿದ್ಯಾರ್ಥಿಗಳನ್ನು ಗುರಿ ತಲುಪುವಂತೆ ಮಾಡುವ ಮಾರ್ಗದರ್ಶಕರು ಎಂದು ಬೆಂಗಳೂರಿನ ಆದ್ಯಾ ಕಮ್ಯೂನಿಕೇಷನ್ ಸಂಸ್ಥೆಯ ಸ್ಥಾಪಕ ಚೆಂಗಪ್ಪ ಎ ಡಿ ಹೇಳಿದರು.
ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ವತಿಯಿಂದ ನಡೆದ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಸ್ವತಃ ಆಸಕ್ತಿಯಿಲ್ಲದೆ ಯಾವುದನ್ನೂ ಕಲಿಯಲು ಸಾಧ್ಯವಿಲ್ಲ. ಎಲ್ಲಾ ರೀತಿಯ ಸಮಸ್ಯೆಗಳಿಗೂ ಸರಿಯಾದ ಸಂವಹನ ಇಲ್ಲದಿರುವುದೇ ಕಾರಣ, ಉದ್ಯೋಗ ಸ್ಥಳಗಳಲ್ಲಿ ಶೇಕಡಾ 80ರಷ್ಟು ಸಮಸ್ಯೆಗಳು ಪರಿಣಾಮಕಾರಿಯಾದ ಸಂವಹನವಿಲ್ಲದಿರುವುದರಿಂದ ಉದ್ಭವಿಸುತ್ತದೆ. ಮುಕ್ತವಾದ ಸಂವಹನದಿಂದ ಸಮಸ್ಯೆಗಳನ್ನು ದೂರೀಕರಿಸಬಹುದು. ವಿದ್ಯಾರ್ಥಿಗಳನ್ನು ಸರಿದಾರಿಯಲ್ಲಿ ಗುರಿತಲುಪುವಂತೆ ಮುನ್ನಡೆಸುವಂತಹ ಗುರುಗಳ ಅಗತ್ಯವಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ ನಂಬಿಕೆ ಮತ್ತು ಅಪನಂಬಿಕೆ ಜೀವನದ ಅಭಿವೃದ್ಧಿಯ ಹಂತಗಳು. ಈ ಹಂತಗಳನ್ನು ಸರಿಯಾಗಿ ನಿರ್ವಹಿಸುವವರು ಜೀವನದಲ್ಲಿ ಉನ್ನತಿಯನ್ನು ಕಾಣುತ್ತಾರೆ ಹಾಗೂ ವಿದ್ಯಾರ್ಥಿಗಳು ಇತ್ತೀಚಿಗೆ ಮಾದಕ ವ್ಯಸನಿಗಳಾಗುತ್ತಿದ್ದಾರೆ ಈ ಚಟಗಳಿಂದ ಮುಕ್ತವಾಗದ ಹೊರತು ಗುರಿ ತಲುಪಲು ಸಾಧ್ಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ವಿಭಾಗದ ನ್ಯೂಸ್ ಬುಲೆಟಿನ್ 'ಇಂಟ್ರಾಸ್ಸ್ಪೆಕ್ಷನ್'ನ್ನು ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಸುರೇಖಾ ಹಾಗೂ ಶೈಕ್ಷಣಿಕ ಸಲಹೆಗಾರ್ತಿ ಸಂಗೀತ ಶ್ಯಾನುಭೋಗ, ಕಾರ್ಯಕ್ರಮದ ವಿದ್ಯಾರ್ಥಿ ಸಂಯೋಜಕ ಮೊಹಮ್ಮದ್ ಆಝಿಬ್ ಹುಸೈನ್ ಉಪಸ್ಥಿತರಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ