ನಿಟ್ಟೆ: ‘ನಿಟ್ಟೆ ವಿದ್ಯಾಸಂಸ್ಥೆಯು ತಂತ್ರಜ್ಞಾನ ವಿಷಯದಲ್ಲಿ ಮೂರು ಭಾಷೆಗಳ ಪದಕೋಶ ಸಂಗ್ರಹ ಕಾರ್ಯವನ್ನು ಆರಂಭಿಸಿರುವುದು ಒಂದು ಶ್ಲಾಘನೀಯ ಕಾರ್ಯವಾಗಿದೆ. ನಿಟ್ಟೆ ಸಂಸ್ಥೆಯು ಸುಮಾರು 6 ವರ್ಷಗಳ ಹಿಂದೆ ವೈದ್ಯಕೀಯ ಕ್ಷೇತ್ರದಲ್ಲಿ ಇದೇ ರೀತಿಯ ಪದಕೋಶ ಸಂಗ್ರಹ ಕಾರ್ಯವನ್ನು ಆರಂಭಿಸಿತ್ತು. ಇಂತಹ ಯೋಜನೆಗಳು ಇನ್ನಷ್ಟು ಬಂದರೆ ಪ್ರಾದೇಶಿಕ ಭಾಷೆಗಳ ಬೆಳವಣಿಗೆಯೂ ಸಾಧ್ಯ’ ಎಂದು ಮಣಿಪಾಲದ ಎಂ.ಐ.ಟಿ ಸಂಸ್ಥೆಯ ಫಾರ್ಮರ್ ಪ್ರೊಫೆಸರ್ ನಾಡೋಜ. ಕೆ.ಪಿ ರಾವ್ ಅಭಿಪ್ರಾಯಪಟ್ಟರು.
ಅವರು ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಕಾಲೇಜು ಹಾಗೂ ಕಮಿಶನ್ ಫಾರ್ ಸೈಂಟಿಫಿಕ್ & ಟೆಕ್ನಿಕಲ್ ಟರ್ಮಿನಾಲಜಿ- ಮಿನಿಸ್ಟ್ರಿ ಆಫ್ ಎಜುಕೇಶನ್ ಜಂಟಿ ಆಶ್ರಯದಲ್ಲಿ ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಹಮ್ಮಿಕೊಂಡ ಐದು ದಿನಗಳ ‘ಟ್ರೈಲಿಂಗ್ವಲ್ ಗ್ಲೋಸರಿ ಆಫ್ ಇಂಜಿನಿಯರಿಂಗ್’ ಎಂಬ ಕಾರ್ಯಾಗಾರವನ್ನು ಮಾ.1 ರಂದು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಸಮೂಹ ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ರೀ ಎನ್ ವಿನಯ ಹೆಗ್ಡೆ ಅವರು ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ ‘ಉನ್ನತ ಶಿಕ್ಷಣದಲ್ಲಿ ಪ್ರಾದೇಶಿಕ ಭಾಷೆಗಳನ್ನು ಶಿಕ್ಷಣ ಮಾಧ್ಯಮವಾಗಿ ಪರಿಚಯಿಸುವ ಬಗೆಗೆ ನ್ಯೂ ಎಜುಕೇಶನ್ ಪಾಲಿಸಿ-2020 ರಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಶಿಕ್ಷಣ ಮಾಧ್ಯಮವು ಆಂಗ್ಲ ಭಾಷೆಯೇ ಆಗಿದ್ದರೆ ಉದ್ಯೋಗಾವಕಾಶದ ನಿಟ್ಟಿನಲ್ಲಿ ಉತ್ತಮ ಅವಕಾಶ ಸಿಗಬಹುದು ಎಂಬುದು ನಮಗೆಲ್ಲರಿಗೂ ತಿಳಿದ ವಿಚಾರ. ತಾಂತ್ರಜ್ಞಾನದ ವಿಷಯದಲ್ಲಿ ಎಲ್ಲಾ ಇಂಗ್ಲೀಷ್ ಶಬ್ದಗಳಿಗೂ ತತ್ಸಮನಾದ ಪ್ರಾದೇಶಿಕ ಭಾಷಾ ಶಬ್ದವು ಸಿಗುವುದು ತುಸು ಕಷ್ಟವಾಗಬಹುದು’ ಎಂದು ಹೇಳಿದರು.
ಕಮಿಶನ್ ಫಾರ್ ಸೈಂಟಿಫಿಕ್ & ಟೆಕ್ನಿಕಲ್ ಟರ್ಮಿನಾಲಜಿ ಸಂಸ್ಥೆಯ ಸಹಾಯಕ ನಿರ್ದೇಶಕ ಡಾ.ಸಂತೋಷ್ ಕುಮಾರ್ ಗೌರವ ಅತಿಥಿಗಳಾಗಿ ಆಗಮಿಸಿ ಕಾರ್ಯಾಗಾರದ ಬಗೆಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ಇದೇ ಕಾರ್ಯಕ್ರಮದಲ್ಲಿ ನಾಡೋಜ. ಕೆ.ಪಿ ರಾವ್ ಹಾಗೂ ಡಾ.ಸಂತೋಷ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಾಗಾರದ ಸಂಯೋಜಕಿ ಇಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಶನ್ ವಿಭಾಗದ ಪ್ರಾಧ್ಯಾಪಕಿ ಹಾಗೂ ವಿದ್ಯಾರ್ಥಿನಿಯರ ಹಾಸ್ಟೆಲ್‌ನ ಚೀಫ್ ವಾರ್ಡನ್ ಡಾ.ವೀಣಾದೇವಿ ಶಾಸ್ತ್ರಿಮಠ್ ಸ್ವಾಗತಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ವಂದಿಸಿದರು. ಬಯೋಟೆಕ್ನಾಲಜಿ ವಿಭಾಗದ ಪ್ರಾಧ್ಯಾಪಕಿ ಡಾ.ವಿದ್ಯಾ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ