ಉಜಿರೆ: ವಿಜ್ಞಾನದಲ್ಲಿ ಮಾನವನಿಗೆ ಮೂಲಾಸಕ್ತಿ ಬರಲು ಮುಖ್ಯ ಕಾರಣ ಖಗೋಳ ಶಾಸ್ತ್ರ. ಅಲ್ಲಿ ಮೂಡಿದ ಕುತೂಹಲವೇ ವಿಜ್ಞಾನ ಬೆಳೆಯಲು ಸಹಕಾರಿಯಾಯಿತು.ಇಂತಹ ವಿಜ್ಞಾನ ಕಾರ್ಯಾಗಾರಗಳಿಂದ ವಿಜ್ಞಾನದ ಬಗ್ಗೆ ಒಳ್ಳೆಯ ಜ್ಞಾನ ಸಿಗುತ್ತದೆ ಎಂದು ಮೂಡಬಿದಿರೆ ಶ್ರೀ ಮಹಾವೀರ ಕಾಲೇಜಿನ ಖಗೋಳಶಾಸ್ತ್ರಜ್ಞ, ಪ್ರೊಫೆಸರ್ ರಮೇಶ್ ಭಟ್ ಮಾತನಾಡಿದರು.
ಫೆಬ್ರವರಿ 2 ರಂದು ಉಜಿರೆಯ ಶ್ರೀ ಧ. ಮಂ. ಕಾಲೇಜಿನ ಭೌತಶಾಸ್ತ್ರ ವಿಭಾಗ ಮತ್ತು ಆಂತರಿಕ ಗುಣಮಟ್ಟ ಭರವಸೆಯ ಕೋಶ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡಮಿ, ಕರ್ನಾಟಕ ಸರಕಾರ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ 'ನಭೋದರ್ಶನ' ಕಾರ್ಯಾಗಾರದಲ್ಲಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದ ಉಜಿರೆ ಕಾಲೇಜಿನ ಪ್ರಾಂಶುಪಾಲ ಪಿ.ಎನ್. ಉದಯಚಂದ್ರ, ಆಕಾಶಗಳು ಎಂದೂ ಸೋಜಿಗದ ವಿಷಯ. ಎಲ್ಲಾ ವಿಜ್ಞಾನದ ಮೂಲ ತತ್ವಶಾಸ್ತ್ರ ಮತ್ತು ಕುತೂಹಲ. ವಿಜ್ಞಾನವು ಸಂಶೋಧನೆ, ಪ್ರಯೋಗ, ಶಿಕ್ಷಣ ಎಂಬ ಮೂರು ಹಂತಗಳನ್ನು ಅಳವಡಿಸಿಕೊಂಡಿದೆ ಎಂದರು.
ಜನವರಿ 29 ರಂದು ಸ್ಪೆಕ್ಟ್ರಾ ಅಸೋಸಿಯೇಶನ್ ನಿಂದ ನಡೆದ ಗುರುತ್ವ ಸ್ಪರ್ದೆಯಲ್ಲಿ ವಿಜೇತರಿಗೆ ಬಹುಮಾನ ವಿತರಣೆಯನ್ನು ನಡೆಸಿಕೊಡಲಾಯಿತು. ತಾಲೂಕಿನ ಪ್ರೌಢಶಾಲಾ ಶಿಕ್ಷಕ ವೃಂದ, ಮತ್ತು ವಿಜ್ಞಾನ ಆಸಕ್ತರು, ವಿದ್ಯಾರ್ಥಿಗಳು ಹಾಜರಿದ್ದರು. ಕಾರ್ಯಕ್ರಮವನ್ನು ಎಸ್.ಎನ್. ಕಾಕತ್ಕರ್ ಸ್ವಾಗತಿಸಿ, ಅಭಿಜ್ಞಾ ವಂದಿಸಿ, ಸ್ಪೂರ್ತಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ