ಮಂಗಳೂರು ವಿವಿ: ಆರು ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರಕ್ಕೆ ಚಾಲನೆ

Upayuktha
0

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪ್ರವಾಸೋದ್ಯಮ ಮತ್ತು ಪ್ರವಾಸ ನಿರ್ವಹಣೆ  ವಿಭಾಗ ಆಯೋಜಿಸಿರುವ ʼಸಾಮಾಜಿಕ ವಿಜ್ಞಾನದಲ್ಲಿ ಸಂಶೋಧನಾ ವಿಧಾನʼ ಎಂಬ ವಿಷಯದ ಕುರಿತ 6 ದಿನಗಳ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಕುಲಪತಿ ಪ್ರೊ ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಬುಧವಾರ ಶ್ರೀನಿವಾಸ ಮಲ್ಯ ಸಭಾಂಗಣದಲ್ಲಿ ದೀಪ ಬೆಳಗಿಸಿ ಉದ್ಘಾಟಿಸಿದರು.  


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೊಟ್ಟಾಯಂನ ಮಹಾತ್ಮಗಾಂಧಿ ವಿಶ್ವವಿದ್ಯಾನಿಲಯದ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥ ಡಾ.ಟೋನಿ ಕೆ ಥೋಮಸ್ ಉಪಸ್ಥಿತರಿದ್ದರು ಮತ್ತು ಕಾರ್ಯಾಗಾರದ ಮಹತ್ವವನ್ನು  ತಿಳಿಸಿ ಕೊಟ್ಟರು. ಗೌರವ ಅತಿಥಿಗಳಾಗಿ ವಿಶ್ವವಿದ್ಯಾನಿಲಯದ ಹಣಕಾಸು ಅಧಿಕಾರಿ ಡಾ.ವೈ.ಮುನಿರಾಜು ಮತ್ತು ಸ್ನಾತಕೋತ್ತರ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಪ್ರೊ.ಪುಟ್ಟಣ್ಣ ಕೆ ಉಪಸ್ಥಿತರಿದ್ದರು. 


ಮಂಗಳೂರು ವಿವಿಯ ವಿಶೇಷಾಧಿಕಾರಿ ಮತ್ತು ಪ್ರವಾಸೋದ್ಯಮ ವಿಭಾಗದ ಸಂಯೋಜಕರಾದ ಡಾ.ಶೇಖರ್ ನಾಯಕ್  ಅವರು ಅತಿಥಿಗಳನ್ನು ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕರಾದ  ಡಾ.ಜೋಸೆಫ್.ಪಿ.ಡಿ ಇವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಧನ್ಯವಾದ ಸಮರ್ಪಣೆಯನ್ನು ನಿಕ್ಷಿತಾ.ಶೆಟ್ಟಿ ನೆರವೇರಿಸಿದರು. ಮೇಘನಾ ಪ್ರಾರ್ಥನೆ ನೆರವೇರಿಸಿದರೆ, ಹರ್ಷಿತಾ ಬೆಂಗ್ರೆ ಕಾರ್ಯಕ್ರಮ ನಿರೂಪಿಸಿದರು. 

ದೇಶದ ವಿವಿದೆಡೆಯಿಂದ ಬಂದಿದ್ದ ಸುಮಾರು 50 ಮಂದಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. 


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top