ಉಜಿರೆ: ಪ್ರಜ್ಞಾಪೂರ್ವಕವಾಗಿ ಮಹಿಳೆ ತನ್ನ ಘನತೆ, ಗೌರವ ಮತ್ತು ಹಿತಾಸಕ್ತಿ ಕಾಪಾಡಿಕೊಂಡು ಶೋಷಣೆಮುಕ್ತಳಾಗಿ ಸ್ವಾವಲಂಬಿ ಜೀವನ ನಡೆಸಿದಾಗ ಸಮಾನತೆಯೊಂದಿಗೆ ಮಹಿಳಾ ಸಬಲೀಕರಣ ಸಾಧ್ಯ. ದೇಶದ ಅಭಿವೃದ್ಧಿ ಸಾಧನೆಯಲ್ಲಿ ಮಹಿಳಾ ಸಶಕ್ತೀಕರಣದಷ್ಟು ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ ಎಂದು ಬೆಳ್ತಂಗಡಿ ರೋಟರಿ ಆನ್ಸ್ ಅಧ್ಯಕ್ಷೆ ನವೀನಾ ಜಯಕುಮಾರ್ ಅಭಿಪ್ರಾಯಪಟ್ಟರು.
ನವೀನಾ.ಜೆಕೆ ಅವರು ಬೆಳ್ತಂಗಡಿ ರೋಟರಿ ಆನ್ಸ್ ಕ್ಲಬ್ ಇಂದು ಉಜಿರೆಯಲ್ಲಿ ಆಯೋಜಿಸಿದ ವಿಶ್ವ ಮಹಿಳಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ಯಾವುದೇ ವಿಶೇಷ ತರಬೇತಿ ಪಡೆಯದೇ ಒಂದೇ ಪ್ರಯತ್ನದಲ್ಲಿ ಸಿಎ ಪರೀಕ್ಷೆ ತೇರ್ಗಡೆಯಾದ ಬೆಳ್ತಂಗಡಿಯ ಪ್ರತಿಭಾನ್ವಿತೆ ಸುರೇಂದ್ರ ಬಂಗೇರಾ ಹಾಗೂ ಉಷಾಲತಾ ಬಂಗೇರ ಇವರ ಪುತ್ರಿ ನಮೃತಾ ಎಸ್ ಇವರನ್ನು ಅಭಿನಂದಿಸಲಾಯಿತು. ಪ್ರತಿಭಾನ್ವಿತ ವಿದ್ಯಾರ್ಥಿನಿ ಕು ಅಕ್ಷರಾ ಜೈನ್ ಅವರಿಗೆ ವಿದ್ಯಾರ್ಥಿವೇತನವಾಗಿ ರೂ.೧೦,೦೦೦ ವನ್ನು ಇದೇ ಸಮಯದಲ್ಲಿ ನೀಡಲಾಯಿತು.
ಆನ್ಸ್ ಕ್ಲಬ್ಬಿನ ಕಾರ್ಯದರ್ಶಿ ಡಾ. ಭಾರತಿ ಗೋಪಾಲಕೃಷ್ಣ ಅವರು ಸ್ವಾಗತಿಸಿ ವಂದಿಸಿದ ಕಾರ್ಯಕ್ರಮದಲ್ಲಿ ರೋಟರಿ ಆನ್ಸ್ ಸದಸ್ಯೆಯರು ಭಾಗವಹಿಸಿದ್ದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ