ಮಂಗಳೂರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಕ್ಷೇಮಪಾಲನಾ ನಿರ್ದೇಶನಾಲಯದ 6 ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ನ ಬೆಂಬಲಿತ ಎಲ್ಲಾ 6 ಸ್ಥಾನಗಳನ್ನು ಗೆದ್ದುಕೊಂಡು ಸತತ 7ನೇ ವರ್ಷ ವಿಜಯಪತಾಕೆ ಹಾರಿಸಿದೆ.
ಅಧ್ಯಕ್ಷರಾಗಿ ದ್ವಿತೀಯ ವರ್ಷದ ರಾಜ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿ ಸಂಪತ್ ಬಜಿಲಾಡಿ ಅಯ್ಕೆಯಾದರು. ಇವರು ಈ ಮೊದಲು 2019 ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು.
ಕಾರ್ಯದರ್ಶಿಯಾಗಿ ಕಾರ್ತಿಕ ರಾವ್, ಉಪಾಧ್ಯಕ್ಷರಾಗಿ ವೇದಾಂತಿ, ಜೊತೆ ಕಾರ್ಯದರ್ಶಿಯಾಗಿ ಸ್ಕಂದ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಸೃಷ್ಟಿ, ಸಾಂಸ್ಕೃತಿಕ ಜೊತೆ ಕಾರ್ಯದರ್ಶಿಯಾಗಿ, ಕಾರ್ತಿಕ್ ಅಯ್ಕೆಯಾದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ