ಕೃಷಿ ಮೇಳದಲ್ಲಿ "ಮನೆಯಲ್ಲಿಯೇ ಕೈತೋಟ ಮತ್ತು ಸಾವಯವ ಗೊಬ್ಬರ ತಯಾರಿ" ವಿಚಾರಗೋಷ್ಠಿ
ಕೊಲ್ನಾಡು: ರಾಜ್ಯಮಟ್ಟದ ಕೃಷಿ ಮೇಳದ ಕೊನೆಯ ದಿನವಾದ ಆದಿತ್ಯವಾರ ನಡೆದ ಎರಡನೇ ವಿಚಾರಗೋಷ್ಟಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ರಾಮಕೃಷ್ಣ ಮಠ ಮಂಗಳೂರು ಇದರ ಏಕಗಮ್ಯಾನಂದ ಸ್ವಾಮೀಜಿ ಅವರು ಮನೆಯಲ್ಲೇ ಕೈತೋಟ ನಿರ್ವಹಣೆ ಹೇಗೆ ಮತ್ತು ಸಾವಯವ ಗೊಬ್ಬರ ತಯಾರಿ ಕುರಿತು ಮಾತಾಡಿದರು.
"ರಾಮಕೃಷ್ಣ ಮಠದ ವತಿಯಿಂದ 2014ರಿಂದ 2019ರವರೆಗೆ ಮಂಗಳೂರಿನಲ್ಲಿ 4000 ಕಾರ್ಯಕರ್ತರ ಜೊತೆ ಸ್ವಚ್ಛತಾ ಕಾರ್ಯಕ್ರಮ ನಡೆಸಿದೆವು. ಅದರ ಜೊತೆ ಮನೆ ಮನೆಗಳಲ್ಲಿ ಜಾಗೃತಿ ನಡೆಸಿದೆವು. 108 ಶಾಲೆಗಳ 13000 ಮಕ್ಕಳನ್ನು ಸೇರಿಸಿ ಕಾರ್ಯಕ್ರಮ ನಡೆಸಿದೆವು. ಸಾವಯವ ಗೊಬ್ಬರ ತಯಾರಿ ಮಾಡಿ ಕೈತೋಟ ನಡೆಸಲು ಪ್ರೇರಣೆ ನೀಡಿದೆವು. ಹಸಿಕಸದ ನಿರ್ವಹಣೆ ವಿಶ್ವದಲ್ಲೇ ಸರಿಯಾಗಿ ನಡೆಯುತ್ತಿಲ್ಲ. ಇದರ ಬಗ್ಗೆ ಪ್ರತಿಯೊಬ್ಬರೂ ಮಾಹಿತಿ ಪಡೆದಾಗ ಸಾವಯವ ಬೆಳೆಗಳನ್ನು ಬೆಳೆಸಲು ಸಾಧ್ಯ. ರೈತ ಅತ್ಯಂತ ಹೆಚ್ಚಿನ ಶ್ರಮ ಪಟ್ಟರೂ ಆತನಿಗೆ ಸಿಗುವ ಲಾಭ ಮಾತ್ರ ಕನಿಷ್ಠವಾಗಿದೆ. ಯಾವುದೇ ರಾಸಾಯನಿಕ ಗೊಬ್ಬರ ಬಳಸುದಕ್ಕಿಂತ ಸಾವಯವ ಗೊಬ್ಬರ ಬಳಕೆ ಸೂಕ್ತ. ಈ ಮೂಲಕ ಹೆಚ್ಚಿನ ಲಾಭ ಗಳಿಸಬಹುದು" ಎಂದರು
ಪ್ರೊ. ಡಾ. ತುಕಾರಾಮ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಕೃಷಿಮೇಳದ ಪದಾಧಿಕಾರಿ ಸೋಮಪ್ಪ ನಾಯಕ್, ರತ್ನಾಕರ ಕುಳಾಯಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ