ವಿವೇಕಾನಂದ ಕಾಲೇಜಿನಲ್ಲಿ 'ಪತ್ರಕರ್ತ ಮೇಷ್ಟ್ರು' ಮೊದಲ ಕಾರ್ಯಕ್ರಮ

Upayuktha
0

ಸ್ಫರ್ಧಾತ್ಮಕ ಜಗದಲ್ಲಿ ವೇಗದ ಕೆಲಸಕ್ಕೆ ಪ್ರಾಶಸ್ತ್ಯ ಹೆಚ್ಚು: ಪವಿತ್ರ ಭಟ್ ಜಿಗಳೆಮನೆ


ಪುತ್ತೂರು ಮಾ. 25: ಸ್ಫರ್ಧಾತ್ಮಕ ಜಗದಲ್ಲಿ ವೇಗದ ಕೆಲಸಕ್ಕೆ ಪ್ರಾಶಸ್ತ್ಯ ಹೆಚ್ಚು. ಉದ್ಯೋಗ ಕ್ಷೇತ್ರದಲ್ಲಿ ಸಮಯಪಾಲನೆ, ಶಿಸ್ತು ಮುಖ್ಯ. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಅನುವಾದ ಎನ್ನುವುದು ಅತ್ಯಗತ್ಯ. ಲೇಖನಗಳಲ್ಲಿ ಉಪಯೋಗಿಸುವ ಬರವಣಿಗೆಗಳು ಆಕರ್ಷಣೀಯವಾಗಿರಬೇಕು ಮತ್ತು ಜನರಿಗೆ ಅರ್ಥವಾಗುವಂತೆ ಇರಬೇಕು. ಪ್ರಸ್ತುತ ಅಂತೆಯೇ ಸಾಮಾಜಿಕ ಜಾಲತಾಣದ ಬಳಕೆಯ ಬಗ್ಗೆ ಜ್ಞಾನವಿರಬೇಕು. ವಿಷಯ ವಸ್ತುಗಳ ಅಭಿವೃದ್ಧಿ ಮಾಡುವುದನ್ನು ಕಲಿತುಕೊಳ್ಳಬೇಕು. ಈ ನಿಟ್ಟಿನಲ್ಲಿ ಭಾವಿ ಪತ್ರಕರ್ತರು ಪೂರ್ವತಯಾರಿ ಮಾಡಿಕೊಂಡಿರಬೇಕು ಎಂದು ಇಲ್ಲಿನ ವಿವೇಕಾನಂದ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಮತ್ತು ಬೆಂಗಳೂರಿನ ಟೈಮ್ಸ್ ಇಂಟರ್ನೆಟ್‌ ಡಿಜಿಟಲ್‌ನ ಪತ್ರಕರ್ತೆ ಪವಿತ್ರ ಭಟ್ ಜಿಗಳೆಮಣೆ ಹೇಳಿದರು.


ಅವರು ಕಾಲೇಜಿನ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಆಶ್ರಯದಲ್ಲಿ ಆಯೋಜಿಸಲಾದ ‘ಪತ್ರಕರ್ತ ಮೇಷ್ಟ್ರು’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ, ಶುಕ್ರವಾರ ಭಾಗವಹಿಸಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.


ಈ ಸಂದರ್ಭ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಭವಿಷ್ಯ ಶೆಟ್ಟಿ  ಮಾತನಾಡಿ, ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕರಾದ ತಾರಾ, ಸೀಮಾ ಪೋನಡ್ಕ, ಭರತ್‌ಕುಮಾರ್ ಕೆ. ಬಿ. ಉಪಸ್ಥಿತರಿದ್ದರು. ದ್ವಿತೀಯ ಸ್ನಾತಕೋತ್ತರ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿ ಜಗದೀಶ ಜೆ ಸ್ವಾಗತಿಸಿ, ವಿದ್ಯಾರ್ಥಿನಿ ಜಯಶ್ರೀ ಆರ್ಯಾಪು ವಂದಿಸಿದರು. ಕಾರ್ಯದರ್ಶಿ ಅರುಣ್‌ ಕಿರಿಮಂಜೇಶ್ವರ ಕಾರ್ಯಕ್ರಮವನ್ನು ನಿರೂಪಿಸಿದರು.


ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ



hit counter

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top